ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಪ್ರಸಿದ್ಧ ಯಾತ್ರಾಕ್ಷೇತ್ರ ಬಿಳಿಗಿರಿ ರಂಗನಾಥ ಶ್ರೀಕ್ಷೇತ್ರದ ಶ್ರೀ ಬಿಳಿಗಿರಿ ರಂಗನಾಥಸ್ವಾಮಿ ಹಾಗೂ ಚಾಮರಾಜನಗರದ ಶ್ರೀ ಚಾಮರಾಜೇಶ್ವರ ದೇವರ ಬ್ರಹ್ಮರಥ ನಿರ್ಮಾಣ ಕಾರ್ಯವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಸುರೇಶ್ ಕುಮಾರ್ ಅವರು ಮಂಗಳವಾರ ಬೆಂಗಳೂರಿನಲ್ಲಿ ಪರಿಶೀಲಿಸಿ ಸಾಧ್ಯವಾದಷ್ಟು ಶೀಘ್ರವೇ ಪೂರ್ಣಗೊಳಿಸಬೇಕೆಂದು ಶಿಲ್ಪಿಗಳಿಗೆ ಸೂಚಿಸಿದರು.
ಕಳೆದ ತಿಂಗಳ 26ರಂದು ಬಿಳಿಗಿರಿ ರಂಗನಾಥ ದೇವಾಲಯಕ್ಕೆ ಭೇಟಿ ನೀಡಿದ್ದ ಸಚಿವರು ದೇವಾಲಯ ಪುನರುಜ್ಜೀವನ ಕಾಮಗಾರಿಗಳ ಪ್ರಗತಿ ಪರಿಶೀಲಿಸಿ ದಾನಿಗಳು ಮತ್ತು ಅಧಿಕಾರಿಗಳ ಸಭೆಯಲ್ಲಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಬ್ರಹ್ಮರಥ ನಿರ್ಮಾಣದ ಪ್ರಗತಿ ಕುರಿತು ಚರ್ಚಿಸಿ ವಿವರ ಪಡೆದುಕೊಂಡಿದ್ದರು.
ಮಂಗಳವಾರ ವಿಧಾನಮಂಡಲದ ಅಧಿವೇಶನದ ಮಧ್ಯೆ ಬಿಡುವು ಮಾಡಿಕೊಂಡು ಬೆಂಗಳೂರಿನ ಮಾಗಡಿ ರಸ್ತೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ರಥದ ನಿರ್ಮಾಣ ಕೆಲಸವನ್ನು ಸಚಿವ ಸುರೇಶ್ ಕುಮಾರ್ ಪರಿಶೀಲಿಸಿದರು.
ಬಿಳಿಗಿರಿ ರಂಗನಾಥಸ್ವಾಮಿ ಮತ್ತು ಚಾಮರಾಜೇಶ್ವರ ರಥೋತ್ಸವ ದಿನಾಂಕಕ್ಕಿAತ ಮೊದಲೇ ರಥದ ನಿರ್ಮಾಣ ಪೂರ್ಣಗೊಳಿಸಬೇಕೆಂದು ಸೂಚಿಸಿದ ಸಚಿವರು ಶಿಲ್ಪಿಗಳೊಂದಿಗೆ ರಥ ನಿರ್ಮಾಣದ ಕಲಾ ಕುಸುರಿ ಕುರಿತು ವಿವರ ಪಡೆದರು.
ಮಾ. 15ರೊಳಗೆ ಬಿಳಿಗಿರಿ ರಂಗನಾಥ ಬ್ರಹ್ಮರಥ ಮತ್ತು ಮೇ 31ರೊಳಗೆ ಚಾಮರಾಜೇಶ್ವರ ಬ್ರಹ್ಮರಥಗಳ ನಿರ್ಮಾಣವನ್ನು ಪೂರ್ಣಗೊಳಿಸಿ ದೇವಾಲಯಕ್ಕೆ ಹಸ್ತಾಂತರಿಸಬೇಕೆAದು ಸಚಿವರು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಚಾಮರಾಜನಗರದ ವಿಭಾಗದ ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ಸುರೇಂದ್ರ ಮತ್ತು ಮುಖ್ಯ ಶಿಲ್ಪಿ ಬಸವರಾಜ ಬಡಿಗೇರ ಮತ್ತಿತರರು ಹಾಜರಿದ್ದರು.