ಮೈಸೂರು: ಕರ್ನಾಟಕ ಶಾಸ್ತ್ರೀಯ ಸಂಗೀತ ಕ್ಷೇತ್ರದ ಆಧಾರಸ್ಥಂಭ ಶ್ರೀ ತ್ಯಾಗರಾಜರು ಎಂದು ಬ್ರಾಹ್ಮಣ ಸಂಘದ ಅಧ್ಯಕ್ಷ ಡಿಟಿ. ಪ್ರಕಾಶ್ ತಿಳಿಸಿದರು.
ನಾದಬ್ರಹ್ಮ ಶ್ರೀ ತ್ಯಾಗರಾಜರ 174ನೇ ಆರಾಧನಾ ಅಂಗವಾಗಿ ನಗರದ ತ್ಯಾಗರಾಜ ರಸ್ತೆಯಲ್ಲಿರುವ ವೇಣುಗೋಪಾಲಸ್ವಾಮಿ ದೇವಸ್ಥಾನದ ಆವರಣದಲ್ಲಿ ಸಾಂಸ್ಕೃತಿಕ ಸಂಗೀತ ಕ್ಷೇತ್ರದಲ್ಲಿ ಶ್ರೀ ತ್ಯಾಗರಾಜರು ನುಡಿನಮನ ಕಾರ್ಯಕ್ರಮವನ್ನು ಮೈಸೂರು ಬ್ರಾಹ್ಮಣ ಯುವ ವೇದಿಕೆ ವತಿಯಿಂದ ಮಂಗಳವಾರ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಡಿಟಿ. ಪ್ರಕಾಶ್ ಅವರು ಮಾತನಾಡಿ, ಸಂಗೀತ ಕ್ಷೇತ್ರದಲ್ಲಿ ಧಾರ್ಮಿಕತೆಯ ಮನೋಭಾವ ಬೆಳಸುವಲ್ಲಿ ತ್ಯಾಗರಾಜರ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು.
ಕಲಾಪ್ರದರ್ಶನ ಅಂದರೆ ಸಂಭಾವನೆ ಮುಖ್ಯ ಎನ್ನುವ ಇತ್ತಿಚೀನ ದಿನದಲ್ಲಿ ಆರಾಧ್ಯ ದೈವ ಶ್ರೀರಾಮನ ಪ್ರೇರಣೆಯಿದ್ದರೆ ಮಾತ್ರ ಕೀರ್ತನೆ ಹಾಡುಗರಿಕೆ ಪ್ರದರ್ಶನ ಎನ್ನುತ್ತಿದ್ದರು ತ್ಯಾಗರಾಜರು ಎಂದು ಅವರು ತಿಳಿಸಿದರು.
ಮುಂದಿನ ದಿನದಲ್ಲಿ ತ್ಯಾಗರಾಜ ಆರಾಧನಾ ಕಾರ್ಯಮವನ್ನು ತ್ಯಾಗರಾಜ ರಸ್ತೆಯಲ್ಲೇ ನೂರಾರು ಕಲಾವಿದರ ಸಮ್ಮುಖದಲ್ಲಿ ಆಯೋಜಿಸಲಾಗುವುದು ಎಂದು ಅವರು ತಿಳಿಸಿದರು.
ನಂತರ ಕಾಂಗ್ರೆಸ್ ಯುವ ಮುಖಂಡ ಎನ್. ಎಂ. ನವೀನ್ ಕುಮಾರ್ ಮಾತನಾಡಿ, ಕಳೆದ ನೂರಾರು ವರುಷಗಳ ಹಿಂದೆ ಮೈಸೂರು ಸಂಸ್ಥಾನದ ತ್ಯಾಗರಾಜ ರಸ್ತೆಯ ಸುತ್ತಮುತ್ತಲಿನ ಪ್ರದೇಶದ ಇತಿಹಾಸ ನೋಡುವುದಾದರೆ ವಿದ್ವಾಂಸರು ಅರಮನೆ ಪಂಡಿತರು ಪಕ್ಕವಾದ್ಯ ಕಲಾವಿದರು ಹೆಚ್ಚಿದ್ದರು ಆದರೆ ಅದನ್ನ ಉಳಿಸಿ ಬೆಳಸುವಲ್ಲಿ ಸರ್ಕಾರಗಳು ಇಂತವರ ಮಹನೀಯ ಜಯಂತಿ ಸ್ಮರಣೆಯ ದಿನದಂದು ಅರ್ಥಪೂರ್ಣವಾಗಿ ಆಚರಿಸಬೇಕು ಎಂದರು.
ನಂತರ ಬಿಜೆಪಿ ನಗರಾಧ್ಯಕ್ಷ ಟಿಎಸ್. ಶ್ರೀವತ್ಸ ಮಾತನಾಡಿ, ಸಂಗೀತ ಕ್ಷೇತ್ರದಲ್ಲಿ ಧರ್ಮಿಕತೆಯ ಭಕ್ತಿ ಬೆಳೆಯಲು ತ್ಯಾಗರಾಜರ ಕೀರ್ತನೆಗಳು ಹೆಚ್ಚು ಪರಿಣಾಮಕಾರಿಯಾಗಿದೆ. ದೇಶ ವಿದೇಶದಲ್ಲೂ ಸಹ ತ್ಯಾಗರಾಜರ ಆರಾಧನಾ ಪಂಚರತ್ನ ಕೀರ್ತನೆಗಳ ಸಮೂಹ ಗಾಯನಕ್ಕೆ ಸಹಸ್ರಾರು ಮಂದಿ ಸೇರುತ್ತಾರೆ ಎಂದರು
ಬಣ್ಣ ಮತ್ತು ಅರಗು ನಿಗಮ ಮಂಡಳಿ ಅಧ್ಯಕ್ಷ ಎನ್ ಫಣೀಶ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ಎಚ್ ಜಿ ಗಿರಿಧರ್, ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಮುಳ್ಳೂರು ಗುರುಪ್ರಸಾದ್, ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ಅಜಯ್ ಶಾಸ್ತ್ರಿ, ಗುರುರಾಜ್ ಶೆಣೈ, ಸುಚೀಂದ್ರ, ಚಕ್ರಪಾಣಿ, ಅಶ್ವಿನ್ ಕೌಂಡಿನ್ಯ, ಮೈಕ್ ಚಂದ್ರು, ರಾಜೇಶ್ ಹಾಗೂ ಇನ್ನಿತರರು ಈ ಸಂದರ್ಭದಲ್ಲಿ ಹಾಜರಿದ್ದರು.