ಮಾನವೀಯತೆ ಮೆರೆದ ಆಟೋ ಚಾಲಕ

ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ಆಟೋವೊಂದರಲ್ಲಿ ನಗ-ನಾಣ್ಯ ಇದ್ದ ಬ್ಯಾಗ್ ಬಿಟ್ಟು ಹೋಗಿದ್ದನ್ನು ಚಾಲಕ ಮಹಿಳೆಗೆ ಹಿಂದಿರುಗಸಿ ಮಾನವಿಯತರ ಮರೆದಿದ್ದಾರೆ.
ಆಟೋವೊಂದರಲ್ಲಿ ಚಿನ್ನದ ಓಲೆ, ಮೊಬೈಲ್ ಹಣ ಸಮೇತ ವ್ಯಾನಿಟಿ ಬ್ಯಾಗ್ ಕಳೆದುಕೊಂಡಿದ್ದ ಮಹಿಳೆಗೆ ಆಟೊ ಚಾಲಕ ತಲುಪಿಸಿ ಮಾನವೀಯತೆ ಮೆರೆದಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.
ಚಾಮರಾಜನಗರ ಜಿಲ್ಲೆಯ ಹುರುಳಿನಂಜನಪುರದ ಅಭಿಲಾμï ಎಂಬ ಚಾಲಕ ತಮ್ಮ ಆಟೊದಲ್ಲಿ ಪ್ರಯಾಣಿಕರೊಬ್ಬರು ಬಿಟ್ಟು ಹೋಗಿದ್ದ ವ್ಯಾನಿಟಿ ಬ್ಯಾಗನ್ನ ಪಟ್ಟಣ ಠಾಣೆಗೆ ತಲುಪಿಸಿದ್ದಾರೆ.
ಆಟೊದಲ್ಲಿ ಪ್ರಯಾಣಿಸುತ್ತಿದ್ದ ಮೈಸೂರಿನ ಮಹಿಳೆ ಸಾವಿತ್ರಿ ನಗರದ ಹೌಸಿಂಗ್ ಬೋರ್ಡ್‍ನಲ್ಲಿದ್ದ ತಮ್ಮ ಮಗನ ಮನೆಗೆ ಬಂದು ಡಿವೈಸ್ಪಿ ಕಚೇರಿ ಸಮೀಪ ಆಟೋದಿಂದ ಇಳಿಯುವಾಗ ವ್ಯಾನಿಟಿ ಬ್ಯಾಗ್ ಮರೆತು ಹೋಗಿದ್ದರು.
ಕೂಡಲೆ ಬ್ಯಾಗ್ ಕಳೆದುಕೊಂಡ ಪ್ರಯಾಣಿಕರು ಠಾಣೆಗೆ ಬಂದು ತಮ್ಮ ನೋವನ್ನ ಹೇಳಿಕೊಳ್ಳುತ್ತಿದ್ದಂತೆಯೆ ಪಟ್ಟಣ ಠಾಣಾ ಪೆÇಲೀಸರು ಕಾರ್ಯ ಪ್ರವೃತ್ತರಾದರು.
ಅμÉ್ಟೂತ್ತಿಗಾಗಲೆ ಆಟೋ ಚಾಲಕ ವ್ಯಾನಿಟಿ ಬ್ಯಾಗ್ ತಂದು ಪೊಲೀಸರಿಗೆ ಒಪ್ಪಿಸಿದ್ದರು.
ಪಟ್ಟಣ ಠಾಣಾ ಇನ್ಸ್ ಪೆಕ್ಟರ್ ಮಹೇಶ್, ಅಪರಾಧ ವಿಭಾಗದ ಎಎಸ್ ಐ ಸಿದ್ದರಾಜನಾಯಕ್, ಮಹದೇವಸ್ವಾಮಿ, ಕೃಷ್ಣಮೂರ್ತಿ, ಶಂಕರ್ ಅವರ ಸಮಕ್ಷಮದಲ್ಲಿ ನಗ-ನಾಣ್ಯ ಇದ್ದ ಬ್ಯಾಗ್ ಅನ್ನು ನೀಡಲಾಯಿತು.
ವ್ಯಾನಿಟಿ ಬ್ಯಾಗ್ ನಲ್ಲಿ ನಗದು 2500 ರೂ, ಎರಡು ಮೊಬೈಲ್ (ಅಂದಾಜು 20000 ರೂ ), ಒಂದು ಜೊತೆ ಓಲೆ ಇತ್ತು.