ಮೈಸೂರು: ಗೆಡ್ಡೆ ಗೆಣಸು ನಮ್ಮ ನಿಸರ್ಗದ ಅಮೂಲ್ಯ ಸಂಪತ್ತು ಎಂದು ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.
ನಗರದ ನಂಜರಾಜ ಬಹದ್ದೂರ್ ಛತ್ರದಲ್ಲಿ ಸಹಜ ಸಮೃದ್ಧ ಮತ್ತು ರೋಟರಿ ಕ್ಲಬ್ ಮೈಸೂರು ಪಶ್ಚಿಮದ ಆಶ್ರಯದಲ್ಲಿ
ಇಂದಿನಿಂದ ಆರಂಭವಾದ ಮೂರು ದಿನಗಳ ಗೆಡ್ಡೆ ಗೆಣಸುಗಳ ಹಬ್ಬಕ್ಕೆ ಚಾಲನೆ ನೀಡಿ ಯದುವೀರ್ ಮಾತನಾಡಿದರು.
ಅನ್ನ ಸಂಸ್ಕøತಿಯ ರಾಯಭಾರಿ. ಅದನ್ನು ಸಂರಕ್ಷಿಸದ ಹೊರತು ಭವಿಷ್ಯವಿಲ್ಲ ಎಂದು ಯದುವೀರ ಅಭಿಪ್ರಾಯಪಟ್ಟರು.
ನಾವು ತಿನ್ನುವ ಆಹಾರಕ್ಕೂ, ಆರೋಗ್ಯಕ್ಕೂ ನೇರ ಸಂಬಂಧವಿದೆ. ನಿಸರ್ಗದತ್ತವಾಗಿ ಬೆಳೆಯುವ ಗೆಡ್ಡೆ ಗೆಣಸು ಸೇವಿಸುವುದರಿಂದ ನಮ್ಮ ಆರೋಗ್ಯ ವೃದ್ಧಿಯಾಗುತ್ತದೆ. ರೋಗರುಜಿನಗಳನ್ನು ಎದುರಿಸುವ ಶಕ್ತಿ ಬರುತ್ತದೆ ಎಂದು ಅವರು ಹೇಳಿದರು.
ನವದೆಹಲಿಯ ಅಗ್ರಿಕಲ್ಚರ್ ವಲ್ರ್ಡ್ ನ ಸಂಪಾದಕಿ ಡಾ. ಲಕ್ಷ್ಮಿ ಉನ್ನಿತಾನ್ ‘ಮರೆತು ಹೋದ ಆಹಾರ ಕ್ಯಾಲೆಂಡರ್’ ಬಿಡುಗಡೆ ಮಾಡಿದರು.
ಗೆಡ್ಡೆ ಗೆಣಸುಗಳ ಸಂರಕ್ಷಣೆಯಲ್ಲಿ ಗಣನೀಯ ಸಾಧನೆ ಮಾಡಿದ ಹೆಚ್.ಡಿ.ಕೋಟೆಯ ಎಲ್.ಸಿ.ಚನ್ನರಾಜು, ಪಿರಿಯಾಪಟ್ಟಣದ ಅಡಗೂರಿನ ಸುಪ್ರೀತ್, ಹೆಚ್.ಡಿ.ಕೋಟೆಯ ಮಜ್ಜನಕುಪ್ಪೆ ಗಿರಿಜನ ಹಾಡಿಯ ದೇವಮ್ಮ ಮತ್ತು ವಯನಾಡಿನ ಶಾಜಿಯವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ನ ಮೈಸೂರು ಪಶ್ಚಿಮದ ಅಧ್ಯಕ್ಷ ರೊಟೇರಿಯನ್ ಡಾ.ರಾಘವೇಂದ್ರ ಪ್ರಸಾದ್ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪ್ರಾದೇಶಿಕ ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ ಧಾರವಾಡದ ಪ್ರಧಾನ ಸಂಶೋಧಕ ಡಾ.ಅರುಣ್ ಕುಮಾರ್ ಬಾವಿದೊಡ್ಡಿ ಭಾಗವಹಿಸಿದ್ದರು.
ಕೃಷಿ ಕಲಾದ ಸೀಮಾ ಪ್ರಸಾದ್, ರೊಟೆರಿಯನ್ ದಿನೇಶ್ ಕುಮಾರ್ ಡಿ.ಕೆ, ಅಖಿಲ ಭಾರತ ಗೆಡ್ಡೆ ಗೆಣಸು ಸಮನ್ವಯ ಸಂಶೋಧನಾ ಯೋಜನೆ ಪ್ರಧಾನ ಸಂಶೋಧಕ ಇಮಾಮ್ ಸಾಹೇಬ ಜತ್ತ ಉಪಸ್ಥಿತರಿದ್ದರು.