ಮೈಸೂರು: ಸಚಿವರಾದವರು ದೇವಸ್ಥಾನಗಳಿಗೆ ಹೋಗುತ್ತಾರೆ. ಗುದ್ದಲಿ ಪೂಜೆಗಳಿಗೆ ಹೋಗುತ್ತಾರೆ. ಆದರೆ, ಕಸ ನಿರ್ವಹಣಾ ಘಟಕಕ್ಕೆ ಭೇಟಿ ನೀಡಿದ್ದಾರೆಂದರೆ ಅವರ ಬದ್ಧತೆ ಹಾಗೂ ಇಚ್ಛಾಶಕ್ತಿಯನ್ನು ಅರ್ಥಮಾಡಿಕೊಳ್ಳಬೇಕು. ಇದು ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರ ಕಾರ್ಯವೈಖರಿಯನ್ನು ಸೂಚಿಸುತ್ತದೆ ಎಂದು ಶೂನ್ಯ ಘನತ್ಯಾಜ್ಯ ನಿರ್ವಹಣಾ ಘಟಕ ಒಕ್ಕೂಟದ ಅಧ್ಯಕ್ಷರಾದ ಡಿ. ಮಾದೇಗೌಡ ಹೇಳಿದರು.
ಕುಂಬಾರಕೊಪ್ಪಲಿನಲ್ಲಿರುವ ಶೂನ್ಯ ಘನತ್ಯಾಜ್ಯ ನಿರ್ವಹಣಾ ಘಟಕಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಭಾನುವಾರ ಭೇಟಿ ನೀಡಿದ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಮಾದೇಗೌಡ ಅವರು, ಇಂತಹ ಕ್ರಿಯಾಶೀಲ ಉಸ್ತುವಾರಿ ಸಚಿವರು ಮೈಸೂರು ಜಿಲ್ಲೆಗೆ ಸಿಕ್ಕಿರುವುದು ನಮ್ಮ ಅದೃಷ್ಟ ಎಂದು ಹೇಳಿದರು.
ಮೊದಲು ಸ್ವಚ್ಛತೆ ವಿಷಯದಲ್ಲಿ ಮೈಸೂರು ನಂಬರ್ ಒನ್ ಸ್ಥಾನದಲ್ಲಿ ಬರುತ್ತಿತ್ತು. ಆದರೆ, ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಎರಡು, ಮೂರನೇ ಸಹಿತ ವಿವಿಧ ಸ್ಥಾನಗಳು ಲಭಿಸುತ್ತಾ ಬಂದಿದೆ. ಆದರೆ, 2021ರ ಈ ವರ್ಷ ಕೇಂದ್ರದಿಂದ ಕೊಡಮಾಡುವ ಸ್ವಚ್ಛತಾ ನಗರಿಯ ನಂಬರ್ 1 ಗರಿ ಖಂಡಿತವಾಗಿಯೂ ಮೈಸೂರಿಗೆ ಲಭಿಸಲಿದೆ. ಕಾರಣ ನಮಗೆ ಕ್ರಿಯಾಶೀಲ ನಾಯಕತ್ವ ಹಾಗೂ ಕಾಳಜಿಯುಳ್ಳ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಲಭಿಸಿದ್ದಾರೆ ಎಂದು ತಿಳಿಸಿದರು.
ಮೈಸೂರು ನಾಗರಿಕರಿಂದ ಒಣ ಕಸ ಹಾಗೂ ಹಸಿ ಕಸಗಳ ಸಂಗ್ರಹಣೆ ಬಳಿಕವೂ ಸರಿಯಾಗಿ ಅವುಗಳ ಬಿಭಜನೆಯಾಗಿರುವುದಿಲ್ಲ. ಈ ಕಾರಣದಿಂದ ಇಲ್ಲಿ ಪುನಃ ಸಿಬ್ಬಂದಿಯಿಂದ ಕಸವನ್ನು ವಿಂಗಡಿಸಲಾಗುವುದು. ಬಳಿಕ ಹಸಿಕಸವನ್ನು ಗೊಬ್ಬರವಾಗಿ ಪರಿವರ್ತಿಸಿ ನೇರವಾಗಿ ರೈತರಿಗೆ ಮಾರಾಟ ಮಾಡಿದರೆ, ಒಣ ಕಸವನ್ನು ಸುಮಾರು 30ರಿಂದ 35 ವಿಭಾಗಗಳಾಗಿ (ಬಾಟಲಿ, ಪ್ಲಾಸ್ಟಿಕ್, ಇಲೆಕ್ಟ್ರಾನಿಕ್ ಸಾಮಗ್ರಿಗಳು ಸೇರಿ ಹಲವು ವಸ್ತುಗಳು) ವಿಂಗಡಿಸಿ ಗುಜರಿಗಳಿಗೆ ಉತ್ತಮ ದರದಲ್ಲಿ ಮಾರಾಟ ಮಾಡಲಾಗುತ್ತದೆ. ಒಟ್ಟಿನಲ್ಲಿ ಕಸವನ್ನು ಸಹ ಕಾಸಿನಂತೆ ನೋಡಬಹುದಾಗಿದ್ದು, ಹಣ ಗಳಿಸಬಹುದು ಎಂಬ ಮಾಹಿತಿಯನ್ನು ಒಕ್ಕೂಟದ ಅಧ್ಯಕ್ಷರಾದ ಡಿ. ಮಾದೇಗೌಡ ಅವರು ಸಚಿವರಿಗೆ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಮಾತನಾಡಿ, ಮಾದೇಗೌಡ ಅವರು ಘನತ್ಯಾಜ್ಯ ನಿರ್ವಹಣೆಯನ್ನು ಅತ್ಯುತ್ತಮ ಮಟ್ಟದಲ್ಲಿ ಕೊಂಡೊಯ್ಯುತ್ತಿದ್ದಾರೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ತಿಳಿಸಿದರು.
ಕೆಲವರು ಎಲ್ಲೆಂದರಲ್ಲಿ ಕಸ, ತ್ಯಾಜ್ಯ, ಡಬ್ರೀಸ್ ಗಳನ್ನು ಎಸೆಯುತ್ತಿದ್ದಾರೆ. ಇಂತಹ ಕೆಲಸ ಮಾಡುವವರನ್ನು ಹಿಡಿದು ಜೈಲು ಶಿಕ್ಷೆ ನೀಡಿ, ದಂಡ ಕಟ್ಟಿಸಿಕೊಂಡರೆ ಅದಾಗಿಯೇ ಕಡೆಮೆಯಾಗುತ್ತದೆ. ಇದಕ್ಕೋಸ್ಕರ ಪೆÇಲೀಸ್ ಆಯುಕ್ತರಿಗೆ ಹಾಗೂ ಕಾಪೆರ್Çೀರೇಶನ್ ಆಯುಕ್ತರಿಗೆ ಸೂಚನೆ ಕೊಡಲಾಗಿದ್ದು, ಸಾರ್ವಜನಿಕರೂ ಸಹಕಾರ ಕೊಡಬೇಕಿದೆ ಎಂದು ಸೋಮಶೇಖರ್ ತಿಳಿಸಿದರು.
ಕಾಪೆರ್Çೀರೆಟರ್ ಆದವರು ಜಾಗವನ್ನು ಗುರುತಿಸಿ ಕಸ ವಿಲೇವಾರಿ ಬಗ್ಗೆ ನೋಡಿಕೊಂಡು ಸ್ವಚ್ಛತೆಗೆ ಆದ್ಯತೆ ಕೊಡುವ ಕೆಲಸವನ್ನು ಮಾಡಬೇಕು ಎಂದು ತಿಳಿಸಿದರು.
ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ, ಯಾವುದೇ ಪಕ್ಷದವರಿರಲಿ, ಯಾವುದೇ ಶಾಸಕರ ವಿಧಾನಸಭಾ ಕ್ಷೇತ್ರಗಳಿರಲಿ ಪಕ್ಷಭೇದ ತೋರದೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಒಟ್ಟಾರೆ ಮೈಸೂರು ಜಿಲ್ಲೆಯ ಅಭಿವೃದ್ಧಿಗೆ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಕೆಲಸ ಮಾಡುತ್ತಿದ್ದಾರೆ. ಸ್ವಚ್ಛತೆಗೆ ಮೈಸೂರು ಮತ್ತೊಮ್ಮೆ ನಂಬರ್ 1 ಆಗಲಿದೆ ಎಂದು ತಿಳಿಸಿದರು.
1200 ಮನೆಗಳಲ್ಲಿ ಕಸ ಸಂಗ್ರಹಣೆ ಮಾಡಲಾಗುತ್ತಿದೆ. ಪಾಲಿಕೆಯ 60 ನೌಕರರಿಗೆ ನಗರ ಪಾಲಿಕೆ ವೇತನ ನೀಡಿದರೆ, ಕಸ ಸಂಗ್ರಹಣೆ ವಾಹನಗಳ ನಿರ್ವಹಣೆಯನ್ನು ಶೂನ್ಯ ಘನತ್ಯಾಜ್ಯ ನಿರ್ವಹಣಾ ಘಟಕ ನೋಡಿಕೊಳ್ಳುತ್ತಿದೆ. ಈ ಮೂಲಕ ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತಿದೆ ಎಂದು ಫೆಡರೇಶನ್ ಆಫ್ ಮೈಸೂರು ಸಿಟಿ ಕಾಪೆರ್Çೀರೇಶನ್ ವಾರ್ಡ್ ಪಾರ್ಲಿಮೆಂಟ್ ನ ನಾಗಪತಿ ಅವರು ಮಾಹಿತಿ ನೀಡಿದರು.
ಇಡೀ ಮೈಸೂರು ನಗರದ ಕಸ ವಿಂಗಡಣೆ, ನಿರ್ವಹಣೆ ಹಾಗೂ ಜನರ ಜವಾಬ್ದಾರಿಗಳ ಬಗೆಗಿನ ಸಂಪೂರ್ಣ ಮಾಹಿತಿಯುಳ್ಳ “ಸಮುದಾಯದ ಸಹಭಾಗಿತ್ವದಲ್ಲಿ ಘನತ್ಯಾಜ್ಯ ನಿರ್ವಹಣೆ” ಕೈಪಿಡಿಯನ್ನು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್, ಪೆÇಲೀಸ್ ಆಯುಕ್ತ ಚಂದ್ರಗುಪ್ತ, ಕಾಪೆರ್Çೀರೇಶನ್ ಆಯುಕ್ತ ಗುರುದತ್ತ ಹೆಗಡೆ, ಮುಡಾ ಆಯುಕ್ತ ನಟೇಶ್ ಸೇರಿದಂತೆ ಇತರ ಪ್ರಮುಖರು ಹಾಜರಿದ್ದರು.