ಮಾರ್ಚ್ ನಿಂದ ರಾಜ್ಯಾದ್ಯಂತ ಪರ್ವ ಕಾಲ -ಅರವಿಂದ ಲಿಂಬಾವಳಿ

ಮೈಸೂರು: ಎಸ್.ಎಲ್.ಬೈರಪ್ಪನವರ ಪರ್ವ ನಾಟಕದ ಪರ್ವ ಮೈಸೂರಿನಿಂದ ಪ್ರಾರಂಭವಾಗಿ ರಾಜ್ಯದ್ಯಂತ ನಡೆಯಲಿದೆ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಚಿವ ಅರವಿಂದ ಲಿಂಬಾವಳಿ ಅವರು ಹೇಳಿದರು.
ಸಾಹಿತಿ ಎಸ್.ಎಲ್.ಭೈರಪ್ಪ ಅವರನ್ನು ನಗರದ ನಿವಾಸಲ್ಲಿ ಭೇಟಿ ಮಾಡಿ ಅವರನ್ನು ಸನ್ಮಾನಿಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ನಮ್ಮ ರಾಜ್ಯದಲ್ಲಿ ಹಿರಿಯ ಸಾಹಿತಿಗಳಾದ ಎಸ್.ಎಲ್.ಭೈರಪ್ಪನವರು ನನ್ನ ಮಾರ್ಗದರ್ಶಕರು. ಅವರ ಸಲಹೆ ಸೂಚನೆಗಳನ್ನು ಹಾಗೂ ಆರ್ಶಿವಾದಗಳನ್ನು ಪಡೆಯಲು ಬಂದಿದ್ದೇನೆ ಎಂದು ಹೇಳಿದರು.
ಮಾ. 9ರಿಂದ ಶುರುವಾಗುವ ಪರ್ವ ನಾಟಕಕ್ಕಾಗಿ ಮೊದಲನೆ ಕಂತಿನಲ್ಲಿ 50 ಲಕ್ಷ ಬಿಡುಗಡೆ ಮಾಡಲಾಗಿದ್ದು, ಆದಷ್ಟು ಬೇಗ ಉಳಿದ ಹಣವನ್ನು ವರ್ಗಾವಣೆ ಮಾಡುವುದಾಗಿ ತಿಳಿಸಿದರು.
ಎಸ್.ಎಲ್.ಭೈರಪ್ಪ ಅವರ ಹುಟ್ಟೂರಾದ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಸಂತೇಶಿವರದಲ್ಲಿ ಸಾಹಿತ್ಯಾಸಕ್ತರ ಕೇಂದ್ರ ತೆರೆಯುವ ನಿಟ್ಟಿನಲ್ಲಿ ಈಗಾಗಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ 5 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ. ಇದರ ಯೋಜನೆ ಕುರಿತು ಅವರ ನಿವಾಸದಲ್ಲಿ ಚರ್ಚೆ ನಡೆಸಲಾಯಿತು ಎಂದರು.
ಭೈರಪ್ಪ ಅವರನ್ನೇ ಸ್ಥಳಕ್ಕೆ ಕರೆದೊಯ್ದು ಯಾವ ಯಾವ ಕೆಲಸವಾಗಬೇಕು, ಈಗ ಮಾಡಿರುವ ಯೋಜನೆಯಲ್ಲಿ ಮಾರ್ಪಾಡುಗಳೇನು ಎಂಬುದರ ಬಗ್ಗೆಯೂ ಮಾರ್ಗದರ್ಶನ ಪಡೆಯಲಾಗುವುದು ಎಂದವರು ತಿಳಿಸಿದರು.
ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಹೆಚ್. ಚೆನ್ನಪ್ಪ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಟಿ. ಹಿರಾಲಾಲ್, ಬಣ್ಣ ಮತ್ತು ಅರಗು ಕಾರ್ಖಾನೆ ಅಧ್ಯಕ್ಷ ಫಣೀಶ್ ಸೇರಿದಂತೆ ಇತರರು ಹಾಜರಿದ್ದರು.