ಜೆಡಿಎಸ್ ನ್ನು ಕಾಂಗ್ರಸ್ ನವರು ರಿಜೆಕ್ಟ್ ಮಾಡಿದ್ದಾರೆ; ನಾವು ಅಕ್ಸೆಪ್ಟ್ ಮಾಡಿಕೊಳ್ಳುತ್ತೇವೆ -ಎಸ್.ಟಿ.ಎಸ್.

ಮೈಸೂರು: ನಾಳೆ ಅಥವಾ ನಾಳಿದ್ದು, ಮೇಯರ್-ಉಪಮೇಯರ್ ಸ್ಥಾನಕ್ಕೆಮೀಸಲಾತಿ ಪ್ರಕಟ ಮಾಡುತ್ತೇವೆ ಎಂದು ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಹೇಳಿದರು.
ನಗರದಲ್ಲಿ ಸೋಮವಾರ ಸಚಿವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಮೀಸಲಾತಿ ವಿಚಾರದಲ್ಲಿ ರಾಜ್ಯಾದ್ಯಂತ ಸ್ವಲ್ಪ ಸಮಸ್ಯೆ ಇತ್ತು. ಮತ್ತೆ ಅಧಿವೇಶನ ಕೂಡ ಇತ್ತು. ಹೀಗಾಗಿ ಮೀಸಲಾತಿ ಪ್ರಕಟವಾಗುವುದು ತಡವಾಗಿದೆ. ನಾಳೆ ಅಥವಾ ನಾಳಿದ್ದು, ಘೋಷಣೆ ಆಗುತ್ತಿದೆ ಎಂದರು.
ಜೆಡಿಎಸ್ ಜತೆ ಮೈತ್ರಿ ಬಗ್ಗೆ ಸ್ಪಷ್ಟನೆ ನೀಡಿದ ಸಚಿವ ಎಸ್.ಟಿ. ಸೋಮಶೇಖರ್, ಜೆಡಿಎಸ್ ಜೊತೆ ಹೋಗುವುದಿಲ್ಲ ಎಂದು ಕಾಂಗ್ರೆಸ್ ನವರು ರಿಜೆಕ್ಟ್ ಮಾಡಿದ್ದಾರೆ. ಆದರೆ ನಾವು ಜೆಡಿಎಸ್ ನವರನ್ನ ಅಕ್ಸೆಪ್ಟ್ ಮಾಡಿಕೊಳ್ಳುತ್ತೇವೆ ಎಂದು ಹೇಳಿದರು.
ಮೈಮುಲ್ ಚುನಾವಣೆಯಲ್ಲಿ ಯಾರನ್ನ ಕಣಕ್ಕಿಳಿಸಬೇಕೆಂದು ಬಿಜೆಪಿ ಕೋರ್ ಕಮಿಟಿ ತೀರ್ಮಾನ ಮಾಡುತ್ತೆ ಎಂದು ಸಚಿವರು ತಿಳಿಸಿದರು.
ಇನ್ನೂ ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಚುನಾವಣೆಗೆ ಮಾರ್ಚ್ ನಂತರ ಕಾರ್ಯಕ್ರಮಗಳನ್ನು ರೂಪಿಸುತ್ತೇವೆ. ಅದಕ್ಕೆ ಬೇಕಾದ ಎಲ್ಲಾ ರೀತಿಯ ಸಿದ್ದತೆಗಳನ್ನ ಮಾಡಿಕೊಳ್ಳುತ್ತಿದ್ದೇವೆ. ಸದ್ಯಕ್ಕೆ ರಾಜ್ಯ ಬಜೆಟ್ ಇದೆ. ಮೈಸೂರು ಅಭಿವೃದ್ಧಿಗಾಗಿ ಏನೆಲ್ಲಾ ಬೇಕು ಎಂಬುವುದರ ಬಗ್ಗೆ ನಮ್ಮ ಪಕ್ಷದವರ ಜೊತೆ ಚರ್ಚೆ ಮಾಡಲು ಸಭೆ ಕರೆದಿದ್ದೇನೆ ಎಂದು ಎಸ್.ಟಿ ಸೋಮಶೇಖರ್ ತಿಳಿಸಿದರು.