ಮೈಸೂರು: ಮೈಸೂರು ವಿಶ್ವವಿದ್ಯಾಲಯದ ಫೈನ್ ಆಟ್ರ್ಸ್ ಕಾಲೇಜಿನ ಸೂಪರಿಂಟೆಂಡೆಂಟ್ ರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಮೈಸೂರು ವಿಶ್ವವಿದ್ಯಾಲಯದ ಫೈನ್ ಆಟ್ರ್ಸ್ ಕಾಲೇಜಿನಲ್ಲಿ ಸೂಪರಿಂಟೆಂಡೆಂಟ್ ಆಗಿದ್ದ ಮಾಯಾದೇವಿ (55) ಎಂಬುವರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ನಗರದ ಸರಸ್ವತಿಪುರಂನ ಅಂಚೆ ಕಛೇರಿ ಸಮೀಪದ ಮನೆಯೊಂದರಲ್ಲಿ ಮಾಯಾದೇವಿ ಒಬ್ಬರೇ ವಾಸವಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮಾಯಾದೇವಿ ಅವರ ಸಾವಿಗೆ ಕಾರಣ ತಿಳಿದು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಮಾಯದೇವಿ ಅವರು 22 ವರ್ಷಗಳ ಹಿಂದೆ ವಿವಾಹವಾಗಿ ಮದುವೆಯಾದ 3 ವರ್ಷದಲ್ಲಿಯೇ ಪತಿಯಿಂದ ವಿಚ್ಛೇದನ ಪಡೆದು ಒಬ್ಬರೇ ವಾಸವಾಗಿದ್ದರು. ಇವರಿಗೆ ಮಕ್ಕಳಿರಲಿಲ್ಲ.
ಸೋಮವಾರ ಸಂಜೆ ಮೃತರ ಸಂಬಂಧಿಕರೊಬ್ಬರು ಅವರ ಮನೆಗೆ ಬಂದಾಗ ಮಾಯಾದೇವಿ ಅವರು ಸಾವನ್ನಪಿರುವುದು ಪತ್ತೆ ಆಗಿದೆ.
ಸರಸ್ವತಿಪುರಂ ಪೆÇಲೀಸ್ ಠಾಣೆ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.