ಮೈಸೂರು: ನಗರದ ನ್ಯೂ ಸಯ್ಯಾಜಿರಾವ್ ರಸ್ತೆಯಲ್ಲಿರುವ ಲಯನ್ಸ್ ಜೀವಧಾರ ರಕ್ತನಿಧಿ ಕೇಂದ್ರದ ಬಳಿ ಲಯನ್ಸ್ ಜೀವಧಾರ ಐ.ಎಂ.ಎ ಆಟೋ ನಿಲ್ದಾಣವನ್ನು ಬಿಜೆಪಿ ವೈದ್ಯಕೀಯ ಪ್ರಕೋಷ್ಠದ ಸಂಚಾಲಕ ಜೀವಧಾರ ಗಿರೀಶ್ ರವರು ಉದ್ಘಾಟಸಿದರು.
ಜೀವಧಾರ ಗಿರೀಶ್ ರವರು ಮಾತನಾಡಿ, ಸಾರ್ವಜನಿಕರು ತಮ್ಮ ಆರೋಗ್ಯ ಕಾಪಾಡಲು ವೈದ್ಯರ ಮಾರ್ಗದರ್ಶನ, ಔಷಧಿ, ಚಿಕಿತ್ಸೆ, ಆರೋಗ್ಯ ತಪಾಸಣೆ ಮಾಡಿಸಲು ಕೆ.ಆರ್ ಆಸ್ಪತ್ರೆ, ಆಯುರ್ವೇದ ಆಸ್ಪತ್ರೆ, ಮೆಡಿಕಲ್ ಕಾಲೇಜು ಸೇರಿದಂತೆ ಇರ್ವಿನ್ ರಸ್ತೆಯ ಸುತ್ತಮುತ್ತಲಿನ ಡಯೋಗ್ನಾಸ್ಟಿಕ್ ಲ್ಯಾಬ್ ಗಳಿಗೆ ಮಕ್ಕಳು, ಮಹಿಳೆಯರು ಹಿರಿಯ ನಾಗರೀಕರು ಬರುತ್ತಾರೆ. ತಮ್ಮ ಸ್ವಂತ ಸ್ಥಳಕ್ಕೆ ತೆರಳಲು ಸಾರಿಗೆ ವ್ಯವಸ್ಥೆಯ ಅವಶ್ಯಕವಿತ್ತು ಇದನ್ನ ಮನಗೊಂಡು ಹತ್ತಾರು ಆಟೋ ಚಾಲಕರ ತಂಡ ಮಾಡಿ ಜೀವಧಾರ ಆಟೋ ನಿಲ್ದಾಣ ಸ್ಥಾಪಿಸಲಾಗಿದೆ ಎಂದರು.
ನಂತರ ಕರ್ನಾಟಕ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸದಸ್ಯರಾದ ರೇಣುಕಾ ರಾಜ್ ರವರು ಮಾತನಾಡಿ, ಗ್ರಾಮೀಣ ಪ್ರದೇಶದ ಬಡಗರ್ಭಿಣಿಯರಿಗೆ ಬಸ್, ರೈಲ್ವೇ ನಿಲ್ದಾಣಕ್ಕೆ ತೆರಳಲು ಗರ್ಭಿಣಿಯರಿಗೆ ಉಚಿತ ಆಟೋ ಸೇವೆ ನೀಡುತ್ತಿರುವ ಲಯನ್ಸ್ ಜೀವಧಾರ ಆಟೋ ಚಾಲಕರ ಸೇವಾಮನೋಭಾವ ಶ್ಲಾಘನೀಯವಾದುದು ಎಂದರು.
ಓಲಾ, ಊಬರ್ ಆಟೋ ವ್ಯವಹಾರ ಸೇವೆ ಬಂದರೂ ಸಹ ಆಟೋ ನಿಲ್ದಾಣಗಳನ್ನ ಜನಸಾಮನ್ಯರು ಹೆಚ್ಚು ತಮ್ಮ ಸಾರಿಗೆ ಉಪಯೋಗಕ್ಕೆ ಬಳಸುತ್ತಿದ್ದಾರೆಂದರು.
ಆಟೋ ಚಾಲಕರಿಗೆ ಪ್ರೇರಣೆಯಾಗಿದ್ದ ಕರಾಟೆ ಕಿಂಗ್ ಶಂಕರ್ ನಾಗ್ ರವರ ಜನ್ಮದಿನೋತ್ಸವದ ಅಂಗವಾಗಿ ಆಟೋ ಚಾಲಕರ ದಿನಾಚರಣೆಯನ್ನಾಗಿ ಜಿಲ್ಲಾ ಮಟ್ಟದಲ್ಲಿ ಆಚರಿಸಿ ಹಿರಿಯ ಆಟೋ ಚಾಲಕರಿಗೆ ನೆರವು, ಆಟೋ ಸಹಕಾರಿ ಸಂಘ ಸ್ಥಾಪನೆ, ಯುವಕರಿಗೆ ವಿಮೆ ಸಹಕಾರಿ ಯೋಜನೆಗಳನ್ನು ನೀಡುವಂತೆ ಇದರ ಬಗ್ಗೆ ಸಂಬಂಧಪಟ್ಟ ಕಾರ್ಮಿಕ ಇಲಾಖೆಯೊಂದಿಗೆ ಮನವಿ ಸಲ್ಲಿಸಿ ಚರ್ಚಿಲಾಗುವುದು ಎಂದರು
ಇದೇ ಸಂದರ್ಭದಲ್ಲಿ ಲಯನ್ಸ್ ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಮುತ್ತಣ್ಣ, ಆಟೊ ಚಾಲಕನಾದ ಸೂರಜ್, ಸದಾಶಿವ, ಜಾಕಿ, ಚಂದ್ರು, ಗೋಪಾಲ್ ಹಾಗೂ ಇನ್ನಿತರರು ಹಾಜರಿದ್ದರು.