ಮಹಾರಾಜ ಕಾಲೇಜಿನ ಮೇಲ್ಛಾವಣಿ ಗಾರೆ ಕುಸಿದು ಮೂವರು ವಿದ್ಯಾರ್ಥಿಗಳಿಗೆ ಗಾಯ

ಮೈಸೂರು: ನಗರದಲ್ಲಿನ ಮಹಾರಾಜ ಕಾಲೇಜಿನ ಮೇಲ್ಛಾವಣಿ ಗಾರೆ ಕುಸಿದು ಮೂರು ಮಂದಿ ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ಬುಧವಾರ ನಡೆದಿದೆ.
ವಿದ್ಯಾರ್ಥಿಗಳಾದ ವಿಶಾಲ್, ಯಶವಂತ್ ಸಲೀಂ ಗಾಯಗೊಂಡವರಾಗಿದ್ದಾರೆ.
ಕಾಲೇಜಿನ ಎಂಎಸ್ ಸಿ ಕ್ರಿಮಿನಾಲಜಿ ವಿಭಾಗದ ತರಗತಿಯಲ್ಲಿ ಆಂತರಿಕ ನಿಬಂಧನೆಯ ಪರೀಕ್ಷೆ ನಡೆಯುತ್ತಿದ್ದ ವೇಳೆ ಮೇಲ್ಛಾವಣಿಯ ಗಾರೆ ಕುಸಿದು ಬಿದ್ದಿದೆ.
ಇದರಿಂದ ವಿಶಾಲ್, ಯಶವಂತ್ ಸಲೀಂ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.
ಕಾಲೇಜಿನವರು ತಕ್ಷಣ ಈ ಮೂವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಛಾವಣಿ ಮೇಲ್ಭಾಗ ಶಿಥಿಲಗೊಂಡಿದ್ದರಿಂದ ದುರಸ್ತಿ ಕಾರ್ಯ ನಡೆಯುತ್ತಿತ್ತು. ದುರಸ್ತಿ ಕಾರ್ಯ ನಡೆಯುತ್ತಿರುವಾಗಲೇ ಛಾವಣಿ ಗಾರೆ ಕುಸಿದು ಈ ಘಟನೆ ನಡೆದಿದೆ.