ಮಟ್ಕಾ ಆಡುತ್ತಿದ್ದ ಇಬ್ಬರ ಬಂಧನ

ಮೈಸೂರು: ಮಟ್ಕಾ ಆಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಮೈಸೂರಿನ ಪ್ರಭಾ ಚಿತ್ರ ಮಂದಿರ ಹಿಂಭಾಗದ ಹಳೇ ಗುಜರಿ ರಸ್ತೆಯಲ್ಲಿ ಮಟ್ಕಾ ಆಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ದೇವರಾಜ ಠಾಣೆ ಪೆÇಲೀಸರು ಬಂಧಿಸಿದ್ದಾರೆ.
ಆಜಂ ಖಾನ್ ಮತ್ತು ನದೀಂಪಾಷಾ ಬಂಧಿತ ಆರೋಪಿಗಳು.
ಪೊಲೀಸರು ಬಂಧಿತರಿಂದ 9,450 ರೂ. ನಗದು ವಶಪಡಿಸಿಕೊಂಡಿದ್ದಾರೆ.