ಮೈಸೂರು: ಕೆಂಗಲ್ ಹನುಮಂತಯ್ಯನವರ ಹೆಸರಿನಲ್ಲಿ ರಾಜ್ಯ ಸರ್ಕಾರ ಅಧ್ಯಯನ ಪೀಠ ರಚಿಸಬೇಕು ಎಂದು ಕಾಂಗ್ರೆಸ್ ಯುವ ಮುಖಂಡ ಎನ್. ಎಂ. ನವೀನ್ ಕುಮಾರ್ ಆಗ್ರಹಿಸಿದರು.
ನಗರದ ಅಗ್ರಹಾರ ವೃತ್ತ ದಲ್ಲಿ ಶುಕ್ರವಾರ ಕರ್ನಾಟಕ ಸೇನಾ ಪಡೆ ವತಿಯಿಂದ ಕೆಂಗಲ್ ಹನುಮಂತಯ್ಯರವರ ಜಯಂತಿ ಕಾರ್ಯಕ್ರಮವನ್ನು ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ನವೀನ್ ಕುಮಾರ್ ಅವರು ಭಾಗವಹಿಸಿ ಮಾತನಾಡಿದರು.
ಕೆಂಗಲ್ ಹನುಮಂತಯ್ಯನವರ ಪ್ರತಿಮೆಯನ್ನು ಮೈಸೂರಿನ ಮಿನಿ ವಿಧಾನ ಸೌಧದಲ್ಲಿ ಸ್ಥಾಪಿಸಬೇಕೆಂದು ಅವರು ತಿಳಿಸಿದರು.
ಕೆಂಗಲ್ ಹನುಮಂತಯ್ಯನವರು ರಾಜಕೀಯ ಹಸ್ತಕ್ಷೇಪವಿಲ್ಲದ ದಕ್ಷ ಆಡಳಿತ ನೀಡಿ ರಾಜ್ಯದ ಏಳಿಗೆಗೆ ಮತ್ತು ಗ್ರಾಮೀಣ ಜನರ ಉದ್ಧಾರಕ್ಕೆ ದುಡಿದವರು ಎಂದರು.
ಹಿರಿಯ ಸಾಹಿತಿ ಡಾ. ಸಿ.ಪಿ.ಕೆ.ರವರು ಈ ಸಂದರ್ಭದಲ್ಲಿ ಕೆಂಗಲ್ ಹನುಮಂತಯ್ಯನವರ ಭಾವಚಿತ್ರಕ್ಕೆ ಪುಷ್ಪಾರ್ಚಾನೆ ಮಾಡಿ ಮಾತನಾಡಿ, ಧೀಮಂತ ರಾಜಕಾರಣಿಯೂ ಆದ ಕೆಂಗಲ್ ಹನುಮಂತಯ್ಯನವರು ಮಹಾತ್ಮ ಗಾಂಧಿಯವರಿಂದ ಪ್ರೇರಿತರಾಗಿ ಸ್ವಾತಂತ್ರ್ಯ ಹೋರಾಟಕ್ಕಿಳಿದು ಅದಮ್ಯಶಕ್ತಿ ಮತ್ತು ಅರ್ಪಣಾ ಮನೋಭಾವದಿಂದ ಜನ ಮನ್ನಣೆ ಗಳಿಸಿದರು ಎಂದು ತಿಳಿಸಿದರು.
ಅವರ ದೂರದೃಷ್ಟಿ ಮತ್ತು ವಿಧಾನಸೌಧದ ನಿರ್ಮಾಣಕ್ಕಾಗಿ ಅವರನ್ನು ನೆನೆಯಲಾಗುತ್ತದೆ ಎಂದವರು ಹೇಳಿ, ಕೇಂದ್ರ ರೈಲು ಮಂತ್ರಿಯಾಗಿ ಕರ್ನಾಟಕಕ್ಕೆ ಬಹಳ ಕೊಡುಗೆ ನೀಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಅರಗು ಮತ್ತು ಬಣ್ಣ ಕಾರ್ಖಾನೆ ಅಧ್ಯಕ್ಷ ಎನ್. ವಿ. ಪಣೀಶ್, ಉಪ ಮಹಾಪೌರರಾದ ಸಿ. ಶ್ರೀಧರ್, ಕರ್ನಾಟಕ ಸೇನಾ ಪಡೆ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ಪಡುವಾರಳ್ಳಿ ರಾಮಕೃಷ್ಣ, ಡಾ. ಪಿ ಶಾಂತರಾಜೇಅರಸ್, ವಿಕ್ರಂ ಅಯ್ಯಂಗಾರ್, ಎಳನೀರು ರಾಮಣ್ಣ, ಎಂ ಬಿ. ಪ್ರಭುಶಂಕರ್, ಚೇತನ್ ಕಾಂತರಾಜ್, ಸುಬ್ಬೇಗೌಡ, ದರ್ಶನ್ ಗೌಡ, ಸುನಿಲ್, ಅನಿಲ್, ಗೊರೂರು ಮಲ್ಲೇಶ್, ಸ್ವಾಮಿ, ರಾಧಾಕೃಷ್ಣ ಅವರುಗಳು ಉಪಸ್ಥಿತರಿದ್ದರು.