ಚಾಮರಾಜನಗರ ವೈದ್ಯಕೀಯ ಕಾಲೇಜಿನಲ್ಲಿ ಬಿಎಸ್ ಸಿ ನರ್ಸಿಂಗ್ ಕೋರ್ಸ್ -ಸುರೇಶ್ ಕುಮಾರ್

ಚಾಮರಾಜನಗರ: ಚಾಮರಾಜನಗರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಬಿಎಸ್ ಸಿ ನರ್ಸಿಂಗ್ ಕೋರ್ಸ್‍ನ್ನು 2020-21ನೇ ಸಾಲಿನಿಂದಲೇ ಪ್ರಾರಂಭಿಸಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.
ಈ ಕುರಿತು ವೈದ್ಯಕೀಯ ಶಿಕ್ಷಣ ಇಲಾಖೆ ಅಧೀನ ಕಾರ್ಯದರ್ಶಿಯವರು ಆದೇಶ ಹೊರಡಿಸಿದ್ದು, ಈ ಕೋರ್ಸ್‍ಗೆ 100 ಸೀಟುಗಳ ಪ್ರವೇಶವಿದ್ದು, ಎಲ್ಲ ಸೀಟುಗಳನ್ನು ಸರ್ಕಾರಿ ಕೋಟಾದ ಮೂಲಕವೇ ಭರ್ತಿ ಮಾಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯದ ಅಮೋದನೆಯೊಂದಿಗೆ ನರ್ಸಿಂಗ್ ಕಾಲೇಜಿಗೆ ಸೀಟುಗಳ ಭರ್ತಿ ಕಾರ್ಯ ಪ್ರಾರಂಭವಾಗುವುದು ಎಂದು ಸಚಿವರು ತಿಳಿಸಿದರು.
ಗಡಿ ಜಿಲ್ಲೆಯ ಶೈಕ್ಷಣಿಕ ಹಾಗೂ ಆರೋಗ್ಯ ರಕ್ಷಣೆ ದೃಷ್ಟಿಯಿಂದ ಜಿಲ್ಲೆಗೆ ಬಿಎಸ್ ಸಿ ನರ್ಸಿಂಗ್ ಕೋರ್ಸ್‍ನ್ನು ಈ ಸಾಲಿನಿಂದಲೇ ಪ್ರಾರಂಭ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವರು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಅವರಿಗೆ ಮನವಿ ಮಾಡಿದ್ದರು. ಇದೀಗ ಉಸ್ತುವಾರಿ ಸಚಿವರ ಮನವಿಗೆ ಸ್ಪಂದಿಸಿ ವೈದ್ಯಕೀಯ ಶಿಕ್ಷಣ ಇಲಾಖೆ ನರ್ಸಿಂಗ್ ಕಾಲೇಜು ಆರಂಭಕ್ಕೆ ಆದೇಶ ಹೊರಡಿಸಿದೆ.