ಮೈಸೂರು: ಬಾರ್ ನಲ್ಲಿ ಗಲಾಟೆ ಮಾಡಿ ಮಾಲೀಕನ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯ ಬಿಜೆಪಿ ಯುವಮುಖಂಡ ಸೇರಿ 8 ಮಂದಿಗೆ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ನಂಜನಗೂಡು ನಗರ ಬಿಜೆಪಿ ಪ್ರಧಾನಕಾರ್ಯದರ್ಶಿ ಧನರಾಜ್ ಸೇರಿ 8 ಮಂದಿಗೆ 3 ವರ್ಷ ಕಾರಾಗೃಹ ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.
ಈ ಪ್ರಕರಣದ 2ನೇ ಆರೋಪಿ ಧನರಾಜ್ 2016ರಂದು ನಂಜನಗೂಡಿನ ಅಕ್ಷಯ ಬಾರ್ ನಲ್ಲಿ ಸ್ನೇಹಿತರ ಜೊತೆ ಬಂದು ಗಲಾಟೆ ಮಾಡಿ ಬಾರ್ ಮಾಲೀಕನ ಮೇಲೆ ಹಲ್ಲೆ ನಡೆಸಿದ್ದ.
ಬಿಜೆಪಿ ಯಲ್ಲಿ ಸಕ್ರಿಯನಾಗಿದ್ದ ಧನರಾಜ್ ಗೆ ನಟೇಶ್, ಕುಮಾರ್, ನಂಜಪ್ಪ, ದೇವರಾಜ್, ಮೂರ್ತಿ, ಕೃಷ್ಣ, ಮಂಜು ಈ ಹಲ್ಲೆ ಪ್ರಕರಣದಲ್ಲಿ ಭಾಗಿ ಆಗಿದ್ದರು.
ಇವರುಗಳ ಮೇಲಿನ ಆರೋಪ ಸಾಬೀತಾದ ಹಿನ್ನಲೆಯಲ್ಲಿ 8 ಮಂದಿಗೆ ನ್ಯಾಯಾಲಯ ಮೂರು ವರ್ಷ ಜೈಲು ಶಿಕ್ಷೆ ಮತ್ತು 7500 ರೂ. ದಂಡ ವಿಧಿಸಿದೆ.
ನ್ಯಾಯಾಧೀಶರಾದ ರಾಮಚಂದ್ರ ಡಿ. ಹುದ್ದಾರ್ ತೀರ್ಪು ನೀಡಿದ್ದಾರೆ.
ಸರ್ಕಾರದ ಪರ ಪಿಪಿ ಚಂದ್ರಶೇಖರ್ ವಾದ ಮಂಡಿಸಿದ್ದರು.
ಜೈಲು ಪಾಲಾಗಿರುವ ಧನರಾಜ್ ನಂಜನಗೂಡು ಶಾಸಕ ಹರ್ಷವರ್ಧನ್ ಗೆ ಆಪ್ತ ಎಂದು ಹೇಳಲಾಗುತ್ತಿದೆ.