ಮೈಸೂರು: ನಗರದ ಸರಸ್ವತಿಪುರಂ ಠಾಣೆ ಪೊಲೀಸರು ಮೊಬೈಲ್ ಕಳ್ಳನೊಬ್ಬನನ್ನು ಬಂಧಿಸಿದ್ದಾರೆ.
ನಗರದ ಕೆ.ಜಿ.ಕೊಪ್ಪಲಿನ ವಾಸಿ ಅಕ್ಷಯ್ (19) ಬಂಧಿತ ಆರೋಪಿ.
ಬಂಧಿತನಿಂದ ಪೊಲೀಸರು 70 ಸಾವಿರ ರೂ. ಮೌಲ್ಯದ ಮೊಬೈಲ್ ಫೆÇೀನ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ನಗರದ ಕುವೆಂಪುನಗರದ ನಿವಾಸಿಯೊಬ್ಬರು ಎರಡು ಫೆÇೀನ್ ಗಳನ್ನು ಕಿಟಕಿ ಪಕ್ಕದಲ್ಲಿ ಚಾರ್ಜ್ ಮಾಡಲು ಇಟ್ಟು ಮಲಗಿದ್ದಾರೆ. ಬೆಳಗ್ಗೆ ಎದ್ದು ನೋಡಲಾಗಿ ಫೆÇೀನ್ ಗಳು ಕಳ್ಳತನವಾಗಿತ್ತು.
ಈ ಬಗ್ಗೆ ಸರಸ್ವತಿಪುರಂ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ತನಿಖೆ ಕೈಗೊಂಡ ಪೆÇಲೀಸರು ಆರೋಪಿ ಕೆ.ಜಿ.ಕೊಪ್ಪಲಿನ ಅಕ್ಷಯ್ ಎಂಬುವನನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಕಿಟಕಿಯ ಮೂಲಕ ಕೈ ಹಾಕಿ ಮೊಬೈಲ್ ಗಳನ್ನು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ಬಂಧಿತನಿಂದ 70 ಸಾವಿರ ರೂ. ಮೌಲ್ಯದ 2 ಮೊಬೈಲ್ ಫೆÇೀನ್ ಗಳನ್ನು (ಓನ್ ಪ್ಲಸ್ 7 ಪೆÇ್ರೀ ಮತ್ತು ಒನ್ ಪ್ಲಸ್ ನಾರ್ಡ್) ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಪತ್ತೆ ಕಾರ್ಯದಲ್ಲಿ ಮೈಸೂರು ನಗರದ ಡಿಸಿಪಿ ಗೀತಾಪ್ರಸನ್ನ, ಎ.ಸಿ.ಪಿ.ಕೃಷ್ಣರಾಜ ವಿಭಾಗ ಎಂ.ಎಸ್.ಪೂರ್ಣಚಂದ್ರ ತೇಜಸ್ವಿ, ಸರಸ್ವತಿಪುರಂ ಪೆÇಲೀಸ್ ಠಾಣೆಯ ಪೆÇಲೀಸ್ ಇನ್ ಸ್ಪೆಕ್ಟರ್ ಸಿ.ತಿಮ್ಮರಾಜು, ಪಿ.ಎಸ್.ಐ ರಾಚಯ್ಯ, ಸಿಬ್ಬಂದಿಗಳಾದ ಬಸವರಾಜೇ ಅರಸ್, ರಾಘವೇಂದ್ರ, ಹೆಚ್.ವಿ. ಮಂಜುನಾಥ್, ಉಮೇಶ್, ಹರೀಶ್ ಕುಮಾರ್‍ರವರು ಭಾಗವಹಿಸಿದ್ದರು.