ಮೈಸೂರು: ಪ್ರೇಮ ದಿನಾಚರಣೆ ನಮ್ಮ ಸಂಸ್ಕøತಿಯಲ್ಲ ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣ್ ಗೌಡ ಹೇಳಿದರು.
ನಗರದ ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ವೃತ್ತದಲ್ಲಿ ಅಪೂರ್ವ ಸ್ನೇಹ ಬಳಗ ಹಾಗೂ ಪ್ರಜ್ಞಾವಂತ ನಾಗರಿಕ ವೇದಿಕೆ ವತಿಯಿಂದ ದೇಶಪ್ರೇಮ ದಿನ ಹಾಗೂ ಪುಲ್ವಾಮಾ ದಾಳಿ ಕರಾಳ ದಿನವನ್ನು ಭಾನುವಾರ ಆಚರಿಸಲಾಯಿತು.
ಈ ಸಂದರ್ಭದಲ್ಲಿ ನಾರಾಯಣ್ ಗೌಡ ಅವರು ಮಾತನಾಡಿದರು.
ಭಾರತ ದೇಶ ಪುರಾತನವಾದದ್ದು, ಪ್ರೇಮ ದಿನಾಚರಣೆ ನಮ್ಮ ಸಂಸ್ಕøತಿಯಲ್ಲ. ಪ್ರೀತಿ ಪ್ರೇಮ ಎನ್ನುವುದು ತಂದೆ-ತಾಯಿ. ಗುರು-ಹಿರಿಯರು. ದೇಶದ ಬೆನ್ನಲುಬಾದ ಸೈನಿಕರು ಮತ್ತು ರೈತರ ಮೇಲೆ ಇರಬೇಕು. ಅರ್ಥವಿಲ್ಲದ ಪ್ರೇಮಿಗಳ ದಿನಾಚರಣೆ ಸಲ್ಲದು ಎಂದು ಹೇಳಿದರು.
ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರ ಭಾವಚಿತ್ರ ಹಿಡಿದು ಅವರ ತ್ಯಾಗ ಬಲಿದಾನವನ್ನು ನೆನೆದು ಸ್ಮರಿಸಲಾಯಿತು.
ಪ್ರೇಮಿಗಳ ದಿನಾಚರಣೆಗೆ ಧಿಕ್ಕಾರ, ವಿಶ್ವ ದೇಶ ಪ್ರೇಮಿಗಳಿಗೆ ಜಯವಾಗಲಿ, ಭಾರತ್ ಮಾತಾಕಿ ಜೈ, ವಂದೇ ಮಾತರಂ, ವೀರ ಯೋಧರು ಅಮರರಾಗಲಿ, ಸೈನಿಕರ ದಿನಾಚರಣೆಗೆ ಜಯವಾಗಲಿ ಎಂಬ ಘೋಷಣೆಗಳನ್ನು ಕೂಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಡಿಟಿಎಸ್ ಫೌಂಡೇಶನ್ ಅಧ್ಯಕ್ಷ ಡಿ ಟಿ ಪ್ರಕಾಶ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವೈ.ಡಿ. ರಾಜಣ್ಣ, ಹಿರಿಯ ಪತ್ರಕರ್ತರಾದ ಅನಿಲ್ ಕುಮಾರ್, ಮುಡಾ ಸದಸ್ಯರಾದ ಲಕ್ಷ್ಮೀದೇವಿ, ಶಿವಾಜಿ ನಗರ ಪಾಲಿಕಾ ಸದಸ್ಯ ಎಂ.ಡಿ. ಪಾರ್ಥಸಾರಥಿ, ಅಪೂರ್ವ ಸ್ನೇಹ ಬಳಗದ ಅಧ್ಯಕ್ಷರಾದ ಅಪೂರ್ವ ಸುರೇಶ್, ಯುವ ಮುಖಂಡರಾದ ವಿಕ್ರಂ ಅಯ್ಯಂಗಾರ್, ರಾಕೇಶ್ ಭಟ್, ಎಸ್.ಎನ್. ರಾಜೇಶ್, ನವೀನ್, ಕಡಕೋಳ ಜಗದೀಶ್, ಸಂದೇಶ್, ಸುಧೀಂದ್ರ, ಮಧು ಎನ್. ಪೂಜಾರ್, ಚಕ್ರಪಾಣಿ ಹಾಗೂ ಇನ್ನಿತರರು ಈ ಸಂದರ್ಭದಲ್ಲಿ ಹಾಜರಿದ್ದರು.