ಮೈಸೂರು: ನಗರದಲ್ಲಿ ಸರಗಳ್ಳರ ಹಾವಳಿ ಮುಂದುವರೆದಿದ್ದು ಬೈಕ್ ನಲ್ಲಿ ಬಂದ ಸರಗಳ್ಳರು ಮಹಿಳೆಯೊಬ್ಬರು ಧರಿಸಿದ್ದ ಚಿನ್ನದ ಸರ ಕಸಿದು ಪರಾರಿಯಾದ ಘಟನೆ ನಡೆದಿದೆ.
ಸಾವಿತ್ರಮ್ಮ (55) ಎಂಬುವರೆ ಸರ ಕಳೆದುಕೊಂಡ ಮಹಿಳೆ ಆಗಿದ್ದಾರೆ.
ಕುವೆಂಪು ನಗರದ ನವಿಲು ರಸ್ತೆಯಲ್ಲಿ ಸಾವಿತ್ರಮ್ಮ ಅಂಗಡಿಯಿಂದ ಹಾಲು ತೆಗೆದುಕೊಂಡು ಹೋಗುವ ಸಂದರ್ಭದಲ್ಲಿ ಬೈಕ್ ನಲ್ಲಿ ಬಂದ ಕಳ್ಳರು ಇವರ ಸರವನ್ನು ಕಿತ್ತುಕೊಂಡು ಪರಾರಿ ಆಗಿದ್ದಾರೆ.
ಸರ ಕಸಿಯುವ ವೇಳೆ ಸಾವಿತ್ರಮ್ಮನವರ ತಲೆಗೆ ತೀವ್ರವಾಗಿ ಗಾಯವಾಗಿದ್ದು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಕುವೆಂಪು ನಗರ ಠಾಣೆ ಪೊಲೀಸರು ಈ ಬಗ್ಗೆ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.