ಮೈಸೂರು: ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಲ್ಲ ಅಂದ ಮಾತ್ರಕ್ಕೆ ಸಿದ್ದರಾಮಯ್ಯ ಅವರು ಹಿಂದೂ ವಿರೋಧಿ ಅಲ್ಲ ಎಂದು ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ತಿ.ನರಸೀಪುರದಲ್ಲಿ ಶುಕ್ರವಾರ ಯತೀಂದ್ರ ಅವರು ಮಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಸಿದ್ದರಾಮಯ್ಯರನ್ನು ಹಿಂದೂ ವಿರೋಧಿ ಅನ್ನುವುದಕ್ಕೆ ಆಗಲ್ಲ. ನಮ್ಮೂರಲ್ಲಿ ಕಟ್ಟುವ ರಾಮಮಂದಿರಕ್ಕೆ ದೇಣಿಗೆ ನೀಡುತ್ತೇನೆ ಎಂದು ಅವರು ಹೇಳಿದ್ದಾರೆ. ಅಂತೆಯೇ, ಅನೇಕ ದೇವಸ್ಥಾನಗಳಿಗೆ ವೈಯುಕ್ತಿಕವಾಗಿ ನಮ್ಮ ತಂದೆ ದೇಣಿಗೆ ನೀಡಿದ್ದಾರೆ. ಅಯೋಧ್ಯೆಯ ರಾಮಮಂದಿರಕ್ಕೆ ಯಾರು ದುಡ್ಡು ಕೊಟ್ಟಿದ್ದಾರೆ, ಯಾರು ಕೊಟ್ಟಿಲ್ಲ ಎಂದು ಕೇಳುವುದು ಸರಿಯಲ್ಲ ಎಂದವರು ತಿಳಿಸಿದರು.
ಸಿದ್ದರಾಮಯ್ಯನವರಿಗೆ ಹಿಂದೂ ವಿರೋಧಿ ಹಣೆಪಟ್ಟಿ ಕಟ್ಟಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು.