ಹೊಸಮಾಲಂಗಿಯಲ್ಲಿ ಡಿಸಿ ಡಾ. ಎಂ.ಆರ್. ರವಿ ವಾಸ್ತವ್ಯ

ಚಾಮರಾಜನಗರ: ಸಾರ್ವಜನಿಕರ ಅಹವಾಲು ಆಲಿಸಿ ಸರ್ಕಾರದ ವಿವಿಧ ಸವಲತ್ತುಗಳು ಮತ್ತು ಯೋಜನೆಗಳ ಅನುಷ್ಠಾನ ಸಂಬಂಧ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ಹಿರಿಯ ಅಧಿಕಾರಿಗಳೊಂದಿಗೆ ಮೂರನೇ ಶನಿವಾರವಾದ ಫೆ. 20ರಂದು ಕೊಳ್ಳೇಗಾಲ ತಾಲೂಕಿನ ಹೊಸಮಾಲಂಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ.
ಸರ್ಕಾರದ ನಿರ್ದೇಶನ ಅನುಸಾರ ಪ್ರತೀ ತಿಂಗಳ ಮೂರನೇ ಶನಿವಾರ ಹಳ್ಳಿ ವಾಸ್ತವ್ಯವನ್ನು ಜಿಲ್ಲಾಧಿಕಾರಿಗಳು ಇತರೆ ಅಧಿಕಾರಿಗಳೊಂದಿಗೆ ಮಾಡಲಿದ್ದಾರೆ.
ಅಲ್ಲದೆ ಆಯಾ ತಾಲೂಕಿನ ತಹಸೀಲ್ದಾರ್ ಆಯಾ ತಾಲೂಕಿನ ಗ್ರಾಮ ಒಂದರಲ್ಲಿ ವಾಸ್ತವ್ಯ ಮಾಡಲಿದ್ದಾರೆ.
ಚಾಮರಾಜನಗರ ತಾಲೂಕಿನ ಕಸಬಾ ಹೋಬಳಿಯ ಬದನಗುಪ್ಪೆ, ಗುಂಡ್ಲಪೇಟೆ ತಾಲೂಕಿನ ಕಸಬಾ ಹೋಬಳಿಯ ಬೆಟ್ಟಹಳ್ಳಿ ಗ್ರಾಮ, ಯಳಂದೂರು ತಾಲೂಕಿನ ಅಗರ ಹೋಬಳಿಯ ಕೆಸ್ತೂರು ಗ್ರಾಮ, ಹನೂರು ತಾಲೂಕಿನ ಕಸಬಾ ಹೋಬಳಿಯ ಬೈರನತ್ತ ಗ್ರಾಮದಲ್ಲಿ ತಹಶಿಲ್ದಾರಾರು ಅಹವಾಲುಗಳನ್ನು ಆಲಿಸಿಲಿದ್ದಾರೆ.
ಗ್ರಾಮದ ಸಾರ್ವಜನಿಕರು ತಮ್ಮ ಅಹವಾಲುಗಳಿಗೆ ಪರಿಹಾರ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ಕೋರಿದ್ದಾರೆ.