ಮೈಸೂರು ದಸರಾ ವಸ್ತು ಪ್ರದರ್ಶನ ಮೈದಾನ ದೇಶದಲ್ಲಿಯೇ ಇವೆಂಟ್ಸ್ ಹಬ್ ಮೈದಾನವಾಗಿ ಪ್ರಖ್ಯಾತವಾಗಲಿದೆ -ಹೇಮಂತ್ ಕುಮಾರ್ ಗೌಡ

ಮೈಸೂರು: ಕರ್ನಾಟಕ ವಸ್ತು ಪ್ರದರ್ಶನ ಮೈದಾನ ಮುಂದಿನ ದಿನದಲ್ಲಿ ದೇಶದಲ್ಲಿಯೇ ಯೋಜಿತ ಇವೆಂಟ್ಸ್ ಹಬ್ ವಸ್ತುಪ್ರದರ್ಶನ ಮೈದಾನವಾಗಿ ಪ್ರಖ್ಯಾತವಾಗಲಿದೆ ಎಂದು ವಸ್ತುಪ್ರದರ್ಶನ ಪ್ರಾಧಿಕಾರ ಅಧ್ಯಕ್ಷರಾದ ಹೇಮಂತ್ ಕುಮಾರ್ ಗೌಡ ತಿಳಿಸಿದರು.
ಕರ್ನಾಟಕ ಸರ್ಕಾರ ಪ್ರವಾಸೋದ್ಯಮ ಇಲಾಖೆಯ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ 46 ಲಕ್ಷಗಳ ಅನುದಾನದ ವಿವಿಧ ಕಾಮಗಾರಿಗಳಿಗೆ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ ಹೇಮಂತ್ ಕುಮಾರ್ ಗೌಡ ರವರು ಶನಿವಾರ ಗುದ್ದಲಿ ಪೂಜೆ ನೆರವೇರಿಸಿ ಚಾಲನೆ ನೀಡಿ ಮಾತನಾಡಿದರು.
ಕರ್ನಾಟಕ ವಸ್ತು ಪ್ರದರ್ಶನ ಮೈದಾನ ಮುಂದಿನ ದಿನದಲ್ಲಿ ದೇಶದಲ್ಲಿಯೇ ಯೋಜಿತ ಇವೆಂಟ್ಸ್ ಹಬ್ ವಸ್ತುಪ್ರದರ್ಶನ ಮೈದಾನವಾಗಿ ಪ್ರಖ್ಯಾತವಾಗಲಿದೆ ಎಂದವರು ಹೇಳಿದರು.
ಈಗಾಗಲೇ ವಸ್ತುಪ್ರದರ್ಶನ ಆವರಣದಲ್ಲಿ ಹಸಿರು ಹುಲ್ಲುಗಾವಲು ಮೈದಾನ, ಆಕರ್ಷಿಕ ಉದ್ಯಾನಗಳು ಸೇರಿದಂತೆ ವಿವಿಧ ಜಾತಿಯ ಸಸಿ ನೆಟ್ಟು ಪೆÇೀಷಣೆ ಮಾಡಲಾಗುತ್ತಿದೆ ಎಂದರು.
ವರ್ಷಪೂರ್ತಿ ವಸ್ತುಪ್ರದರ್ಶನ ನಡೆಸುವ ಪರಿಕಲ್ಪನೆಯೊಂದಿಗೆ ಅವಶ್ಯಕವಿರುವ ಅಭಿವೃದ್ಧಿ ಕಾರ್ಯಗಳಾದ ಮೂಲಸೌಲಭ್ಯವನ್ನ ವ್ಯವಸ್ಥಿತವಾಗಿ ಒದಗಿಸುವ ನಿಟ್ಟಿನಲ್ಲಿ ಇಂದು ಮಳೆನೀರು ಹಾದು ಹೋಗಲು ಒಳಚರಂಡಿ ವ್ಯವಸ್ಥೆ, ಸರ್ಕಾರಿ ಮಳಿಗೆಗಳು ಬರುವ ಸ್ಥಳದಲ್ಲಿ ಸಿಮೆಂಟ್ ಬ್ಲಾಕ್ ಕಾಮಗಾರಿ ಹಾಗೂ ವಿದ್ಯುತ್ ದೀಪ ಅಳವಡಿಕೆ ಶುದ್ಧ ಕುಡಿಯುವ ನೀರು ಘಟಕ ಸೇರಿದಂತೆ ನಾಗರೀಕರು ವಿಶ್ರಾಂತಿಗಾಗಿ ಕುಳಿತುಕೊಳ್ಳಲು ಬೇಕಾದ ಬೆಂಚ್ ಸೇರಿದಂತೆ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ಕೊಟ್ಟಿದ್ದು ದಸರಾ ವಸ್ತುಪ್ರದರ್ಶನ ಅವಧಿ ಮಾತ್ರವಲ್ಲದೇ ಮೈಸೂರಿನ ಹೊರಾಂಗಣದಲ್ಲಿ ನಡೆಯುವ ಎಲ್ಲಾ ಖಾಸಗಿ ವಸ್ತುಪ್ರದರ್ಶನಗಳಿಗೆ ಸಮಾರಂಭ, ಸಮ್ಮೇಳನಗಳಿಗೆ ಅವಕಾಶ ಕಲ್ಪಿಸಲು ಅಚ್ಚುಕಟ್ಟಾದ ವ್ಯವಸ್ಥೆಯನ್ನು ರೂಪಿಸಲಾಗುತ್ತಿದೆ ಎಂದರು.
ಮೈಮುಲ್ ನಿರ್ದೇಶಕ ಅಶೋಕ್, ವಸ್ತುಪ್ರದರ್ಶನ ಪ್ರಾಧಿಕಾರದ ಸಿಇಒ ಗಿರೀಶ್, ಎಇಇ ಯಾದವಗಿರಿ, ಮೆಲ್ಲಲಿ ಲಕ್ಷ್ಮೀಶ, ವನೀಶ್ ಕುಮಾರ್, ಮೃಗಾಲಯ ಪ್ರಾಧಿಕಾರ ಸದಸ್ಯ ಗೋಕುಲ್ ಗೋವರ್ಧನ್, ಮಂಜು ಗೌಡ, ಪ್ರಕಾಶ್, ಕೂರ್ಗಳ್ಳಿ ರೇವಣ್ಣ, ಶ್ರೀನಿವಾಸ್, ಕುಮಾರ್, ಲೋಕೇಶ್, ಲೋಹಿತ್, ಸುಚೀಂದ್ರ ಹಾಗೂ ಇನ್ನಿತರರು ಹಾಜರಿದ್ದರು.