ಪತ್ರಿಕೆಯಷ್ಟು ಟಿವಿ ಮಾಧ್ಯಮದಲ್ಲಿ ಸುದ್ದಿ ಸತ್ಯತೆ ಇರೋದಿಲ್ಲ -ಸಿದ್ದರಾಮಯ್ಯ

ಮೈಸೂರು: ಪತ್ರಿಕೆಯಷ್ಟು ಟಿವಿ ಮಾಧ್ಯಮದಲ್ಲಿ ಸುದ್ದಿ ಸತ್ಯತೆ ಇರೋದಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ಮೈಸೂರು ಜಿಲ್ಲಾ ಪತ್ರಿಕಾ ಛಾಯಾಗ್ರಾಹಕರ ಸಂಘದ ಉದ್ಘಾಟನೆ ನೆರವೇರಿಸಿ ಸಿದ್ದರಾಮಯ್ಯ ಮಾತನಾಡಿದರು.
ನಾನು ಈಗಲೂ ಟಿವಿಗಿಂತ ಹೆಚ್ಚು ಪತ್ರಿಕೆ ಓದುತ್ತೇನೆ. ಪತ್ರಿಕೆಯಷ್ಟು ಟಿವಿ ಮಾಧ್ಯಮದಲ್ಲಿ ಸುದ್ದಿ ಸತ್ಯತೆ ಇರೋದಿಲ್ಲ. ಸ್ಥಳೀಯ ವರದಿಗಾರರು ಸರಿಯಾಗಿಯೇ ವರದಿ ಮಾಡಿದರೂ ಅದನ್ನು ಹೆಡ್ ಆಫೀಸ್ ನಲ್ಲಿರುವವರು ತಮ್ಮಿಷ್ಟದಂತೆ ಎಡಿಟ್ ಮಾಡುತ್ತಾರೆ ಎಂದರು.
ಇತ್ತೀಚಿನ ದಿನಗಳಲ್ಲಿ ನನ್ನನ್ನ ಟೀಕೆ ಮಾಡಲಿಲ್ಲ ಅಂದರೆ ಮಾಧ್ಯಮದವರಿಗೆ ನಿದ್ದೆಬರಲ್ಲ. ಆದರೂ ಇದನ್ನ ನಾನು ಸ್ವಾಗತಿಸುತ್ತೇನೆ ಎಂದು ಸಿದ್ದರಾಮಯ್ಯ ಮಾರ್ಮಿಕವಾಗಿ ನುಡಿದರು.
ಛಾಯಾಗ್ರಾಹಕರಿಗೂ ಅವರದೇ ಆದ ಸಮಸ್ಯೆಗಳಿರುತ್ತದೆ. ಅವುಗಳ ಪರಿಹಾರಕ್ಕೆ ಸಂಘ ಕಟ್ಟಿರೋದು ಸಹಕಾರಿಯಾಗಲಿದೆ ಎಂದ ಅವರು, ಪತ್ರಿಕಾ ಛಾಯಾಗ್ರಾಹಕರು ಹಲವು ಅಪಾಯದ ಸನ್ನಿವೇಶಗಳನ್ನ ಎದುರಿಸಿ ಕೆಲಸ ಮಾಡ್ತಾರೆ. ನಿಮ್ಮದು ಒಂದು ರೀತಿಯ ಸಾಹಸ ಪ್ರವೃತ್ತಿ. ನಿಮ್ಮ ಸಮಸ್ಯೆ, ಪರಿಹಾರ ಎಲ್ಲದಕ್ಕೂ ಈ ಅಸೋಸಿಯೇಷನ್ ಸಹಾಯವಾಗಲಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಸಮಾರಂಭದಲ್ಲಿ ಸುತ್ತೂರು ಮಠದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಶಾಸಕರಾದ ಜಿ.ಟಿ.ದೇವೇಗೌಡ, ಜಮೀರ್ ಖಾನ್, ವಿಧಾನ ಪರಿಷತ್ ಸದಸ್ಯ ಧರ್ಮಸೇನ, ಮೂಡಾ ಅಧ್ಯಕ್ಷ ಹೆಚ್. ವಿ. ರಾಜೀವ್, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ರವಿಕುಮಾರ್ ಉಪಸ್ಥಿತರಿದ್ದರು, ಮೈಸೂರು ಫೆÇೀಟೋ ಜರ್ನಲಿಸ್ಟ್ ಅಸೋಸಿಯೇಷನ್ ಅಧ್ಯಕ್ಷ, ಪ್ರಗತಿ ಗೋಪಾಲಕೃಷ್ಣ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.