ವೀರಯೋಧ ವೀರಪ್ಪರಿಗೆ ಅದ್ದೂರಿ ಸ್ವಾಗತ

ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ವೀರಯೋಧ ಜಿ. ವೀರಪ್ಪ ಅವರು ಸೈನ್ಯದಲ್ಲಿ ಅವಧಿ ಪೂರೈಸಿ ಗಡಿಯಿಂದ ತವರು ನಾಡಿಗೆ ಮರಳಿ ಬಂದ ಅವರಿಗೆ ಸ್ವಗ್ರಾಮದಲ್ಲಿ ಸ್ವಾಗತ ಕೋರಲಾಯಿತು.
ಅದ್ದೂರಿ ಮೆರವಣಿಗೆ ಮಾಡಿ ವೀರಪ್ಪವರನ್ನು ಸನ್ಮಾನಿಸಲಾಯಿತು.
ಚಾಮರಾಜನಗರ ಜಿಲ್ಲೆಯ ಉಡಿಗಾಲ ಗ್ರಾಮದ ನಿವಾಸಿಯಾಗಿರುವ ಗುರುಬಸಪ್ಪ ಹಾಗೂ ಗುರುಶಾಂತಮ್ಮ ಅವರ ಪುತ್ರ ವೀರಪ್ಪ ಅವರು 15-4-1979ರಂದು ಜನಿಸಿದರು. ಒಂದರಿಂದ 10ರ ವರೆಗೆ ತಮ್ಮ ಗ್ರಾಮದಲ್ಲೆ ವಿದ್ಯಾಭ್ಯಾಸ ಪೂರ್ಣಗೊಳಿಸಿದ ಇವರು 19-1-2000ರಲ್ಲಿ ಭಾರತೀಯ ಸೈನ್ಯಕ್ಕೆ ಸೇರಿದರು.
2001ರಲ್ಲಿ ವೆಸ್ಟ್ ಬೆಂಗಾಳ್, 2002ರಲ್ಲಿ ಕಾಶ್ಮೀರ, 2004 ಪಂಜಾಬ್, 2007ರಲ್ಲಿ ತಿರುಪುರ್, 2011ರಲ್ಲಿ ಒರಿಸ್ಸಾ, 2014ರಲ್ಲಿ ಬೆಂಗಳೂರು, 2015 ಮತ್ತೆ ಪಂಜಾಬ್, 2018 ಕಾಶ್ಮೀರದಲ್ಲಿ ಕೆಲಸ ನಿರ್ವಹಿಸಿ 30-9-2020ರಂದು ನಿವೃತ್ತಿಯಾದರು.
20 ವರ್ಷ, 8 ತಿಂಗಳು 11 ದಿನ ಸೇನೆಯಲ್ಲಿ ವೀರಪ್ಪ ಅವರು ಸೇವೆ ಸಲ್ಲಿಸಿದ್ದಾರೆ.
ನಿವೃತ್ತಿ ನಂತರ ತಮ್ಮ ತವರು ಜಿಲ್ಲೆಯ ಉಡಿಗಾಲ ಗ್ರಾಮಕ್ಕೆ ಫೆ. 22ರಂದು ಆಗಮಿಸಿದ ಇವರನ್ನ ಗ್ರಾಮದ ಮುಖಂಡರು, ಗ್ರಾಮಸ್ಥರು ವೀರಯೋಧ ವೀರಪ್ಪ ಅವರನ್ನ ಸಡಗರ ಸಂಭ್ರಮದಿಂದ ಬರಮಾಡಿಕೊಂಡು ಸನ್ಮಾನಿಸಿ ಗೌರವಿಸಿದರು
ಯೋಧ ವೀರಪ್ಪ 23-4-2007ರಲ್ಲಿ ನಾಗಮಣಿ(ಪವಿತ್ರ)ಯನ್ನ ಬಾಳಸಂಗಾತಿಯಾಗಿ ಸ್ವೀಕರಿಸಿದ್ದರು. ಧನುಶ್, ಕುಶಾಗ್ರ ಎಂಬ ಎರಡು ಮಕ್ಕಳಿದ್ದಾರೆ ವೀರಪ್ಪ ದಂಪತಿಗೆ.