ಮೈಸೂರು: ಪೆÇಗರು ಚಲನ ಚಿತ್ರದಲ್ಲಿ ಬ್ರಾಹ್ಮಣ ಜನಾಂಗದ ಆಚರಣೆ ಸ್ವಾತಂತ್ರ್ಯತೆ ಧಾರ್ಮಿಕತೆ ಭಾವನೆಗೆ ಧಕ್ಕೆ ತಂದ ಪುರೋಹಿತರ ಮೇಲಿನ ಅವಹೇಳನ ದೌರ್ಜನ್ಯ ದೃಶ್ಯದ ತುಣಕಗಳು, ಸಂಭಾಷಣೆಯನ್ನು ಚಿತ್ರಿಕರಿಸಿದ ಪೆÇಗರು ಚಿತ್ರ ತಂಡ ಮತ್ತು ಅನುಮತಿ ನೀಡಿದ ಸೆನ್ಸಾರ್ ಮಂಡಳಿಯ ಅಧಿಕಾರಿಗಳ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಆಗ್ರಹಿಸಿ ಬ್ರಾಹ್ಮಣ ಸಮುದಾಯದವರು ಮಂಗಳವಾರ ಮೈಸೂರಲ್ಲಿ ಪ್ರತಿಭಟನೆ ನಡೆಸಿದರು.
ಸರ್ವೇ ಜನಃ ಸುಖಿನೋ ಭವಂತು ಲೋಕ ಸಮಸ್ತಾ ಸುಖಿನೋ ಭವಂತು ಎಂದು ಎಲ್ಲರ ಹಿತಕ್ಕಾಗಿ ಪ್ರಾರ್ಥಿಸುವ ದೇವರ ಪೂಜಾ ಕೈಂಕರ್ಯದಲ್ಲಿ ತಮ್ಮ ಪಾಡಿಗೆ ತಾವು ಕಾರ್ಯ ನಿರ್ವಹಿಸುತ್ತಿರುವ ಅರ್ಚಕರ ನಡತೆಯ ಬಗ್ಗೆ ನಂದಕಿಶೋರ ನಿರ್ದೇಶನದ ಪೆÇಗರು ಚಿತ್ರದಲ್ಲಿ ಬ್ರಾಹ್ಮಣರ ಆಚರಣೆ ನಂಬಿಕೆಯ ಪ್ರತೀಕವಾದ ಜನಿವಾರದ ಮೇಲೆ ಕಾಲಿಡುವುದು ದೌರ್ಜನ್ಯದ ದಬ್ಬಾಳಿಕೆಯ ದೃಶ್ಯದ ತುಣುಕಗಳು ಸಂಭಾಷಣೆಗಳು ಶಾಂತಿಯುತ ವಾತವರಣದಲ್ಲಿ ಸೌಹಾರ್ದತೆ ಕೆದಡಿ ಅಹಿಂಸಾ ಮಾರ್ಗಕ್ಕೆ ಪೆÇಗರು ಚಿತ್ರ ಕಾರಣವಾಗಿದೆ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.
ಆದರೆ ಇತ್ತೀಚಿನ ದಿನದಲ್ಲಿ ಸಮಾಜದ ಶಾಂತಿ ಕೆದಡುವ ಚಿತ್ರಗಳಿಗೆ ಅವಕಾಶ ಕಲ್ಪಿಸುವ ಚಿತ್ರಗಳಿಗೆ ಅನುಮತಿ ನೀಡುತ್ತಿರುವ ಸೆನ್ಸಾರ್ ಮಂಡಳಿಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ತಮ್ಮ ಕಾರ್ಯಲೋಪದಿಂದಾಗಿ ಭ್ರಷ್ಟಾಚಾರದ ದುರಾಸೆಯಿಂದ ಶಿಷ್ಟಾಚಾರ ಉಲ್ಲಂಘಿಸಿರುವುದು ಎಷ್ಟರ ಮಟ್ಟಿಗೆ ಸರಿ? ಇದರ ಕಡೆ ಸರ್ಕಾರ ಗಮನ ಹರಿಸಿ ಸೂಕ್ತ ತನಿಖೆ ಮಾಡಲು ಆದೇಶಿಸಬೇಕಿದೆ ಎಂದು ಪ್ರತಿಭಟನಾನಿರತರರು ಒಕ್ಕೊರಳಿನಿಂದ ಒತ್ತಾಯಿಸಿದರು.
ಸಮಾಜದಲ್ಲಿ ಅರ್ಚಕರ ನಡವಳಿಕೆಯ ಬಗ್ಗೆ ಪೆÇಗರು ಚಿತ್ರದಲ್ಲಿ ತಪ್ಪು ಭಾವನೆ ತರಲು ಕಾರಣರಾಗಿರುವ ದೃಶ್ಯಗಳನ್ನ ಸಂಭಾಷಣೆಯನ್ನ ಈ ಕೂಡಲೇ ರದ್ದುಗೊಳಿಸಬೇಕು. ಪೆÇಗರು ಚಿತ್ರತಂಡದ ನಿರ್ಮಾಪಕ, ನಿರ್ದೇಶಕನ ವಿರುದ್ಧ ಕ್ರಮ ಕೈಗೊಂಡು ನ್ಯಾಯ ಒದಗಿಸಬೇಕೆಂದು ಬ್ರಾಹ್ಮಣ ಸಮುದಾಯದ ಪರವಾಗಿ ಮೈಸೂರು ಜಿಲ್ಲಾ ಬ್ರಾಹ್ಮಣ ಸಂಘದ ಸದಸ್ಯರು ಆಗ್ರಹಿಸಿದರು.
ಪೆÇಗರು ಚಿತ್ರತಂಡ ಮತ್ತು ಸೆನ್ಸಾರ್ ಮಂಡಳಿಯ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲು ಮನವಿಯನ್ನ ಮೈಸೂರು ಜಿಲ್ಲಾಧಿಕಾರಿಗಳ ಮುಖೇನ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಚಿವ ಸಿಸಿ ಪಾಟೀಲ್, ಮುಜರಾಯಿ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರಿಗೆ ಸಲ್ಲಿಸಲಾಯಿತು.
ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ವತಿಯಿಂದ ಮೈಸೂರಿನ ಡಿಸಿ ಕಚೇರಿ ಮುಂಭಾಗ ನಡೆದ ಪ್ರತಿಭಟನೆಯಲ್ಲಿ 200ಕ್ಕೂ ಹೆಚ್ಚು ವಿಪ್ರ ಸಮುದಾಯದ ಮುಖಂಡರು ಭಾಗಿಯಾಗಿದ್ದರು.
ಪ್ರತಿಭಟನೆಯಲ್ಲಿ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ ಟಿ ಪ್ರಕಾಶ್, ಸಮಾಜ ಸೇವಕರಾದ ಕೆ ರಘುರಾಂ ವಾಜಪೇಯಿ, ಬ್ರಾಹ್ಮಣ ಸಮಾಜದ ಮುಖಂಡ ನಂ ಶ್ರೀಕಂಠಕುಮಾರ್, ಶ್ರೀತುಳು ಶಿವಳ್ಳಿ ಮಾಧ್ವ ಬ್ರಾಹ್ಮಣ ಮಹಾಮಂಡಳಿ ಎಂ ಕೆ ಪುರಾಣಿಕ್ ಸೇರಿದಂತೆ ಬ್ರಾಹ್ಮಣ ವಿವಿಧ ಸಂಘಟನೆಯ ಅಧ್ಯಕ್ಷರು, ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.