ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ.
ಚಾಮರಾಜನಗರ: ಜಾತ್ರೆಗೆ ಹೋಗಿ ಬರುವೆ ಎಂದು ಹೊರಟ ಯುವಕನಿಗೆ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೆ ಸಾವನ್ನಪ್ಪಿದ್ದಾನೆ.
ವೆಂಕಟಯ್ಯನ ಛತ್ರ ಹೊಸೂರು ಗ್ರಾಮದ ಗುರುಸಿದ್ದಪ್ಪ ಅವರ ಮಗ ಪ್ರದೀಪ(19) ಮೃತ ಯುವಕ.
ಹರದನಹಳ್ಳಿ ಸಮೀಪ ಅಪಘಾತವಾಗಿದೆ.
ಜಾತ್ರೆ ನಡೆಯುತ್ತಿದ್ದ ನಂಜೇದೇವನಪುರ ಗ್ರಾಮಕ್ಕೆ ಬರುತ್ತಿದ್ದಾಗ ವಾಹನವೊಂದು ಡಿಕ್ಕಿ ಹೊಡೆದುಕೊಂಡು ಹೋಗಿದ್ದು ಆತ ಸ್ಥಳದಲ್ಲೆ ದಾರುಣವಾಗಿ ಸಾವನ್ನಪ್ಪಿದ್ದಾನೆ. ಸಂಚಾರಿ ಠಾಣೆಯಲ್ಲಿ ದೂರು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.