ಮೈಸೂರು: ಕರ್ನಾಟಕ ಮತ್ತು ತಮಿಳುನಾಡು ಸೇರಿದಂತೆ ಕಾವೇರಿ ನದಿಯ ಉದ್ದಗಲ್ಲಕ್ಕೂ ಇರುವಂತಹ ಸಾಂಸ್ಕೃತಿಕ ಮತ್ತು ಐತಿಹಾಸಿಕ ಹಿನ್ನೆಲೆಯ ಚಿತ್ರಣವು ಕಾವೇರಿ ಕಲಾ ಕೇಂದ್ರದಲ್ಲಿಯೇ ದೊರಯಲಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೆಶ್ವರ್ ಅವರು ತಿಳಿಸಿದರು.
ನಗರದಲ್ಲಿ ದಸರಾ ವಸ್ತು ಪ್ರದರ್ಶನದ ಆವರಣದಲ್ಲಿ ಕೇಂದ್ರ ಸರ್ಕಾರದ ನೆರವಿನಿಂದ ನಿರ್ಮಾಣವಾಗಿರುವ ಕಾವೇರಿ ಕಲಾ ಕೇಂದ್ರಕ್ಕೆ ಭೇಟಿ ನೀಡಿ ಅವರು ಮಾತನಾಡಿದರು.
ಕಾವೇರಿ ನದಿಯು ಹುಟ್ಟುವ ಸ್ಥಳದಿಂದ ಸಮುದ್ರ ಸೇರುವವರೆಗೂ ಸಿಗುವ ಪ್ರೇಕ್ಷಣೀಯ ಸ್ಥಳಗಳ ಪರಿಚಯ ಇಲ್ಲಿಯೇ ಆಗಲಿದೆ ಎಂದು ಅವರು ಹೇಳಿದರು.
ಉದ್ಘಾಟನೆಗೆ ಸಿದ್ದವಾಗಿರುವ ಕಾವೇರಿ ಕಲಾ ಕೇಂದ್ರವು ಮುಂದಿನ ದಿನಗಳಲ್ಲಿ ಇದು ಶಾಲಾ ಮಕ್ಕಳಿಗೆ ಹಾಗೂ ಕಾವೇರಿ ನದಿಯ ಬಗ್ಗೆ ಕೌತುಕದಿಂದ ತಿಳಿದುಕೊಳ್ಳಲು ಬರುವ ಪ್ರವಾಸಿಗರಿಗೆ ಗಮನ ಸೆಳೆಯುವ ಕೇಂದ್ರವಾಗಲಿದೆ ಎಂದರು.
ವಸ್ತು ಪ್ರದರ್ಶನವನ್ನು ಆಧುನಿಕವಾಗಿ ಕಲಾಕೇಂದ್ರವನ್ನಾಗಿಸಲು 150ಕೋಟಿಯ ಯೋಜನೆಯನ್ನು ರೂಪಿಸಲಾಗಿದ್ದು, ಇದಕ್ಕೆ ಸಂಬಂಧ ಪಟ್ಟ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ದಸರಾ ವಸ್ತುಪ್ರದರ್ಶನ ಅಧ್ಯಕ್ಷ ಎ. ಹೇಮಂತ್ ಕುಮಾರ್ ಗೌಡ ಸೇರಿದಂತೆ ಇತರರು ಹಾಜರಿದ್ದರು.