ಮೈಸೂರು: ಮೈಸೂರಿನ ಹಳೆ ಗತವೈಭವವನ್ನು ನೆನಪಿಸುವಂತಹ ಕಾರ್ಯಕ್ರಮಗಳನ್ನು ರೂಪಿಸುವಂತಹ ಕೆಲಸವಾಗಬೇಕಿದೆ. ಇದಕ್ಕಾಗಿ ಕರ್ನಾಟಕ ಸರ್ಕಾರ ಪ್ರವಾಸೋದ್ಯಮಕ್ಕೆ ಈ ಬಾರಿಯ ಬಜೆಟ್ ನಲ್ಲಿ ಅತಿ ಹೆಚ್ಚು ಒತ್ತು ನೀಡಿದ್ದಾರೆ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೆಶ್ವರ್ ಅವರು ತಿಳಿಸಿದರು.
ಶನಿವಾರ ಮೈಸೂರಿನ ಲಲಿತ ಮಹಲ್ ಪ್ಯಾಲೇಸ್ ಹೋಟೆಲ್ ಸಭಾಂಗಣದಲ್ಲಿ ಹೋಟೆಲ್, ಟ್ರಾವೆಲ್ಸ್, ಗೈಡ್ಸ್, ಯೋಗ ಕೇಂದ್ರ ನಿಯೋಗದವರ ಜೊತೆ ಸಂವಾದ ನಡೆಸಿ ಮಾತನಾಡಿದರು.
ಬಹಳ ವರ್ಷಗಳ ಹಿಂದೆಯೇ ಕಾವೇರಿ ನದಿಯು ಹರಿಯುವ 5 ಜಿಲ್ಲೆಗಳನ್ನು ಒಟ್ಟುಗೂಡಿಸಿ ಕಾವೇರಿ ಪ್ರವಾಸೋದ್ಯಮ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆಯಾಗಿದ್ದು, ಈಗ ಇದನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ತಿಳಿಸಿದರು.
ಮೈಸೂರಿಗೆ ಪ್ರವಾಸಕ್ಕೆಂದು ಬರುವ ಪ್ರವಾಸಿಗರ ವಾಹನಕ್ಕೆ ಪಾಕಿರ್ಂಗ್ ಗಾಗಿ ಒಂದೇ ಬಾರಿ ಹಣ ಪಾವತಿಸುವ ವ್ಯವಸ್ಥೆಯನ್ನು ರೂಪಿಸಲಾಗುವುದು. ಇದರ ಜೊತೆಗೆ ವಿದೇಶಗಳ ಮಾದರಿಯಲ್ಲೇ ಸ್ವಚ್ಛತೆಗೆ ಆದ್ಯತೆ ನೀಡಲಾಗುವುದು ಎಂದರು.
ಮೈಸೂರಿಗೆ ಹೊರ ರಾಜ್ಯಗಳಿಂದ ಬರುವ ಪ್ರವಾಸಿಗರು ಚೆಕ್ ಪೆÇೀಸ್ಟ್ ನಲ್ಲಿಯೇ ತೆರಿಗೆ ಪಾವತಿಸಿ, ದಾಖಲೆಯನ್ನು ತೋರಿಸಿ ಬಂದರೂ ಸಹ ಪ್ರವಾಸಿಗರಿಗೆ ಪೆÇಲೀಸರು ದಾಖಲೆ ತೋರಿಸುವಂತೆ ತೊಂದರೆ ನೀಡುತ್ತಿರುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಪೆÇಲೀಸ್ ಆಯುಕ್ತರೊಂದಿಗೆ ಚರ್ಚಿಸಿ ಸಮಸ್ಯೆ ಬಗೆ ಹರಿಸುವ ಭರವಸೆ ನೀಡಿದರು.
ಕಳೆದ ಆರ್ಥಿಕ ಸಾಲಿನಲಿ ಬಜೆಟ್ ಮಂಡಿಸುವ ಸಂದರ್ಭದಲ್ಲಿ ದೇಶದಲ್ಲಿ ಪಾರಂಪರಿಕ ವಿಶ್ವವಿದ್ಯಾಲಯ ಸ್ಥಾಪಿಸಲು ಪ್ರಸ್ತಾಪವಾಗಿದ್ದು, ಅದು ಮೈಸೂರಿನಲ್ಲಿಯೇ ಸ್ಥಾಪನೆಯಾಗಬೇಕು ಎಂಬ ಪ್ರಸ್ತಾಪ ಪ್ರವಾಸೋದ್ಯಮ ಇಲಾಖೆಯಿಂದಲೇ ಹೋಗಿದೆ. ಇದರಲ್ಲಿ ಮೈಸೂರ್ ಸ್ಕೂಲ್ ಆಫ್ ಯೋಗ ಎಂಬ ಶಾಲೆ ಸ್ಥಾಪಿಸಿ ಯೋಗವನ್ನು ಬ್ರಾಂಡ್ ಮಾಡಲು ತಿಳಿಸಿದರು.
ಸಭೆಗೂ ಮುನ್ನ ಹೆಲಿಟೂರಿಸಂಗಾಗಿ ಹೆಲಿಪ್ಯಾಡ್ ಮಾಡಲು ಉದ್ದೇಶಿರುವ ಲಲಿತ್ ಮಹಲ್ ಪ್ಯಾಲೇಸ್ ಮೈದಾನವನ್ನು ಅಧಿಕಾಗಳೊಂದಿಗೆ ಪರಿಶೀಲಿಸಿರು.
ಇದೇ ಸಂದರ್ಭದಲ್ಲಿ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಎ.ಹೇಮಂತ್ ಕುಮಾರ್ ಗೌಡ, ಪಾರಂಪರಿಕ ಇಲಾಖೆಯ ಉಪನಿರ್ದೇಶಕಿ ನಿರ್ಮಲ ಮಠಪತಿ, ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕ ಮೋತಿಲಾಲ್, ಮೈಸೂರು ಟ್ರಾವೆಲ್ ಅಸೋಸಿಯೇಷನ್ ಅಧ್ಯಕ್ಷ ಪ್ರಶಾಂತ್ ಸೇರಿದಂತೆ ಇತರರು ಉಪಸ್ಥಿತರಿದ್ದರು.