ಮೈಸೂರು: ಯಾವುದೇ ವಿಚಾರವಾಗಲಿ ಇನ್ನು ಮುಂದೆ ಜೆ.ಡಿ.ಎಸ್ ಜೊತೆ ಮೈತ್ರಿ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಮೈಮುಲ್ ವಿಚಾರವಾಗಲಿ, ಬೇರೆ ಯಾವುದೇ ವಿಚಾರವಾಗಲಿ ಇನ್ನು ಮುಂದೆ ಜೆ.ಡಿ.ಎಸ್ ನೊಂದಿಗೆ ಯಾವುದೇ ಮೈತ್ರಿ ಇಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.
ಸಹಕಾರ ಸಂಘಗಳ ಚುನಾವಣೆ ಚಿಹ್ನೆ ಮೇಲೆ ನಡೆಯುವುದಿಲ್ಲ. ಸ್ಥಳೀಯವಾಗಿ ಅವರು ಹೊಂದಾಣಿಕೆ ಮಾಡಿಕೊಂಡಿರುತ್ತಾರೆ. ಹಾಗಿದ್ದರೂ ನಮ್ಮ ಕಡೆಯಿಂದ ಜೆ.ಡಿ.ಎಸ್ ಗೆ ಬೆಂಬಲ ಇಲ್ಲ ಎಮದು ಸಿದ್ದರಾಮಯ್ಯ ಹೇಳಿದರು.