ಮೈಸೂರು: ಮೈಸೂರು ಮೈಮುಲ್ ಚುನಾವಣೆಯಲ್ಲಿ ಶಾಸಕ ಜಿ. ಟಿ. ದೇವೇಗೌಡ ಬೆಂಬಲಿತ ತಂಡ ಜಯಭೇರಿ ಬಾರಿಸಿದೆ.
ಈ ಮೂಲಕ ಮಾಜಿ ಸಿಎಂ ಹೆಚ್. ಡಿ. ಕುಮಾರ ಸ್ವಾಮಿ ಅವರಿಗೆ ಒಂದು ರೀತಿಯಲ್ಲಿ ಮುಖಭಂಗವಾಗಿದೆ
ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಈ ಚುನಾವಣೆಯಲ್ಲಿ ಪ್ರಚಾರ ನಡೆಸಿದರೂ ಜೆಡಿಎಸ್- ಕಾಂಗ್ರೆಸ್ ಮೈತ್ರಿಕೂಟಕ್ಕೆ ತೀವ್ರ ಹಿನ್ನಡೆಯಾಗಿದೆ.
15 ನಿರ್ದೇಶಕ ಸ್ಥಾನಕ್ಕೆ ಮಂಗಳವಾರ ನಡೆದ ಚುನಾವಣೆಯಲ್ಲಿ 12 ಸ್ಥಾನಗಳು ಜಿಟಿಡಿ ಬೆಂಬಲಿತ ಬಣದ ಪಾಲಾಗಿದೆ. 3 ಸ್ಥಾನಗಳು ಮಾತ್ರ ಹೆಚ್‍ಡಿಕೆ ಬೆಂಬಲಿತ ಬಣಕ್ಕೆ ಲಭಿಸಿದೆ.
ಈ ಪೈಕಿ ಜೆಡಿಎಸ್ ಬೆಂಬಲಿತ ಸದಸ್ಯರು ಗೆದ್ದಿದ್ದು ಮಾತ್ರ ಒಬ್ಬರು ಮಾತ್ರ.
ಈ ಚುನಾವಣೆಯಲ್ಲಿ ಹೆಚ್.ಡಿ.ಕೆ ಬಣ ಬೆಂಬಲಿತ ಹೆಚ್.ಡಿ.ರೇವಣ್ಣ ಭಾಮೈದ ಎಸ್.ಕೆ. ಮಧುಚಂದ್ರ ಸೋಲನಪ್ಪಿದ್ದಾರೆ.
ಮೈಸೂರು ವಿಭಾಗದ 7 ಹಾಗೂ ಹುಣಸೂರು ವಿಭಾಗದ 8 ಸೇರಿ ಒಟ್ಟು 15 ನಿರ್ದೇಶಕ ಸ್ಥಾನಗಳಿಗೆ ಮತದಾನ ನಡೆಯಿತು. ಈ ಪೈಕಿ ಬಹುತೇಕ ಜಿ.ಟಿ.ದೇವೇಗೌಡ ನೇತೃತ್ವದ ಬಣದ 12 ಮಂದಿ ಜಯ ಗಳಿಸುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ.