ಮೈಸೂರು: ಫೇಸ್ಬುಕ್ ಮೂಲಕ ಯುವಕರನ್ನು ಪರಿಚಯ ಮಾಡಿಕೊಂಡು ವಂಚಿಸುತ್ತಿದ್ದ ಖತರ್ನಾಕ್ ವಂಚಕಿಯನ್ನು ಮೈಸೂರಿನ ಮೇಟಗಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಅಂದರಹಳ್ಳಿ, 2ನೇ ಮುಖ್ಯರಸ್ತೆ, 3ನೆ ಕ್ರಾಸ್ ವಾಸಿ ಮೇಘಾ ಅಲಿಯಾಸ್ ಹರಿಣಿ (25) ಬಂಧಿತ ಯುವತಿ.
ಫೇಸ್ ಬುಕ್ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ಸುಂದರವಾದ ಹುಡುಗಿಯರ ಫೆÇೀಟೋ ಹಾಕಿ ತನ್ನದೇ ಫೆÇೀಟೋ ಎಂದು ನಂಬಿಸಿ ಯುವಕರನ್ನು ಬಲೆಗೆ ಬೀಳಿಸಿಕೊಂಡು ಅವರಿಂದ ಹಣ, ಆಭರಣ ಪಡೆದು ವಂಚಿಸುತ್ತಿದ್ದ ಖತರ್ನಾಕ್ ವಂಚಕಿ ಪೆÇಲೀಸರ ಸೆರೆ ಆಗಿದ್ದಾಳೆ.
ರಾಮನಗರ ಜಿಲ್ಲೆ ಮಾಗಡಿ ಟೌನ್ನಲ್ಲಿ ವಾಸವಾಗಿದ್ದ ಮೇಘಾ ಫೇಸ್ಬುಕ್ನಲ್ಲಿ ಚಿನ್ನುಗೌಡ ಎಂಬ ಹೆಸರಿನ ಪೆÇ್ರಫೈಲ್ ಸೃಷ್ಟಿಸಿ, ರವಿ ಎಂಬಾತನಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದಾಳೆ.
ಆತ ರಿಕ್ವೆಸ್ಟ್ ಒಪ್ಪಿಕೊಂಡ ಮೇಲೆ ಇಬ್ಬರೂ ಪರಸ್ಪರ ಮೊಬೈಲ್ ನಂಬರ್ ಹಂಚಿಕೊಂಡು ತನ್ನ ಹೆಸರು ಬಿಂದುಗೌಡ ಎಂದು ಹಾಗೂ ಸುಂದರವಾದ ಹುಡುಗಿಯರ ಫೆÇೀಟೋಗಳನ್ನು ತನ್ನದೇ ಫೆÇೀಟೋ ಎಂದು ಕಳುಹಿಸಿ ಪರಿಚಯಿಸಿಕೊಂಡಿದ್ದಾಳೆ.
ನಿಮ್ಮನ್ನು ವಿಜಯನಗರದ ವಾಟರ್ ಟ್ಯಾಂಕ್ ಬಳಿ ನೋಡಿದ್ದು, ಮದುವೆಯಾಗಬೇಕೆಂದು ತನ್ನ ಬಯಕೆ ಎಂದು ರವಿಗೆ ನಂಬಿಸಿ ತಾನು ಒಬ್ಬಳೇ ಮಗಳಾಗಿದ್ದು, ಮೈಸೂರಿನ ವಿಜಯನಗರ 2ನೆ ಹಂತದಲ್ಲಿ ವಾಸವಾಗಿದ್ದೇನೆ. ತಮ್ಮ ತಂದೆಗೆ ಎರಡು ಪೆಟ್ರೋಲ್ ಬಂಕ್ ಮತ್ತು ಬಾರ್ಗಳು ಇರುವುದಾಗಿ ಹೇಳಿಕೊಂಡಿದ್ದಾಳೆ.
ನಿಮ್ಮನ್ನು ಪ್ರೀತಿಸಿ ಮದುವೆಯಾಗಬೇಕೆಂದು ಆಸೆ ಪಟ್ಟಿರುವ ಕಾರಣ ನಿಮ್ಮ ಹುಟ್ಟುಹಬ್ಬಕ್ಕೆ ಸುಮಾರು 45 ಲಕ್ಷ ರೂ. ಬೆಲೆಬಾಳುವ ಫಾರ್ಚುನರ್ ಕಾರ್ ಕೊಡಿಸುವುದಾಗಿ ನಂಬಿಸಿದ್ದಾಳೆ.
ಕಾರ್ ಖರೀದಿಸಲು ಒಂದೂವರೆ ಲಕ್ಷ ಹಣ ಕಡಿಮೆಯಾಗಿದ್ದು, ಅದನ್ನು ನನ್ನ ಸ್ನೇಹಿತ ಶಿವು ಎಂಬುವನನ್ನು ಕಳುಹಿಸುತ್ತಿದ್ದು, ಅವನ ಕೈಯಲ್ಲಿ ಕೊಟ್ಟು ಕಳುಹಿಸು ಎಂದು ಹೇಳಿ ರವಿಯಿಂದ ಹಣ ಪಡೆದಿದ್ದಾಳೆ.
ರವಿ ಜತೆ ಫೆÇೀನ್ನಲ್ಲಿ ಮಾತನಾಡುವಾಗ ನಿಮ್ಮ ತಾಯಿಯನ್ನು ಪರಿಚಯ ಮಾಡಿಕೊಡುವಂತೆ ಹಾಗೂ ತಮ್ಮಿಬ್ಬರ ಮದುವೆ ವಿಚಾರ ತಿಳಿಸುವಂತೆ ಹೇಳಿದ್ದಾಳೆ. ಅದರಂತೆ ರವಿ ಈಕೆಯನ್ನು ತನ್ನ ತಾಯಿಗೆ ಪರಿಚಯಿಸಿದ್ದಾರೆ. ನಂತರ ಅವರ ತಾಯಿಯ ಮೊಬೈಲ್ ನಂಬರ್ ಪಡೆದು ಅವರ ಜತೆಯೂ ಮಾತನಾಡಿದ ವಂಚಕಿ ನಿಮ್ಮ ಫೆÇೀಟೋಗಳನ್ನು ಕಳುಹಿಸುವಂತೆ ಹೇಳಿದ್ದಾಳೆ.
ಫೆÇೀಟೋದಲ್ಲಿ ರವಿ ತಾಯಿ ಧರಿಸಿದ್ದ ಚಿನ್ನದ ಸರ ಬಹಳ ಚೆನ್ನಾಗಿದೆ. ಅದೇ ರೀತಿಯ ಸರವನ್ನು ತಾನು ಮಾಡಿಸಿಕೊಳ್ಳುತ್ತೇನೆ. ಅದಕ್ಕಾಗಿ ಆ ಸರವನ್ನು ತಾನು ಕಳುಹಿಸುವ ತನ್ನ ಸ್ನೇಹಿತನ ಬಳಿ ಕೊಡುವಂತೆ ತಿಳಿಸಿ ಆಭರಣದ ಅಂಗಡಿಯಲ್ಲಿ ಡಿಸೈನ್ ತೋರಿಸಿದ ನಂತರ ಸರವನ್ನು ಹಿಂತಿರುಗಿಸುವುದಾಗಿ ಹೇಳಿದ್ದಾಳೆ.
ಆಕೆಯ ಮಾತನ್ನು ನಂಬಿದ ರವಿ, ತಾಯಿಯ 85 ಗ್ರಾಂ. ಚಿನ್ನದ ಸರ ಮತ್ತು ಅದರೊಂದಿಗೆ ಒಂದು ರೇμÉ್ಮ ಸೀರೆ ಸಹ ಕಳುಹಿಸಿಕೊಟ್ಟಿದ್ದಾರೆ.
ನಂತರ ರವಿಯ ತಾಯಿ ಬಳಿ ಇರುವ ಎಲ್ಲಾ ಒಡವೆಗಳ ಡಿಸೈನ್ಗಳನ್ನು ನಿಮ್ಮ ಮನೆ ಸೊಸೆಯಾಗಿ ಬರುವ ನಾನು ಅದೇ ರೀತಿ ಮಾಡಿಸಿಕೊಳ್ಳುತ್ತೇನೆ. ಅದಕ್ಕಾಗಿ ತಮ್ಮ ಎಲ್ಲಾ ಒಡವೆಗಳನ್ನು ತನ್ನ ಸ್ನೇಹಿತನ ಬಳಿ ಕಳುಹಿಸಿಕೊಡಿ. ನಾನು ಆ ರೀತಿಯ ಒಡವೆಗಳನ್ನು ಮಾಡಿಸಿಕೊಂಡ ನಂತರ ತಮಗೆ ಎಲ್ಲಾ ಒಡವೆಗಳನ್ನು ಮರಳಿ ಕೊಡುತ್ತೇನೆ ಎಂದು ಹೇಳಿದ್ದಾಳೆ.
ಆಕೆಯ ಮಾತಿನಲ್ಲಿ ಯಾವುದೇ ಸಂಶಯಬಾರದ ಕಾರಣ ತನ್ನ ತಾಯಿ ಬಳಿ ಇದ್ದ ಸುಮಾರು 480 ಗ್ರಾಂ. ಒಡವೆಗಳನ್ನು ಪಡೆದು ಆಕೆಗೆ ತಲುಪಿಸಿದ್ದಾರೆ. ಹಲವು ದಿನಗಳಾದರೂ ಒಡವೆಗಳನ್ನು ಹಿಂತಿರುಗಿಸದೆ ಇಲ್ಲಸಲ್ಲದ ಕಾರಣಗಳನ್ನು ಹೇಳಿ ನಂಬಿಸಿ ಅವರನ್ನು ವಂಚಿಸಿ ನಂತರ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾಳೆ.
ಆಕೆಯ ವರ್ತನೆಯಿಂದ ಅನುಮಾನಗೊಂಡ ರವಿ ಮೋಸ ಹೋಗಿರುವುದನ್ನು ಅರಿತು ಮೇಟಗಳ್ಳಿ ಪೆÇಲೀಸ್ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.
ತನಿಖೆ ಕೈಗೊಂಡ ಪೆÇಲೀಸರು ವಂಚಕಿ ಬಗ್ಗೆ ಮಾಹಿತಿ ಕಲೆ ಹಾಕಿ ಆರೋಪಿ ಬಿಂದುಗೌಡ ಎಂಬಾಕೆಯನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಈಕೆಯ ನಿಜವಾದ ಹೆಸರು ಮೇಘ ಅಲಿಯಾಸ್ ಹರಿಣಿ ಎಂಬುದು ಗೊತ್ತಾಗಿದೆ.
ಈಕೆಯು ಚಾಳಿಬಿದ್ದ ಖತರ್ನಾಕ್ ಆರೋಪಿಯಾಗಿದ್ದು, ಈ ಹಿಂದೆ 2018ರಲ್ಲಿ ಮಂಡ್ಯದಲ್ಲಿ ಸಾನ್ವಿ ಸಿರಿಗೌಡ ಎಂಬ ಹೆಸರಿನ ಫೇಸ್ ಬುಕ್ ಖಾತೆ ತೆರೆದು ಯೋಗಾನಂದ ಎಂಬುವವರಿಗೆ ರಿಕ್ವೆಸ್ಟ್ ಕಳುಹಿಸಿ ತಾನು ಅಗರ್ಭ ಶ್ರೀಮಂತಳು ಹಾಗೂ ತನ್ನ ತಂದೆ ದೊಡ್ಡ ಉದ್ಯಮಿ ಎಂದು ನಂಬಿಸಿ ಆತನಿಗೆ ರೈಲ್ವೆ ಇಲಾಖೆಯಲ್ಲಿ ಒಳ್ಳೆಯ ಕೆಲಸ ಕೊಡಿಸುತ್ತೇನೆಂದು 15 ಲಕ್ಷ ರೂ.ಗಳನ್ನು ಆತನಿಂದ ಪಡೆದು ವಂಚಿಸಿದ್ದಳು. ಈ ಸಂಬಂಧ ಮಂಡ್ಯ ಈಸ್ಟ್ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದಲ್ಲದೆ, ಬೆಂಗಳೂರಿನ ಜ್ಞಾನಭಾರತಿ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಶ್ರೀನಿವಾಸ್ ಎಂಬುವವರಿಗೆ ಸ್ವಾತಿಗೌಡ ಖುಷಿ ಎಂದು ಫೇಸ್ಬುಕ್ ಮೆಸೆಂಜರ್ ಮೂಲಕ ಪರಿಚಯಿಸಿಕೊಂಡು ತನಗೆ 8 ಸಾವಿರದಿಂದ 10 ಸಾವಿರ ಅಡಿ ಕಮರ್ಷಿಯಲ್ ಜಾಗ ಬೇಕಾಗಿದ್ದು, ಸಾಕಷ್ಟು ಕಮಿಷನ್ ಕೊಡುವುದಾಗಿ ನಂಬಿಸಿ 9.70 ಲಕ್ಷ ರೂ.ಗಳನ್ನು ಪಡೆದು ವಂಚಿಸಿದ್ದ ಪ್ರಕರಣದಲ್ಲಿ ಬೆಂಗಳೂರಿನ ಜ್ಞಾನಭಾರತಿ ಠಾಣೆ ಪೆÇಲೀಸರು ಬಂಸಿದ್ದರು.
ಈಕೆಯು ಮಾಗಡಿಯಲ್ಲಿ ಇದೇ ರೀತಿ ಒಬ್ಬ ಯುವಕ ಮತ್ತು ಯುವತಿಯೊಬ್ಬಳಿಗೆ ವಂಚಿಸಿದ್ದು, ಈಕೆಯ ಕುಟುಂಬಸ್ಥರು ಹಾಗೂ ಸ್ನೇಹಿತರು ಸದರಿ ವಂಚನೆಗೊಳಗಾದ ಯುವಕ ಮತ್ತು ಯುವತಿಯ ನಷ್ಟವನ್ನು ಪರಿಹರಿಸಿ ಅವರೊಂದಿಗೆ ರಾಜಿ ಮಾಡಿಸಿಕೊಂಡಿದ್ದು, ಈ ಸಂಬಂಧ ಪ್ರಕರಣ ದಾಖಲಾಗದೆ ಇರುವುದು ತಿಳಿದುಬಂದಿದೆ.
ಕೇವಲ 10ನೆ ತರಗತಿ ಓದಿರುವ ಮೇಘ ಅಲಿಯಾಸ್ ಹರಿಣಿ ಪ್ರತಿ ಬಾರಿಯೂ ಇಂತಹ ಅಪರಾಧ ಮಾಡುವಾಗ ಮಧ್ಯವರ್ತಿಗಳನ್ನಾಗಿ ಹೊಸಬರನ್ನೇ ಬಳಸಿಕೊಂಡು ತನ್ನ ಕೆಲಸ ಮುಗಿದ ನಂತರ ತನ್ನ ದೂರವಾಣಿ ಸಂಖ್ಯೆ ಬದಲಾಯಿಸಿ ಅವರ ಸಂಪರ್ಕ ಕಡಿತಗೊಳೊಸುವ ಚಾಲಾಕಿ ವಂಚಕಿ ಆಗಿದ್ದಳು.
ಈಕೆಯ ವಂಚನೆ ಜಾಲದ ಬಗ್ಗೆ ಮತ್ತು ಇದರ ಹಿಂದೆ ಯಾರ್ಯಾರಿದ್ದಾರೆಂಬ ಬಗ್ಗೆ ಸಮಗ್ರ ತನಿಖೆಯನ್ನು ಪೊಲೀಸರು ಕೈಗೊಂಡಿದ್ದಾರೆ.
ಡಿಸಿಪಿ ಡಾ.ಎ.ಎನ್. ಪ್ರಕಾಶ್ ಗೌಡ, ನರಸಿಂಹರಾಜ ವಿಭಾಗದ ಎಸಿಪಿ ಶಿವಶಂಕರ್ ಅವರ ಮಾರ್ಗದರ್ಶನದಲ್ಲಿ ಮೇಟಗಳ್ಳಿ ಠಾಣೆ ಇನ್ಸ್ಪೆಕ್ಟರ್ ಮಲ್ಲೇಶ್, ಪಿಎಸ್ಐಗಳಾದ ವಿಶ್ವನಾಥ್, ನಾಗರಾಜ್ ನಾಯ್ಕ್, ಎಎಸ್ಐ ಮಹದೇವ ಹಾಗೂ ಸಿಬ್ಬಂದಿಗಳಾದ ರಾಜೇಶ್, ಮಧುಕುಮಾರ್, ಶಿವಕುಮಾರ್, ಲಿಖಿತ್, ಶ್ರೀಶೈಲ ಹುಗ್ಗಿ, ರೂಪಾ, ಆಶಾ, ಉಮಾ, ಮಣಿ ಅವರ ತಂಡ ಮಾಡಿ ಆರೋಪಿಯನ್ನು ಬಂಧಿಸುವ ಕಾರ್ಯದಲ್ಲಿ ಯಶಸ್ವಿಯಾಗಿದ್ದಾರೆ.
ಪೊಲೀಸರ ಈ ಕಾರ್ಯವನ್ನು ಪ್ರಶಂಸಿಸಿರುವ ಮೈಸೂರು ನಗರ ಪೆÇಲೀಸ್ ಆಯುಕ್ತ ಡಾ.ಚಂದ್ರಗುಪ್ತ ಅವರು, ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಪೆÇ್ರಫೈಲ್ ಗಳನ್ನು ಸೃಷ್ಟಿಸಿಕೊಂಡು ಸಾರ್ವಜನಿಕರಿಗೆ ನಾನಾ ರೀತಿಯ ಆಮಿಷವೊಡ್ಡಿ ಬಲೆಗೆ ಕೆಡವಲು ಪ್ರಯತ್ನಿಸುವ ಜಾಲಗಳಿಂದ ಜಾಗರೂಕರಾಗಿರಲು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.