ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ಹೆಲ್ಮೆಟ್ ಕುರಿತು ಅರಿವು ಮೂಡಿಸಬೇಕಾದ ಇಲಾಖೆಯೇ ಆ ನಿಯಮಗಳನ್ನ ಪಾಲಿಸದೇ ಇದ್ದರೆ ಅರಿವಿನ ಕಾರ್ಯಕ್ರಮ ಮಾಡಿದರೂ ನಿಷ್ಪ್ರಯೋಜಕ ಹಾಗೆಯೇ ಚಾಮರಾಜನಗರ ಎಸ್ಪಿ ದಿವ್ಯ ಅವರಿಂದ ಹೆಲ್ಮೆಟ್ ಅಭಿಯಾನ ಚಾಲನೆ ಕೂಡ ಒಂದು.
ಚಾಮರಾಜನಗರ ಜಿಲ್ಲಾ ಪೆÇಲೀಸ್ ಇಲಾಖೆ ವತಿಯಿಂದ ಜಿಲ್ಲಾ ಪೆÇಲೀಸ್ ಕಚೇರಿ ಮುಂಭಾಗದಲ್ಲಿ ಹೆಲ್ಮೆಟ್ ಜಾಗೃತಿ ಅಭಿಯಾನಕ್ಕಾಗಿ ಬೈಕ್ ಜಾಥಾ ಹಮ್ಮಿಕೊಂಡಿದ್ದರು.
ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ದಿವ್ಯ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡೋದರ ಜೊತೆಗೆ ರಿಯಾಯ್ತಿ ದರದಲ್ಲಿ ಹೆಲ್ಮೆಟ್ ಸಹ ನೀಡಿದ್ದರು.
ವಿಪರ್ಯಾಸವೆಂದರೆ ಹೆಲ್ಮೆಟ್ ಬಗ್ಗೆ ಅರಿವು ಮೂಡಿಸೋ ಪೈಕಿ ಪೆÇಲೀಸ್ ಇಲಾಖೆ ಪ್ರಮುಖ ಪಾತ್ರವಾದರೂ ಅದೇ ಕಚೇರಿಯ ಬಹುತೇಕ ಸಿಬ್ಬಂದಿಗಳು ಹೆಲ್ಮೆಟ್ ಧರಿಸೋದೆ ಇಲ್ಲ. ಅದೆಷ್ಟೋ ಜನ ವಾರಿಯರ್ಸ್ ಹಾಗೂ ಉತ್ತಮ ಕೆಲಸ ಮಾಡಿರೋವ್ರ ಪೈಕಿ ಕೆಲವರಂತು ಹೆಲ್ಮೆಟ್ ಧರಿಸೋದೆ ಇಲ್ಲ.
ಹಿಂದೆ ಕೆಲಸ ನಿರ್ವಹಿಸಿದ ಕುಲದೀಪ್ ಕುಮಾರ್ ಜೈನ್ ಅವಧಿಯಲ್ಲಿ ಇಂತಹ ದೂರುಗಳಿಗೆ ಅವಕಾಶ ನೀಡದೆ ವಾಹನ ಪೆÇಲೀಸ್ ಸವಾರರಿಗೆ ನೊಟೀಸ್ ನೀಡೋ ಜೊತೆಗೆ ಯುನಿಟ್ ಆಫಿಸರ್‍ಗೂ ಮೆಮೊ ಕೊಡುತ್ತಿದ್ದರು.
ನಂತರದಲ್ಲಿ ಈ ನಿಯಮಗಳು ಮಾಯವಾದವು.
ಈಗ ಈ ರಸ್ತೆ ನಿಯಮಗಳು ಕೇವಲ ಸಂಚಾರಿ ಪೆÇಲೀಸರಿಗಷ್ಟೆ ಮಾತ್ರ ಸೀಮಿತವಾದಂತೆ ಮಾಡಿಕೊಂಡಿದ್ದು, ಇಲಾಖೆಯಲ್ಲಿನ ಬೇರೆಯವರು ಪಾಲನೆ ಮಾಡದಿರುವ ನಿರ್ಲಕ್ಷ್ಯ ನೋಡಿದರೆ ಜಿಲ್ಲಾ ಪೆÇಲೀಸ್ ಇಲಾಖೆಯ ಅಧೀಕ್ಷಕರ ಆಡಳಿತಕ್ಕೆ ಹಿಡಿದ ಕೈಗನ್ನಡಿ ಎಂದರೂ ತಪ್ಪಾಗಲಾರದು.
ಪಟ್ಟಣದೊಳಗೆ ಬಹುತೇಕ ಕಡೆ ರಸ್ತೆ ದಟ್ಟಣೆಯಿಂದ ಕೂಡಿದ್ದು ಅವ್ಯವಸ್ಥೆ ಆಗರವಾಗಿದೆ.
ತ್ರಿಬಲ್ ರೈಡಿಂಗ್, ಅಪ್ರಾಪ್ತ ಮಕ್ಕಳ ವಾಹನ ಚಾಲನೆ ಹೆಚ್ಚಾಗಿದ್ದರೂ ಪಟ್ಟಣದ ಹೊರಗೆ ದಂಡ ವಿಧಿಸುವುದರಲ್ಲಿ ಮಜ್ಞರಾಗಿದ್ದು ಇಲ್ಲೂ ಕೂಡ ಸಂಚಾರ ಠಾಣೆಯ ಆಡಳಿತ ವೈಖರಿ ಎದ್ದು ತೋರುತ್ತಿದೆ.
ಒಟ್ಟಾರೆ ಹೆಲ್ಮೆಟ್ ಅರಿವು ಮೂಡಿಸಲು ಹೊರಟ ಇಲಾಖೆಗೆ ಹತ್ತು ಹಲವಾರು ಸಮಸ್ಯೆಗಳು ನಿರಂತರವಾಗಿ ಇದ್ದರೂ ಪ್ರಕರಣ ಸಂಖ್ಯೆ ಇಳಿಮುಖವಾದಂತಾಗಿಲ್ಲ.
ಪೆÇಲೀಸರೆ ನೀತಿ ನಿಯಮಗಳ ಉಲ್ಲಂಘನೆ ಹೆಚ್ಚಾಗಿರುವಾಗ ಇನ್ನ ಎಷ್ಟರ ಮಟ್ಟಿಗೆ ಜನಸಾಮಾನ್ಯರಿಗೆ ಅರಿವು ಮೂಡಿಸ್ತಾರೆ ಎಂಬುದೇ ಆಶ್ಚರ್ಯವಾಗಿದೆ.