ಇಬ್ಬರು ಕುಖ್ಯಾತ ಕಳ್ಳರ ಬಂಧನ

ಮೈಸೂರು: ಇಬ್ಬರು ಕುಖ್ಯಾತ ಕಳ್ಳರನ್ನು ನಗರದ ಮೇಟಗಳ್ಳಿ ಠಾಣೆ ಪೆÇಲೀಸರು ಬಂಧಿಸಿದ್ದಾರೆ.
ನಗರದ ರಾಜೇಂದ್ರನಗರದ ಜಮೀಲ್ ಖಾನ್ (28), ಶಂಕರ್ (42) ಬಂಧಿತ ಆರೋಪಿಗಳು.
ಮೇಟಗಳ್ಳಿ ಪೆÇಲೀಸ್ ಠಾಣೆಯಲ್ಲಿ ಎಕ್ಸ್ ಟಾರ್ಷನ್ ಮತ್ತು ಬೆದರಿಕೆಗೆ ಸಂಬಂಧಿಸಿದಂತೆ ದಾಖಲಾದ ದೂರಿನ ಆಧಾರದ ಮೇಲೆ ತನಿಖೆ ನಡೆಸಿದ ಪೆÇಲೀಸರು ತಾಂತ್ರಿಕ ಸಾಕ್ಷ್ಯಾಧಾರಗಳು ಮತ್ತು ಬಾತ್ಮೀದಾರರ ಮಾಹಿತಿ ಮೇರೆಗೆ ಈ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜಮೀರ್ ಖಾನ್ ಮೊಹಮ್ಮದ್ ಜಮೀರ್ ಜೊತೆಗೆ ಸೇರಿ 2017ರಿಂದ ಇಲ್ಲಿಯವರೆಗೆ ಇದೇ ತರಹದ ಸಾಕಷ್ಟು ಪ್ರಕರಣಗಳನ್ನು ಮಾಡಿರುವುದಾಗಿ ಪೊಲೀಸರ ವಿಚಾರಣೆ ವೇಳೆ ತಿಳಿಸಿದ್ದಾರೆ.
ಇವರಿಬ್ಬರುಗಳ ವಿರುದ್ಧ ಮೈಸೂರು ನಗರದ ಕುವೆಂಪು ನಗರ, ವಿವಿ ಪುರಂ, ಜಯಲಕ್ಷ್ಮೀಪುರಂ, ಸರಸ್ವತಿಪುರಂ, ನರಸಿಂಹರಾಜ ಪೆÇಲೀಸ್ ಠಾಣೆಗಳಲ್ಲಿ ಮತ್ತು ಇಲವಾಲ ಪೆÇಲೀಸ್ ಠಾಣೆ, ಮದ್ದೂರು ಪೆÇಲೀಸ್ ಠಾಣೆ, ಶ್ರೀರಂಗಪಟ್ಟಣ ಗ್ರಾಮಾಂತರ ಹಾಗೂ ಟೌನ್ ಠಾಣೆಗಳಲ್ಲಿ ಬೆಂಗಳೂರಿನ ಚಾಮರಾಜ ಪೇಟೆ ಮತ್ತು ಕುಂಬಳಗೋಡು ಪೆÇಲೀಸ್ ಠಾಣೆಗಳಲ್ಲಿ ಮತ್ತು ಮಂಡ್ಯ ಗ್ರಾಮಾಂತರ ಪೆÇಲೀಸ್ ಠಾಣೆಗಳಲ್ಲಿ ತಲಾ 1ರಂತೆ 12 ರಾಬರಿ, ಎಕ್ಸ್ ಟಾರ್ಷನ್ ಮತ್ತು ಒಂದು ಬೈಕ್ ಕಳ್ಳತನದ ಪ್ರಕರಣಗಳು ದಾಖಲಾಗಿರುವುದು ಪತ್ತೆ ಆಗಿದೆ.
ಮೈಸೂರು ನಗರದ ಡಿಸಿಪಿಗಳಾದ ಡಾ.ಎ.ಎನ್.ಪ್ರಕಾಶ್ ಗೌಡ, ಗೀತ ಪ್ರಸನ್ನ, ನರಸಿಂಹರಾಜ ವಿಭಾಗದ ಎಸಿಪಿ ಶಿವಶಂಕರ್ ಮಾರ್ಗದರ್ಶನದಲ್ಲಿ ಮೇಟಗಳ್ಳಿ ಠಾಣೆ ಇನ್ಸ್ ಪೆಕ್ಟರ್ ಎ. ಮಲ್ಲೇಶ್ ಹಾಗೂ ಸಿಬ್ಬಂದಿ ಈ ಇಬ್ಬರು ಆರೋಪಿಗಳನ್ನು ಬಂಧಿಸುವ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.