ಮೈಸೂರು: ನಗರದ ಸಿ.ಸಿ.ಬಿ. ಪೆÇಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿದ್ದಾರೆ.
ನಗರದ ಬೆಲವತ್ತ ಗ್ರಾಮದ ಇರ್ಫಾನ್ ಪಾಷ (27) ಹಾಗೂ ಗೌಸಿಯಾನಗರದ ರಿಯಾಜ್ ಪಾಷ (23) ಬಂಧಿತ ಆರೋಪಿಗಳು.
ಬಂಧಿತರಿಂದ 5 ಕೆ.ಜಿ. 570 ಗ್ರಾಂ ತೂಕದ ಗಾಂಜಾ, 4,200 ರೂ ನಗದು, 1 ಮೊಬೈಲ್ ನ್ನು ವಶಪಡಿಸಿಕೊಂಡಿದ್ದಾರೆ.
ಮೈಸೂರು ನಗರದ ಸಿ.ಸಿ.ಬಿ. ಹಾಗೂ ಮೇಟಗಳ್ಳಿ ಪೆÇಲೀಸರು ಮೇಟಗಳ್ಳಿ ಪೆÇಲೀಸ್ ಠಾಣಾ ವ್ಯಾಪ್ತಿಯ ಬೆಲವತ್ತ ಗ್ರಾಮದ ಮನೆಯೊಂದರ ಮೇಲೆ ದಾಳಿ ಮಾಡಿ ಈ ಇಬ್ಬರು ಆರೋಪಿಗಳನ್ನು ಬಂಧಿಸಿ ಅವರು ಸಂಗ್ರಹಿಸಿಟ್ಟುಕೊಂಡಿದ್ದ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ.
ಈ ಸಂಬಂಧ ಮೇಟಗಳ್ಳಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೈಸೂರು ನಗರದ ಡಿ.ಸಿ.ಪಿ.ಗಳಾದ ಡಾ. ಎ.ಎನ್.ಪ್ರಕಾಶ್ ಗೌಡ ಹಾಗೂ ಗೀತ ಪ್ರಸನ್ನ ಅವರ ಮಾರ್ಗದರ್ಶನದಲ್ಲಿ ಸಿ.ಸಿ.ಬಿ. ಎಸಿಪಿ ಸಿ.ಕೆ. ಅಶ್ವಥನಾರಾಯಣ ಅವರ ಉಸ್ತುವಾರಿಯಲ್ಲಿ ಸಿ.ಸಿ.ಬಿ.ಯ ಪೆÇಲೀಸ್ ಇನ್ಸ್‍ಪೆಕ್ಟರ್ ವಿವೇಕಾನಂದ, ಮೇಟಗಳ್ಳಿ ಪೆÇಲೀಸ್ ಠಾಣೆ ಇನ್ಸ್‍ಪೆಕ್ಟರ್ ಎ. ಮಲ್ಲೇಶ, ಪಿ.ಎಸ್.ಐ. ವಿಶ್ವನಾಥ್.ಕೆ., ಎ.ಎಸ್.ಐ.ರವರುಗಳಾದ ಆರ್.ರಾಜು, ಯು.ಉಮೇಶ್ ಸಿಬ್ಬಂದಿಯವರಾದ ದೀಪಕ್, ಜೋಸೆಫ್ ನೊರ್ಹೋನ, ಶ್ರೀನಿವಾಸಪ್ರಸಾದ್, ರಾಧೇಶ್, ಜನಾರ್ಧನ್ ರಾವ್, ರಾಮಯ್ಯ, ಪುರುಷೋತ್ತಮ, ಸುನಿಲ್, ರಘು, ಮಧುಕುಮಾರ್, ರಾಜೇಶ್, ಬಸವರಾಜು, ಭವಾನಿ, ಮಮತ.ಎನ್.ಜಿ. ಶ್ರೀನಿವಾಸರವರುಗಳು ಈ ದಾಳಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.