ಮೈಸೂರು: ಮುಡಾ ಆಯುಕ್ತ ಡಾ.ಡಿ.ಬಿ.ನಟೇಶ್ ಅವರು ಮುಡಾ ಅಧ್ಯಕ್ಷರಾದ ಹೆಚ್.ವಿ,ರಾಜೀವ್ ಅವರ ಸಮ್ಮುಖದಲ್ಲಿ 20210-21 ನೇಸಾಲಿನ ಪರಿಷ್ಕøತ ಆಯವ್ಯಯ ಹಾಗೂ 2021-22ನೇ ಸಾಲಿನ ಅಂದಾಜು ಆಯವ್ಯಯವನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಕಛೇರಿಯಲ್ಲಿ ಶನಿವಾರ ಮಂಡಿಸಿದರು.
ಪ್ರಸಕ್ತ ಆರ್ಥಿಕ ವರ್ಷವಾದ 2021-22 ಸಾಲಿನಲ್ಲಿ 146885.77 ಲಕ್ಷ ರೂಪಾಯಿಗಳಷ್ಟು ಸಂಪನ್ಮೂಲವನ್ನು ಕ್ರೋಢೀಕರಿಸಲು ಉದ್ದೇಶವನ್ನ ಹೊಂದಿದ್ದೇವೆ ಎಂದು ಮುಡಾ ಅಯುಕ್ತ ಡಾ.ನಟೇಶ್ ತಿಳಿಸಿದರು.
2020-21ನೇ ಆರ್ಥಿಕ ವರ್ಷದಲ್ಲಿ ಎಲ್ಲಾ ಮೂಲಗಳಿಂದ ಕ್ರೋಢೀಕರಿಸಲು ಉದ್ದೇಶಿಸಲಾಗಿದ್ದ ಒಟ್ಟು ಅಂದಾಜು ಸಂಪನ್ಮೂಲ ರೂ.32450.00ಲಕ್ಷಗಳಾಗಿದ್ದು, ಒಟ್ಟು ಅಂದಾಜುವೆಚ್ಚ ರೂ.32290.51ಲಕ್ಷ ಗಳ ಆಯವ್ಯಯಕ್ಕೆ ಒಪ್ಪಿಗೆ ಪಡೆಯಲಾಗಿದೆ ಎಂದರು.
ಸಾಮಾನ್ಯ ಆಡಳಿತ ಹಾಗೂ ಮಹಾಯೋಜನೆಗೆ ನಿಗದಿಪಡಿಸಲಾಗಿರುವ ಸಂಪನ್ಮೂಲದ ಮೂಲವಾದ ನಿಧಿ 1ರಿಂದ ಅಂದಾಜಿಸಲಾಗಿದ್ದ ಆದಾಯವು ರೂ.6300 ಲಕ್ಷಗಳಾಗಿದ್ದು, ಫೆಬ್ರವರಿ 2021ರವರೆಗಿನ ಆರ್ಥಿಕ ಪ್ರಗತಿಯ ಆಧಾರದ ಮೇಲೆ 31/3/2021ರವರೆಗೆ ಕ್ರೋಢೀಕರಣವಾಗುವ ಸಂಪನ್ಮೂಲವನ್ನು ರೂ.3380.58ಲಕ್ಷಗಳಿಗೆ ಅಂದಾಜಿಸಲಾಗಿದೆ. ಕಳೆದ ವರ್ಷದಲ್ಲಿ ನಿರೀಕ್ಷಿಸಲಾಗಿದ್ದ ಮೂಲಸಂಪನ್ಮೂಲ ಕ್ರೋಢೀಕರಣವಾಗದೆ ವಿತ್ಚತೀಯ ಕೊರತೆಯಾಗಲು ಕೋವಿಡ್-19ಲಾಕ್ ಡೌನ್ , ಲಾಕ್ ಡೌನ್ ನಂತರದ ಆರ್ಥಿಕ ಸ್ಥಿತಿಗತಿ ಹಾಗೂ ಒಟ್ಟಾರೆ ಆರ್ಥಿಕ ವ್ಯವಸ್ಥೆಯ ಬದಲಾವಣೆಯ ಕಾರಣದಿಂದಾಗಿ ವಿತ್ತೀಯ ಕೊರತೆ ಎದುರಾಗಿರುವುದರಿಂದ 2020-21ನೇ ಸಾಲಿನ ಪರಿಷ್ಕೃತ ಸಂಪನ್ಮೂಲವನ್ನು ರೂ.3380.58ಲಕ್ಷಗಳಿಗೆ ಪರಿಷ್ಕರಿಸಲಾಗಿದೆ ಎಂದವರು ತಿಳಿಸಿದ್ದಾರೆ.
ಸಾಮಾನ್ಯ ಆಡಳಿತ ಮತ್ತು ಮಹಾಯೋಜನೆಗೆ ಮೂಲವಾದ ನಿಧಿ 4ರಿಂದ 2020-21ರ ಆರ್ಥಿಕ ವರ್ಷದ ಆಯವ್ಯಯದಲ್ಲಿ ಅಂದಾಜಿಸಲಾಗಿದ್ದ ಒಟ್ಟು ಮೊತ್ತ ರೂ.50ಲಕ್ಷಗಳಾಗಿದ್ದು ಆದರೆ ಕೋವಿಡ್-19ರ ಲಾಕ್ ಡೌನ್ ಮತ್ತು ನಂತರ ಆರ್ಥಿಕ ಬೆಳವಣಿಗೆಯಿಂದಾಗಿ ಮಾರ್ಚ್ 2021ರ ಅಂತ್ಯಕ್ಕೆ ಪರಿಷ್ಕೃತ ನಿರೀಕ್ಷಿತ ಆದಾಯವು ರೂ.31.07ಲಕ್ಷಗಳಾಗಿರುತ್ತದೆ ಎಂದರು.
ಪ್ರಸಕ್ತ ಆರ್ಥಿಕ ವರ್ಷವಾದ 2021-22 ಸಾಲಿನಲ್ಲಿ 146885.77 ಲಕ್ಷ ರೂಪಾಯಿಗಳಷ್ಟು ಸಂಪನ್ಮೂಲವನ್ನು ಕ್ರೋಢೀಕರಿಸಲು ಉದ್ದೇಶಿಸಿದ್ದು, ಮುಡಾದಿಂದ ಮೈಸೂರು ನಗರದ ಅಭಿವೃದ್ಧಿ ಮತ್ತು ಪ್ರಗತಿಗೆ ಪ್ರಸಕ್ತ ಸಾಲಿನಲ್ಲಿ108311.10 ಲಕ್ಷ ರೂಪಾಯಿಗಳನ್ನು ವೆಚ್ಚ ಮಾಡುವ ಉದ್ದೇಶ ಹೊಂದಲಾಗಿದೆ. ಒಟ್ಟಾರೆಯಾಗಿ ಪ್ರಸಕ್ತ ಸಾಲಿಗೆ 38574.67 ಲಕ್ಷ ರೂಪಾಯಿಗಳ ಹೆಚ್ಚುವರಿ ಉಳಿತಾಯದ ಆಯವ್ಯಯ ಮಂಡನೆ ಮಾಡಲಾಗಿದೆ ಎಂದರು.
ಪ್ರಾಧಿಕಾರದಿಂದ ಪ್ರಸಕ್ತ ಸಾಲಿನಲ್ಲಿ ಒಟ್ಟು 780 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಅಂದಾಜಿಸಲಾಗಿದ್ದು ಅವುಗಳ ಪೈಕಿ 332 ಕಾಮಗಾರಿಗಳು ಮುಂದುವರಿದ ಕಾಮಗಾರಿಗಳ ಭಾಗವಾಗಿರುತ್ತವೆ. ಅವುಗಳ ಅಂದಾಜು ಮೊತ್ತ 5682.10ಲಕ್ಷಗಳಾಗಿದ್ದು, ಹೊಸದಾಗಿ ಒಟ್ಟು 448ಕಾಮಗಾರಿಗಳನ್ನು ರೂ.61719.00ಲಕ್ಷಗಳ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲು ಗುರುತಿಸಲಾಗಿದ್ದು ಪ್ರಸಕ್ತ ಸಾಲಿನಲ್ಲಿ ಮುಂದುವರೆದ ಹಾಗೂ ಹೊಸ ಕಾಮಕಾರಿಗಳನ್ನು ಕೈಗೆತ್ತಿಕೊಳ್ಳಲು ಒಟ್ಟು 6740.10 ಲಕ್ಷಗಳನ್ನು ಖರ್ಚು ಮಾಡಲು ಅಂದಾಜಿಸಲಾಗಿದೆ ಎಂದು ತಿಳಿಸಿದರು.
ಬಜೆಟ್ ಮಂಡನೆ ವೇಳೆ ಶಾಸಕರಾದ ಜಿ.ಟಿ.ದೇವೇಗೌಡ, ಎಲ್.ನಾಗೇಂದ್ರ, ಹರ್ಷವರ್ಧನ್, ವಿಧಾನಪರಿಷತ್ ಸದಸ್ಯರುಗಳಾದ ಸಂದೇಶ್ ನಾಗರಾಜ್, ಕೆ.ಟಿ.ಶ್ರೀಕಂಠೇಗೌಡ, ಮರಿತಿಬ್ಬೇಗೌಡ, ಧರ್ಮಸೇನಾ ಹಾಗೂ ಮುಡಾ ಸದಸ್ಯರು ಭಾಗವಹಿಸಿದ್ದರು.