ಮೈಸೂರು: ನೀರನ್ನು ಮಿತವಾಗಿ ಬಳಸದಿದ್ದರೆ ಮುಂದಿನ ದಿನಗಳಲ್ಲಿ ನೀರಿಗಾಗಿಯೇ ಯುದ್ಧ ಮಾಡುವಂಥ ಪರಿಸ್ಥಿತಿ ಎದುರಾಗಲಿದೆ. ನೀರಿನ ಮಹತ್ವದ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಅವಶ್ಯ ಎಂದು ಮೈಸೂರು ನಗರಪಾಲಿಕೆ ಸದಸ್ಯ ಮಾ ವಿ ರಾಮ್ ಪ್ರಸಾದ್ ಅವರು ಹೇಳಿದರು.
ವಿಶ್ವ ಜಲ ದಿನಾಚರಣೆ ಅಂಗವಾಗಿ ಮಾ ವಿ ರಾಮ್ ಪ್ರಸಾದ್ ರವರು ಸೋಮವಾರ ನಗರದ ಚಾಮುಂಡಿಪುರಂ 55ನೇ ವಾರ್ಡಿನಲ್ಲಿ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ಸಾರ್ವಜನಿಕರಿಗೆ ನೀರನ್ನು ಮಿತವಾಗಿ ಬಳಸಿ ಸಂರಕ್ಷಣೆ ಮಾಡಿ ಎಂದು ಜಾಗೃತಿ ಮೂಡಿಸುವ ಮೂಲಕ ವಿಶ್ವ ಜಲ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಿದರು.
ನೀರು ಅಮೂಲ್ಯ ಜೀವದ್ರವ್ಯ ಆಗಿದ್ದು, ಅದರ ಸಂರಕ್ಷಣೆ ಮತ್ತು ಮಿತ ಬಳಕೆ ಬಗ್ಗೆ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ ಎಂದರು.
ನೀರನ್ನು ಜೀವಜಲ ಎನ್ನುತ್ತೇವೆ. ಮನುಷ್ಯ ಕೇವಲ ನೀರನ್ನು ಮಾತ್ರ ಸೇವಿಸಿ 21 ದಿನಗಳ ವರೆಗೂ ಬದುಕಬಲ್ಲ. ಹೀಗಿರುವಾಗ ನೀರಿನ ಸಂರಕ್ಷಣೆ ಎಷ್ಟು ಮುಖ್ಯ ಎಂಬುದು ತಿಳಿಯುತ್ತದೆ ಎಂದವರು ಹೇಳಿದರು.
ಅರಬ್ ದೇಶಗಳಲ್ಲಿ ಏನೆಲ್ಲಾ ಐμÁರಾಮಿ ವಸ್ತುಗಳು ಸಿಗುತ್ತದೆ. ಆದರೆ, ನೀರನ್ನು ಹಣ ಕೊಟ್ಟು ಕೊಳ್ಳುತ್ತಾರೆ. ಆದರೆ ನಮ್ಮಲ್ಲಿ ನೀರು ಧಾರಾಳವಾಗಿ ದೊರೆಯುತ್ತದೆ ಆದರೆ ಅದನ್ನ ತುಂಬಾ ಪೆÇೀಲು ಮಾಡುತ್ತೇವೆ. ಇದು ಹೀಗೇ ಮುಂದುವರೆದಲ್ಲಿ ಮುಂದಿನ ಪೀಳಿಗೆಗೆ ನೀರನ್ನು ಹೆಚ್ಚು ಹಣ ಕೊಟ್ಟು ಕೊಳ್ಳುವ ಸ್ಥಿತಿ ಬಂದರೂ ಬರಬಹುದಾಗಿದೆ. ಆದ್ದರಿಂದ ನೀರನ್ನು ಮಿತವಾಗಿ ಬಳಸುವುದು ಇಂದಿನ ಅಗತ್ಯಗಳಲೊಂದಾಗಿದೆ ಎಂದರು.
ಮಾನವ ವೈಜ್ಞಾನಿಕವಾಗಿ ಚಂದ್ರಗ್ರಹ, ಮಂಗಳ ಗ್ರಹಕ್ಕೆ ಸಲೀಸಾಗಿ ಹೋಗಿಬರುವಷ್ಟು ಎತ್ತರಕ್ಕೆ ಬೆಳೆದಿದ್ದಾನೆ. ಆದರೆ ನೀರನ್ನ ಸೃಷ್ಟಿ ಮಾಡಲು ಸಾಧ್ಯವಾಗಿಲ್ಲ. ಇದು ದೇವರು ಕೊಟ್ಟ ಕಾಣಿಕೆ. ಈ ಅಮೂಲ್ಯ ದ್ರವ್ಯ ಕಾಪಾಡುವುದು ಎಲ್ಲರ ಹೊಣೆ ಎಂದು ಸಲಹೆ ನೀಡಿದರು.
ಇಸ್ರೇಲ್, ಆಸ್ಪ್ರೇಲಿಯಾ ಇನ್ನಿತರ ದೇಶಗಳಲ್ಲಿ ಮಳೆ ಬಂದರೆ ಅದೇ ಪುಣ್ಯ. ಹೀಗಿದ್ದೂ ಆ ದೇಶಗಳು ನೀರಿನ ಸಂರಕ್ಷ ಣೆ ಮಾಡಿಕೊಂಡು ಅಭಿವೃದ್ಧಿ ಹೊಂದುತ್ತಿವೆ ಎಂದರು.
ಈ ಕಾರ್ಯಕ್ರಮದಲ್ಲಿ ಗಿರೀಶ್, ಮುಖಂಡರಾದ ಸಿ. ಸಂದೀಪ್, ಶಿವು, ಅದ್ವೈತ, ಬಸವರಾಜು, ಸಂತೋμï, ಎನ್. ಮಂಜುನಾಥ್, ನವೀನ್ ಉಪಸ್ಥಿತರಿದ್ದರು.