ಮೂಲೆಹೊಳೆ ಚೆಕ್‍ಪೆÇೀಸ್ಟ್ ಗೆ ಡಿಸಿ ಡಾ. ಎಂ.ಆರ್. ರವಿ ಭೇಟಿ ನೀಡಿ ಪರಿಶೀಲನೆ

ಚಾಮರಾಜನಗರ: ಗಡಿ ಭಾಗಕ್ಕೆ ಹೊಂದಿಕೊಂಡಿರುವ ಕೇರಳ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಏರುಗತಿಯಲ್ಲಿ ಸಾಗಿರುವ ಕಾರಣ ಸರ್ಕಾರದ ನಿರ್ದೇಶನಗಳ ಪಾಲನೆ ಹಾಗೂ ವಹಿಸಲಾಗಿರುವ ಮುಂಜಾಗ್ರತಾ ಕ್ರಮಗಳ ಸಂಬಂಧ ಕಾರ್ಯನಿರ್ವಹಿಸುತ್ತಿರುವ ಮೂಲೆಹೊಳೆ ಚೆಕ್‍ಪೆÇೀಸ್ಟ್‍ಗೆ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು.
ಕೇರಳ ಗಡಿ ಭಾಗದ ವೈನಾಡು ಜಿಲ್ಲೆಯ ಜಿಲ್ಲಾ ಕಲೆಕ್ಟರ್ ಡಾ. ಅದೀಲ ಅಬ್ದುಲ್ಲಾ ಅವರೊಂದಿಗೆ ಮೂಲೆಹೊಳೆ ಚೆಕ್ ಪೆÇೀಸ್ಟ್ ನಲ್ಲಿ ಕೋವಿಡ್ ನಿಯಂತ್ರಣ ಸಂಬಂಧ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ಸಮಾಲೋಚನೆ ನಡೆಸಿದರು.
ಕೇರಳದಿಂದ ಚಾಮರಾಜನಗರ ಜಿಲ್ಲೆ ಹಾಗೂ ಕರ್ನಾಟಕ ರಾಜ್ಯಕ್ಕೆ ಪ್ರವೇಶಿಸುವ ವಾಹನಗಳ ಮೇಲೆ ನಿಗಾ ವಹಿಸಿ ಕಡ್ಡಾಯವಾಗಿ ಅಲ್ಲಿಂದ ಬರುವ ಎಲ್ಲರೂ ಆರ್.ಟಿ.ಪಿ.ಸಿ.ಆರ್ ಪರೀಕ್ಷೆಗೆ ಒಳಗಾಗಿ ನೆಗೆಟಿವ್ ವರದಿ ಹಾಜರು ಪಡಿಸುವುದನ್ನು ಪರಿಶೀಲಿಸಲು ಗಡಿ ಭಾಗದಲ್ಲಿ ಸ್ಥಾಪಿಸಲಾಗಿರುವ ಮೂಲೆಹೊಳೆ ಚೆಕ್ ಪೆÇೀಸ್ಟ್ ಗೆ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ದಿವ್ಯ ಸಾರಾ ಥಾಮಸ್ ಅವರೊಂದಿಗೆ ಭೇಟಿ ನೀಡಿ ಅಲ್ಲಿನ ಕಾರ್ಯ ನಿರ್ವಹಣೆಯನ್ನು ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ವೀಕ್ಷಿಸಿದರು.
ರಾಜ್ಯಕ್ಕೆ ಕೇರಳ ಭಾಗದಿಂದ ಬರುವ ವಾಹನಗಳನ್ನು ಕಟ್ಟುನಿಟ್ಟಾಗಿ ತಪಾಸಣೆ ಮಾಡಬೇಕು. ಗಡಿ ಪ್ರವೇಶಿಸುವ ಹಿಂದಿನ 72 ಗಂಟೆಗಳ ಅವಧಿಯಲ್ಲಿ ಪ್ರಯಾಣಿಕರು ಆರ್.ಟಿ.ಪಿ.ಸಿ.ಆರ್ ಪರೀಕ್ಷೆಗೆ ಒಳಗಾಗಿ ನೆಗೆಟಿವ್ ವರದಿ ಪಡೆದುಕೊಂಡಿರುವ ದಾಖಲೆಗಳನ್ನು ಪರಿಶೀಲಿಸಬೇಕು. ಯಾವುದೇ ಕಾರಣಕ್ಕೂ ಲೋಪಕ್ಕೆ ಅವಕಾಶವಿಲ್ಲದಂತೆ ಕಟ್ಟೆಚ್ಚರ ವಹಿಸಬೇಕೆಂದು ಜಿಲ್ಲಾಧಿಕಾರಿಯವರು ಸೂಚಿಸಿದರು.
ಇದೇ ವೇಳೆ ವೈನಾಡು ಜಿಲ್ಲೆಯ ಜಿಲ್ಲಾ ಕಲೆಕ್ಟರ್ ಡಾ. ಅದೀಲ ಅಬ್ದುಲ್ಲಾ ಅವರೊಂದಿಗೆ ಮೂಲೆಹೊಳೆಯಲ್ಲಿ ಕೋವಿಡ್ ಮುಂಜಾಗ್ರತಾ ಕ್ರಮಗಳ ಸಂಬಂಧ ವಿವರವಾಗಿ ಚರ್ಚಿಸಿದ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ಕೇರಳದಿಂದ ಬರುವ ಪ್ರಯಾಣಿಕರು ಕಡ್ಡಾಯವಾಗಿ ಆರ್.ಟಿ.ಪಿ.ಸಿ.ಆರ್ ಪರೀಕ್ಷೆ ಮಾಡಿಸಿ ನೆಗೆಟಿವ್ ವರದಿ ತರಬೇಕೆಂಬ ಮಾಹಿತಿಯನ್ನು ವೈನಾಡು ಜಿಲ್ಲೆಯಲ್ಲಿ ವ್ಯಾಪಕವಾಗಿ ಪ್ರಚುರ ಪಡಿಸುವಂತೆ ತಿಳಿಸಿದರು.
ಅಗತ್ಯ ವಸ್ತುಗಳು ಸರಕು ಸಾಗಣೆ ವಾಹನ ಚಾಲಕರು ಮತ್ತು ಸಹಾಯಕರು 15 ದಿನಗಳಿಗೊಮ್ಮೆ ಆರ್.ಟಿ.ಪಿ.ಸಿ.ಆರ್ ಪರೀಕ್ಷೆಗೆ ಒಳಗಾಗಿ ವರದಿ ಪಡೆದುಕೊಳ್ಳಬೇಕಿದೆ. ಖಾಸಗಿ ಹಾಗೂ ಸರ್ಕಾರಿ ಸ್ವಾಮ್ಯದ ಯಾವುದೇ ವಾಹನಗಳ ಪ್ರಯಾಣಿಕರು ಹಾಗೂ ಚಾಲಕರು ಸಹಾಯಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸ್ಯಾನಿಟೈಜರ್ ಬಳಕೆ ಮಾಡಬೇಕೆಂಬ ಜಾಗೃತಿಯನ್ನು ಉಂಟು ಮಾಡಬೇಕಿದೆ ಎಂದರು.
ಸರಕು ಸಾಗಣೆಗಳ ಖಾಲಿ ವಾಹನಗಳು ಗಡಿ ಪ್ರವೇಶಿಸುವ ಸಂದರ್ಭದಲ್ಲಿ ಸ್ಯಾನಿಟೈಜ್ ಮಾಡಲಾಗುತ್ತದೆ. ಈ ಕಾರ್ಯ ನಾಳೆಯಿಂದಲೇ ಪ್ರಾರಂಭವಾಗಲಿದೆ. ಇಲ್ಲಿಂದ ಕೇರಳ, ತಮಿಳುನಾಡಿಗೆ ತೆರಳುವವರು ಸಹ ಕಡ್ಡಾಯವಾಗಿ ಆರ್.ಟಿ.ಪಿ.ಸಿ.ಆರ್ ಪರೀಕ್ಷೆ ಮಾಡಿಸಿ ವರದಿ ಪಡೆದುಕೊಂಡ ಬಳಿಕವೇ ತೆರಳಬೇಕೆಂದು ತಿಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ಮಾಹಿತಿ ಹಂಚಿಕೊಂಡರು. ವೈನಾಡು ಜಿಲ್ಲೆಯ ಜಿಲ್ಲಾ ಕಲೆಕ್ಟರ್ ಡಾ. ಅದೀಲ ಅಬ್ದುಲ್ಲಾ ಅವರು ಕೊರೊನಾ ನಿಯಂತ್ರಣಕ್ಕೆ ಪರಸ್ಪರ ಅಗತ್ಯವಿರುವ ಎಲ್ಲಾ ಸಹಕಾರವನ್ನು ನೀಡುವುದಾಗಿ ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಂ.ಸಿ. ರವಿ, ಗುಂಡ್ಲುಪೇಟೆ ತಹಶೀಲ್ದಾರ್ ರವಿಶಂಕರ್ ಇತರೆ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.