ಮೈಸೂರು: ಮಾಜಿ ಸಚಿವ ರಮೇಶ್ ಜಾರಕಿ ಹೊಳಿ ಸಿಡಿ ಪ್ರಕರಣದಲ್ಲಿ ಡಿಕೆಶಿ ಹೆಸರು ಪ್ರಸ್ತಾಪ ಅಚ್ಚರಿ ಅನಿಸಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್ ಹೇಳಿದ್ದಾರೆ.
ನಗರದಲ್ಲಿ ಶನಿವಾರ ಸಚಿವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಸಿಡಿ ಪ್ರಕರಣದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೆಸರು ಪ್ರಸ್ತಾಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವ ಎಸ್.ಟಿ ಸೋಮಶೇಖರ್, ಡಿಕೆಶಿ ಹೆಸರು ಬಂದಿದ್ದು, ನನಗೆ ಅಚ್ಚರಿ ಅನಿಸಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಮೊದಲೇ ಇದು ಚರ್ಚೆಯಲ್ಲಿತ್ತು. ಈಗ ಅದು ಹೊರಗೆ ಬಂದಿದೆ ಅಷ್ಟೇ ಎಂದರು.
ಡಿಕೆ ಶಿವಕುಮಾರ್ ಹೆಸರು ಹೇಳು ಎಂದು ನಾವೇನಾದರು ಯುವತಿಗೆ ಹೇಳಿದ್ದೇವಾ? ಆಕೆಯೇ ತಾನಾಗಿಯೇ ಆ ಹೆಸರು ಹೇಳಿದ್ದಾಳೆ. ಅಲ್ಲಿಗೆ ಇದರ ಅರ್ಥ ಏನು? ಸಿಡಿ ಪ್ರಕರಣದಲ್ಲಿ ಮಹಾನಾಯಕನ ಪಾತ್ರ ಇದೆ ಎಂಬುದು ಚರ್ಚೆಯಲ್ಲಿದೆ. ಸಂತ್ರಸ್ತೆಯೇ ಅವರ ಹೆಸರು ಹೇಳಿದ್ದಾಳೆ. ನಾವೇನು ಅವರ ಹೆಸರು ಹೇಳಿ ಎಂದು ಹೇಳಿದ್ದೇವಾ? ಆತ ಯಾರು ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ನಮಗೂ ಇತ್ತು. ಡಿಕೆಶಿಯೇ ಮಹಾನಾಯಕನೆಂಬ ಪ್ರಶ್ನೆಗೆ ಈಗ ಅವರ ಹೆಸರು ಬಂದಿದೆ ಅಷ್ಟೇ ಎಂದು ಹೇಳಿದರು.
ಇಡೀ ಪ್ರಕರಣದಲ್ಲಿ ರಾಜಕಾರಣಿಗಳು, ಮಂತ್ರಿಗಳು ಟಾರ್ಗೆಟ್ ಆಗುತ್ತಿದ್ದಾರೆ. ಹಾಗಾಗಿ ಈ ಪ್ರಕರಣದ ಮಹಾನಾಯಕ ಯಾರು ಎಂಬ ಸತ್ಯಾಸತ್ಯತೆ ಹೊರಗೆ ಬರಲೇ ಬೇಕು ಎಂದರು ಸಚಿವ ಸೋಮಶೇಖರ್.
ಯುವತಿ ಎಲ್ಲಿಯೇ ಬಂದು ಹೇಳಿಕೆ ನೀಡಿದರು. ಆಕೆಗೆ ರಕ್ಷಣೆ ನೀಡಲು ಕರ್ನಾಟಕ ಸರ್ಕಾರ ಹಾಗೂ ಪೆÇಲೀಸ್ ಬದ್ದವಾಗಿದೆ ಎಂದು ಸಚಿವರು ತಿಳಿಸಿದರು.
ಪೆಶ್ನೆಯೊಂದಕ್ಕೆ ಉತ್ತರಿಸಿದ ಎಸ್. ಟಿ. ಎಸ್., 6 ಸಚಿವರು ಕೋರ್ಟ್ ಗೆ ಹೋಗಿರುವ ವಿಚಾರ ಸಂಬಂಧ ಉಪಚುನಾವಣೆ ಪ್ರಚಾರದಿಂದ ದೂರ ಇರಲು ಸಿಎಂ ಹೇಳಿಲ್ಲ ಎಂದರು.