ಮೈಸೂರಲ್ಲಿ ನೂತನ ಸಂಚಾರ ನಿಯಂತ್ರಣಾ ಸೂಚಿ ಜಾರಿ

ಮೈಸೂರು: ಮೈಸೂರಿನಲ್ಲಿ ಪೆÇಲೀಸರ ಕರ್ತವ್ಯವನ್ನು ಜನಸ್ನೇಹಿಯಾಗಿಸಲು ಏ. 1ರಿಂದ ನೂತನ ಸುಧಾರಿತ ಸಂಚಾರ ನಿಯಂತ್ರಣಾ ಸೂಚಿ ಜಾರಿಗೆ ತರಲಾಗಿದೆ.
ಇಂದಿನಿಂದ ಒಂದು ತಿಂಗಳವರೆಗೆ ಪ್ರಾಯೋಗಿಕವಾಗಿ ನೂತನ ನಿಯಮ ಜಾರಿಯಾಗಲಿದೆ.
ನಗರದ 10 ಸ್ಥಳಗಳಲ್ಲಿ ಸ್ವಯಂ ಪ್ರೇರಿತ ತಪಾಸಣಾ ಕೇಂದ್ರಗಳನ್ನು ತೆರೆಯಲಾಗಿದೆ.
ಸ್ವಯಂ ಪ್ರೇರಿತ ತಪಾಸಣಾ ಕೇಂದ್ರಕ್ಕೆ ಸಾರ್ವಜನಿಕರು ಆಗಮಿಸಿ ಮಾಹಿತಿ ಪಡೆಯುತ್ತಿದ್ದಾರೆ.
ಹಲವು ಮಂದಿ ಸಾರ್ವಜನಿಕರು ಬಾಕಿಯಿರುವ ದಂಡ ಪಾವತಿಸಿದ್ದಾರೆ.