ವಾರ್ತಾ ಇಲಾಖೆ ಆಯುಕ್ತರಿಂದ ಫಿಲ್ಮ್ ಸಿಟಿ ನಿರ್ಮಾಣ ಜಾಗ ಪರಿಶೀಲನೆ

ಮೈಸೂರು: ಬಹು ನಿರೀಕ್ಷಿತ ಅಂತಾರಾಷ್ಟ್ರೀಯ ಗುಣ ಮಟ್ಟದ ಚಿತ್ರನಗರಿಯನ್ನು ಮೈಸೂರಿನಲ್ಲಿ ನಿರ್ಮಿಸಲು ಸರ್ಕಾರ ಆದೇಶಿಸಿರುವ ಹಿನ್ನೆಲೆಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತರಾದ ಡಾ.ಪಿ.ಎಸ್. ಹರ್ಷ ಅವರು ಇಮ್ಮಾವು ಸಮೀಪ ಗುರುತಿಸಲಾಗಿರುವ ಉದ್ದೇಶಿತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಚಿತ್ರನಗರಿ ನಿರ್ಮಾಣಕ್ಕೆ ಜಾಗ ಅತ್ಯಂತ ಸೂಕ್ತವಾಗಿದೆ. ನೀರು ಹಾಗೂ ಇತರ ಮೂಲ ಸೌಕರ್ಯ ಒದಗಿಸಲು ಕ್ರಿಯಾ ಯೋಜನೆ ಸಿದ್ದಪಡಿಸಿಕೊಳ್ಳು ವಂತೆ ಕೆ.ಐ.ಎ.ಡಿ.ಬಿ. ಅಧಿಕಾರಿ ಗಳಿಗೆ ವಾರ್ತಾ ಇಲಾಖೆ ಆಯುಕ್ತರು ತಿಳಿಸಿದರು.
ಉದ್ದೇಶಿತ ಯೋಜನೆಗೆ ಗುರುತಿಸಿ, ಮಿಸಲಿರಿಸಲಾಗಿರುವ 110 ಎಕರೆ ಸರ್ಕಾರಿ ಜಾಗವನ್ನು ಚಿತ್ರನಗರಿ ನಿರ್ಮಾಣ ಉದ್ದೇಶಕ್ಕಾಗಿ ಕೆ.ಐ.ಎ.ಡಿ.ಬಿ. ಮೂಲಕ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ಅಧಿಕೃತವಾಗಿ ಹಸ್ತಾಂತರ ಮಾಡಿಕೊಳ್ಳಬೇಕಿದೆ ಎಂದು ನಂಜನಗೂಡು ತಹಶೀಲ್ದಾರ್ ಮೋಹನ್ ಕುಮಾರಿ ಅವರು ಮಾಹಿತಿ ನೀಡಿದರು.
ಜಾಗದ ದಾಖಲೆ ಹಾಗೂ ಇತರ ವಿಷಯಗಳ ಕುರಿತು ಅವರು ಆಯುಕ್ತರಿಗೆ ವಿವರ ಒದಗಿಸಿದರು.
ಚಿತ್ರನಗರಿ ನಿರ್ಮಾಣದ ಸಂಬಂಧ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಏ. 7ರಂದು ಬೆಂಗಳೂರಿನಲ್ಲಿ ಸಭೆ ನಡೆಸುವರು. ಸದರಿ ಸಭೆಯಲ್ಲಿ ಪಾಲ್ಗೊಂಡು ಸ್ಥಳ ಹಸ್ತಾಂತರ ಪ್ರಕ್ರಿಯೆಗಳ ಬಗ್ಗೆ ಮಾಹಿತಿ ಒದಗಿಸುವಂತೆ ಆಯುಕ್ತರು ತಹಶಿಲ್ದಾರ್ ಅವರಿಗೆ ತಿಳಿಸಿದರು.
ಇದೊಂದು ಬೃಹತ್ ಯೋಜನೆ ಯಾಗಿದ್ದು, ಚಿತ್ರನಗರಿ ಸ್ಥಾಪನೆಯಾದರೆ ಪ್ರತಿದಿನ ಕಲಾವಿದರು, ತಂತ್ರಜ್ಞರು, ಕಾರ್ಮಿಕರು ಸೇರಿದಂತೆ ಸುಮಾರು 5000 ಮಂದಿ ಕೆಲಸ ಮಾಡಬಹುದು. ಇದೊಂದು ಆಕರ್ಷಕ ಪ್ರವಾಸಿ ತಾಣವಾಗಲಿದೆ. ಈ ನಿಟ್ಟಿನಲ್ಲಿ ಎಲ್ಲಾ ಅಂಶಗಳನ್ನು ಗಮನದಲ್ಲಿರಿಸಿಕೊಂಡು ವಿಸ್ತೃತ ಯೋಜನೆ ರೂಪಿಸಿ ವಿವಿಧ ಇಲಾಖೆಗಳ ಸಹಕಾರವನ್ನು ಪಡೆದು ಕಾಮಗಾರಿ ಹಾಗೂ ಕಾರ್ಯಕ್ರಮಗಳನ್ನುಅನುμÁ್ಠನ ಮಾಡಬೇಕಾಗುತ್ತದೆ ಎಂದು ಡಾ.ಪಿ.ಎಸ್ ಹರ್ಷ ಅವರು ತಿಳಿಸಿದರು.
ಚಿತ್ರನಗರಿ ನಿರ್ಮಾಣದ ಹಾಗೂ ನಿರ್ವಹಣೆಗೆ ಸಂಬಂಧಿಸಿದಂತೆ ಮುಂದಿನ ಹಂತದಲ್ಲಿ ಜಿಲ್ಲಾ ಮಟ್ಟದಲ್ಲಿ ಅನುμÁ್ಠನ ಸಮಿತಿ ರಚಿಸಬೇಕಾಗಿದ್ದು, ಸಮಿತಿಯಲ್ಲಿರಬೇಕಾದ ಜನ ಪ್ರತಿನಿಧಿಗಳು,ಅಧಿಕಾರಿಗಳು ಹಾಗೂ ಗಣ್ಯರ ಬಗ್ಗೆ ಜಿಲ್ಲಾಧಿಕಾರಿಯವರೊಂದಿಗೆ ಚರ್ಚಿಸಿ ಮಾಹಿತಿ ಒದಗಿಸುವಂತೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ರಾದ ಡಾ.ಪಿ.ಎಸ್. ಹರ್ಷ ಅವರು ಇಲಾಖಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
1972ರಲ್ಲೇ ರಾಜ್ಯದಲ್ಲಿ ಚಿತ್ರನಗರಿ ಸ್ಥಾಪನೆಯ ಪ್ರಯತ್ನ ಪ್ರಾರಂಭವಾಗಿತ್ತು .ವಿವಿಧೆಡೆ ಸ್ಥಳಗಳ ಗುರುತಿಸಲಾಗಿತ್ತು. ಅಂತಿಮವಾಗಿ 2015-16 ರಲ್ಲಿ ಮೈಸೂರು ಬಳಿ ಇಮ್ಮಾವು ಬಳಿ ಜಾಗ ಗುರುತಿಸಲಾಗಿತ್ತು. ಹಾಲಿ ಮುಖ್ಯ ಮಂತ್ರಿಯವರು 2021-22ರ ಬಜೆಟ್ ಭಾಷಣದಲ್ಲಿ ರೂ.500 ಕೋಟಿ ವೆಚ್ಚದಲ್ಲಿ ಚಿತ್ರ ನಗರಿ ನಿರ್ಮಾಣ ಯೋಜನೆಯನ್ನು ಘೋಷಿಸಿದ್ದು, ಹಾಲಿ ಈ ಯೋಜನೆಯು ಸಾರ್ವಜನಿಕ ಸಹಭಾಗಿತ್ವದಲ್ಲಿ ನಡೆಯಲಿದೆ. ಇದರ ಅನುμÁ್ಠನವನ್ನು ಚುರುಕಾಗಿ ಹಾಗೂ ಪರಿಣಾಮಕಾರಿಯಾಗಿ ಮಾಡುವ ಉದ್ದೇಶದೊಂದಿಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತರಾದ ಡಾ.ಪಿ. ಎಸ್. ಹರ್ಷ ಅವರು ಉದ್ದೇಶಿತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಭಾರಿ ಉಪ ನಿರ್ದೇಶಕ ವಿನೋದ್ ಚಂದ್ರ, ಸಹಾಯಕ ನಿರ್ದೇಶಕ ರಾಜು ಆರ್, ಕೆ.ಎಸ್.ವಿಜಯಾನಂದ, ಕೆ.ಐ.ಎ.ಡಿ.ಬಿ. ಸರ್ವೇ ಸೂಪರ್‍ವೈಸರ್ ರಮೇಶ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.