ಮೈಸೂರು: ರೈತರಿಗೆ ನಿಗಧಿತ ಪ್ರಮಾಣದಲ್ಲಿ ವಿದ್ಯುತ್ ಸಿಗುತ್ತಿಲ್ಲ. ಪರಿಸ್ಥಿತಿ ಹೀಗೆ ಮುಂದುವರಿದರೆ ಸೆಸ್ಕ್ ಎಂಡಿ ಕಚೇರಿಗೆ ಬೀಗ ಹಾಕುತ್ತೇವೆ ಎಂದು ಶಾಸಕ ಸಾ. ರಾ. ಮಹೇಶ್ ಅವರು ಎಚ್ಚರಿಕೆ ನೀಡಿದರು.
ನಗರದಲ್ಲಿ ಶುಕ್ರವಾರ ಸಾ. ರಾ. ಮಹೇಶ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ನಿಗಧಿಯಂತೆ ವಿದ್ಯುತ್ ಸರಬರಾಜು ಇಲ್ಲದಿರುವುದರಿಂದ ಪಂಪ್ ಸೆಟ್ ಹೊಂದಿರುವ ರೈತರು ಕಂಗಾಲಾಗಿದ್ದಾರೆಂದರು.
ತಮ್ಮ ರಕ್ಷಣೆಗೆ ಕೋರ್ಟ್‍ಗೆ ಹೋದ ನೀವು ಜನತೆಯ ರಕ್ಷಣೆ ಹೇಗೆ ಮಾಡುತ್ತಿರಾ ಎಂದು ಸಾ. ರಾ. ಮಹೇಶ್ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್ ಅವರನ್ನು ಪ್ರಶ್ನಿಸಿದರು.
ನಮ್ಮ ಪಕ್ಷದಲ್ಲಿ ಅಧಿಕಾರ ಅನುಭವಿಸಿ ನಮ್ಮ ನಾಯಕರನ್ನು ಇಂದ್ರ, ಚಂದ್ರ ಎಂದು ಹೊಗಳಿ ಈಗ ಬೇರೆ ಪಕ್ಷ ಸೇರಿ ನಮ್ಮ ನಾಯಕರ ವಿರುದ್ಧ ಟೀಕೆ ಮಾಡುತ್ತಾರೆ ಎಂದು ಜಮೀರ್ ಅಹಮದ್ ಅವರಿಗೆ ಸಾ. ರಾ. ಮಹೇಶ್ ಟಾಂಗ್ ನೀಡಿದರು.
ಸಾರಿಗೆ ನೌಕರರ ಬೇಡಿಕೆ ಈಡೇರಿಕೆಗೆ ಸರಕಾರ ಮುಂದಾಗಲಿ ಎಂದು ಅವರು ಹೇಳಿ, ಕೆ.ಎಸ್.ಆರ್.ಟಿ.ಸಿ. ಅನ್ನು ಖಾಸಗೀಕರಣ ಮಾಡುವ ಹುನ್ನಾರವನ್ನು ಬಿಜೆಪಿ ಮಾಡುತ್ತಿದೆ ಎಂದರು.