ಮೈಸೂರು: ಇಡೀ ಜಗತ್ತಿಗೆ ಬಸವಣ್ಣನವರ ಜೀವನ ದರ್ಶನ ತಿಳಿಯಬೇಕಿದೆ ಎಂದು ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಹೇಳಿದರು.
ಸುತ್ತೂರು ಜಗದ್ಗುರು ವೀರಸಿಂಹಾಸನ ಮಹಾ ಸಂಸ್ಥಾನಮಠ ಹಾಗೂ ಜೆ ಎಸ್ ಎಸ್ ಮಹಾವಿದ್ಯಾಪೀಠ ಆಶ್ರಯದಲ್ಲಿ ಶನಿವಾರ ಆಯೋಜಿಸಲಾಗಿದ್ದ ಐದು ಕೃತಿಗಳ ಲೋಕಾರ್ಪಣೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಚಿವ ಅರವಿಂದ ಲಿಂಬಾವಳಿ ಕೃತಿಗಳ ಲೋಕಾರ್ಪಣೆ ಮಾಡಿ, ಪ್ರಶಸ್ತಿ ಪ್ರದಾನ ಮಾಡಿಮಾತನಾಡಿದರು.
ಹೊಸ ಯುಗದ ಪೀಳಿಗೆಗೆ ಅಪ್ಯಾಯವಾಗುವಂಥ ರೀತಿಯಲ್ಲಿ ಪುಸ್ತಕಗಳನ್ನು ಒದಗಿಸಬೇಕಿದೆ ಎಂದರು.
ಇಲೈಬ್ರರಿ ಹಾಗೂ ವೀಡಿಯೋ, ಆಡಿಯೋ ಪುಸ್ತಕಗಳು ಇಂದಿನ ಯುಗದಲ್ಲಿವೆ. ಆದರೆ ಪುಸ್ತಕಗಳು ಕೇವಲ ಆ ದಿನದ ಮಹತ್ವವನ್ನಲ್ಲದೇ ಶಾಶ್ವತ ಮೌಲ್ಯಗಳನ್ನು ಹೊಂದಿದೆ, ಹಾಗಾಗಿ ಪುಸ್ತಕಗಳನ್ನು ಓದುವ ಹವ್ಯಾಸ ಕಡಿಮೆಯಾಗಿಲ್ಲ, ಆಗುವುದಿಲ್ಲ ಎಂದು ಸಚಿವರು ಹೇಳಿದರು. ಸುತ್ತೂರು ಮಠವು ನಾವೆಲ್ಲರೂ ಹೆಮ್ಮೆ ಪಡುವ ರೀತಿಯಲ್ಲಿ ಸಮಾಜಿಕ ಕಾರ್ಯಗಳನ್ನು ಮಾಡುತ್ತಿದೆ. ಇದೂ ಕೂಡ ಅಭಿಮಾನದ ಸಂಗತಿ. ಜೆ ಎಸ್ ಎಸ್ ಸಂಸ್ಥೆಯಲ್ಲಿರುವ ಶಿಸ್ತು ನಮಗೆಲ್ಲರಿಗೂ ಅನುಕರಣೀಯ. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಯುವ ಪೀಳಿಗೆಯ ಪಡೆಯೇ ಬರ್ತಿದೆ, ಸರ್ಕಾರ ಮಾಡಬೇಕಾದ ಹಲವಾರು ಕೆಲಸಗಳನ್ನು ಹಲವಾರು ಸಂಸ್ಥೆಗಳು ಮಾಡುತ್ತಿವೆ. ಅಂತಹ ಸಂಸ್ಥೆಗಳಿಗೆ ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ಬೇಕಾದ ಸೌಕರ್ಯಗಳನ್ನು ನೀಡುತ್ತಿದೆ ತಿಳಿಸಿದರು.
ಬಸವೇಶ್ವರ ರ ಬಗ್ಗೆ ಇಂಗ್ಲೀμï ನಲ್ಲಿ ಪ್ರಕಟವಾಗಿರುವ ಪುಸ್ತಕದ ಬಗ್ಗೆ ಅಭಿಮಾನ ವ್ಯಕ್ತಪಡಿಸುತ್ತೇನೆ ಎಂದು ಅವರು ತಿಳಿಸಿದರು.
ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಹಾಗೂ ನಿರಾಭಾರಿ ಚರಮೂರ್ತಿ ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳು, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಗೊ.ರು .ಚನ್ನಬಸಪ್ಪ, ಶಾಸಕ ನಾಗೇಂದ್ರ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಎಂ.ಎನ್.ನಂದೀಶ್ ಹಂಚೆ, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ. ಬಿ .ವಿ. ವಸಂತಕುಮಾರ್ ಸೇರಿದಂತೆ ವಿವಿಧ ಗಣ್ಯರು ಈ ಸಮಾರಂಭದಲ್ಲಿ ಭಾಗವಹಿಸಿದ್ದರು.
ಸಮಾರಂಭದಲ್ಲಿ ಭಕ್ತಿಭಂಡಾರಿ ಬಸವಣ್ಣನವರು, ಬಸವದರ್ಶನ, ಸ್ವತಂತ್ರ ಸಿದ್ದಲಿಂಗೇಶ್ವರ ರು, ಹಾರ್ಟ್ ಟು ಹಾರ್ಟ್ ಮತ್ತು ಸುತ್ತೂರು ಶ್ರೀಮಠದ ಗ್ರಂಥಾಲಯ ಎಂಬ ಐದು ಕೃತಿಗಳು ಲೋಕಾರ್ಪಣೆಗೊಂಡವು.
ಸಮಾರಂಭದಲ್ಲಿ ಅರಿವೆ ಪ್ರಮಾಣು ಕೃತಿ ರಚನೆ ಮಾಡಿದ ಶ್ರೀ ಮಹಂತಪ್ಪ ನಂದೂರ ಅವರಿಗೆ 2019ನೇ ಸಾಲಿನ ಶ್ರೀ ಶಿವರಾತ್ರೀಶ್ವರ ಪ್ರಶಸ್ತಿ ಪ್ರದಾನ ಮಾಡಲಾಯಿತು.
ವಚನ ಚಿತ್ರರಚನಾ ಪಿತಾಮಹ ಎಂ ವೀರಪ್ಪ ದತ್ತಿ ಪ್ರಶಸ್ತಿಯನ್ನು ಶ್ರೀಮತಿ ರಾಧಾ ಮಲ್ಲಪ್ಪ ಅವರಿಗೆ ಹಾಗೂ ಡಿ ವಿ ಹಾಲಬಾವಿ ಪ್ರಶಸ್ತಿಯನ್ನು ಶ್ರೀ ಈಶ್ವರ .ಎನ್.ಜೋಶಿ ಅವರಿಗೆ ಪ್ರದಾನ ಮಾಡಲಾಯಿತು.
ಇದಲ್ಲದೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪ್ರಶಸ್ತಿಗೆ ಭಾಜನರಾದ ಶ್ರೀ ಕೆಎಸ್ ಮಹಾದೇವಸ್ವಾಮಿ ಪೆÇನ್ನಾಚಿ ಅವರಿಗೆ ಸನ್ಮಾನ ಮಾಡಿ ಅಭಿನಂದಿಸಲಾಯಿತು.