ಎಲ್. ಮಹೇಶಗೆ ಪಿಎಚ್.ಡಿ

ಚಾಮರಾಜನಗರ: ಎಲ್. ಮಹೇಶ್ ಅವರಿಗೆ ಬೆಂಗಳೂರು ವಿಶ್ವವಿದ್ಯಾಲಯ ಪಿಎಚ್.ಡಿ ನೀಡಿದೆ.
ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕರೂ (ನಿ) ಹಾಗೂ ನಾಡಿನ ಪ್ರಸಿದ್ಧ ವಿಮರ್ಶಕರೂ ಸಂಸ್ಕøತಿ ಚಿಂತಕರೂ ಆದ ಡಾ. ಬಸವರಾಜ ಸಿ ಕಲ್ಗುಡಿ ಅವರ ಮಾರ್ಗದರ್ಶನದಲ್ಲಿ ಎಲ್. ಮಹೇಶ ಅವರು ಸಾದರ ಪಡಿಸಿದ ಚಾಮರಾಜನಗರ ಜಿಲ್ಲೆ: ಒಂದು ಸಾಂಸ್ಕೃತಿಕ ಅಧ್ಯಯನ (ಸ್ಮಾರಕಗಳು, ದೇವಾಲಯಗಳು ಮತ್ತು ಆಚರಣೆಗಳನ್ನು ಅನುಲಕ್ಷಿಸಿ) ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಬೆಂಗಳೂರು ವಿಶ್ವವಿದ್ಯಾಲಯ ಪಿಎಚ್.ಡಿ ಪದವಿ ನೀಡಿ ಗೌರವಿಸಿದೆ.
ಚಾಮರಾಜನಗರ ಜಿಲ್ಲೆ ಅಟ್ಟುಗುಳಿಪುರ ಗ್ರಾಮದ ನಿವಾಸಿಗಳಾದ ರಾಜಮ್ಮ ಮತ್ತು ಲಿಂಗಪ್ಪ ದಂಪತಿಗಳ ಪುತ್ರ ಎಲ್. ಮಹೇಶ ಅವರು ಬೆಂಗಳೂರಿನ ಎಚ್.ಎಸ್.ಆರ್ ಬಡಾವಣೆಯ ಪ್ರತಿಷ್ಠಿತ ಜೆಎಸ್ ಎಸ್ ಪಬ್ಲಿಕ್ ಶಾಲೆಯಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ.