ಮೈಸೂರು ಡಿ.ಹೆಚ್.ಒ. ಹಾಗೂ ಉಪನೋಂದಣಿ ಕಚೇರಿ ಕೆಲ ಸಿಬ್ಬಂದಿಗೆ ಕೊರೊನಾ

ಮೈಸೂರು: ಮೈಸೂರಿನಲ್ಲಿ ಕೊರೋನಾ 2ನೇ ಅಲೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಮೈಸೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಅಮರನಾಥ ಅವರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
ಡಿಎಚ್ ಓ ಅವರ ಛೇಂಬರ್ ನ್ನು ಸೀಲ್ ಮಾಡಲಾಗಿದೆ.
ಡಿ.ಹೆಚ್.ಒ. ಡಾ|| ಅಮರನಾಥ್ ಸಂಪರ್ಕದಲ್ಲಿದ್ದವರು ಹಾಗೂ ಕಚೇರಿ ಸಿಬ್ಬಂದಿಗಳಿಗೀಗ ಕೊರೋನಾ ಆತಂಕ ಎದುರಾಗಿದೆ.
ಉಪನೋಂದಣಿ ಕಚೇರಿ 4 ಸಿಬ್ಬಂದಿಗೆ ಕೊರೊನಾ: ಮೈಸೂರು ನಗರದ ಉತ್ತರ ಉಪನೋಂದಣಿ ಕಚೇರಿಯ ನಾಲ್ಕು ಮಂದಿ ಸಿಬ್ಬಂದಿಗಳಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.
ನಗರದ ನಜರಬಾದ್‍ನಲ್ಲಿರುವ ಮಿನಿ ವಿಧಾನಸೌಧದ ಆವರಣದಲ್ಲಿರುವ ಉತ್ತರ ಉಪ ನೋಂದಣಿ ಕಚೇರಿಯ ಓರ್ವ ಸರ್ಕಾರಿ ಮಹಿಳಾ ನೌಕರರು ಹಾಗೂ ಮೂವರು ಹೊರ ಗುತ್ತಿಗೆ ನೌಕರರಲ್ಲಿ (ಆಪರೇಟರ್) ಕೊರೋನಾ ಸೋಂಕು ದೃಢಪಟ್ಟಿದೆ.
ಉಪ ನೋಂದಣಾಧಿಕಾರಿ ವಿವೇಕ್ ಅವರು ಕೆಲಸವನ್ನು ಸ್ಥಗಿತಗೊಳಿಸಿದ್ದು, ಕಚೇರಿಗೆ ಸ್ಯಾನಿಟೈಸ್ ಮಾಡಿಸಲಾಗಿದೆ.