ಚಾಮರಾಜನಗರ: ಕೋವಿಡ್ ಶಿμÁ್ಟಚಾರ ಉಲ್ಲಂಘಿಸುವವರ ವಿರುದ್ಧ ದಂಡ ವಿಧಿಸುವುದು, ಕೋವಿಡ್ ನಿಯಂತ್ರಣ ಕುರಿತು ಜಾಗೃತಿ ಮೂಡಿಸಲು ರಚಿಸಲಾಗಿರುವ ಯುವಜನರಿಂದ ಕೂಡಿದ ಸುರಕ್ಷಾ ಕೋವಿಡ್ ರಕ್ಷಣಾ ಪಡೆಯ ಕಾರ್ಯಗಳಿಗೆ ಭಾನುವಾರ ನಗರಸಭೆ ಅಧ್ಯಕ್ಷರಾದ ಆಶಾ ನಟರಾಜು, ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ, ಜಿಲ್ಲಾ ಪೆÇಲೀಸ್ ವರಿμÁ್ಠಧಿಕಾರಿ ದಿವ್ಯ ಸಾರಾ ಥಾಮಸ್ ಅವರು ನಗರದ ಜೈ ಭುವನೇಶ್ವರಿ ವೃತ್ತದಲ್ಲಿ ಚಾಲನೆ ನೀಡಿದರು.
ಬಳಿಕ ಜಿಲ್ಲಾಧಿಕಾರಿ ಅವರು ಸುರಕ್ಷಾ ಪಡೆಯೊಂದಿಗೆ ನಗರದ ಪ್ರಮುಖ ಬೀದಿಗಳು, ಅಂಗಡಿಗಳಿಗೆ ತೆರಳಿ ಮಾಸ್ಕ್ ಧರಿಸದವರಿಗೆ ದಂಡ ವಿಧಿಸಲು ಸೂಚಿಸಿದರು.
ಮಾಸ್ಕ್ ಧರಿಸದೇ ವಾಹನ ಸವಾರಿ ಮಾಡುತ್ತಿದ್ದವರನ್ನು ತಡೆದು ದಂಡ ವಿಧಿಸಲಾಯಿತು. ಅಂಗಡಿ ಮುಂಗಟ್ಟುಗಳಲ್ಲಿ ಮಾಸ್ಕ್ ಹಾಕದೇ ಇರುವವರ ವಿರುದ್ಧ ಜಿಲ್ಲಾಧಿಕಾರಿ ಅವರ ಸಮ್ಮುಖದಲ್ಲಿಯೇ ದಂಡ ವಿಧಿಸಲಾಯಿತು.
ಪಟ್ಟಣದ ಕೆಲವೆಡೆ ಅಂತರ ಕಾಯ್ದುಕೊಳ್ಳದ ಹಾಗೂ ಮಾಸ್ಕ್ ಧರಿಸದೇ ಬಂದ ಗ್ರಾಹಕರಿಗೆ ವ್ಯಾಪಾರ ಖರೀದಿಗೆ ಅವಕಾಶ ನೀಡಿದ ಅಂಗಡಿ ಮಾಲೀಕರನ್ನು ತರಾಟೆಗೆ ತೆಗೆದುಕೊಂಡ ಜಿಲ್ಲಾಧಿಕಾರಿ ಅವರು ಅಂಗಡಿ ಮುಚ್ಚಲು ಆದೇಶಿಸಿದರು.
ಕೋವಿಡ್ ಶಿμÁ್ಟಚಾರ ಉಲ್ಲಂಘಿಸಿದ ಕೆಲವು ಅಂಗಡಿಗಳನ್ನು ಜಿಲ್ಲಾಧಿಕಾರಿಯವರ ಸೂಚನೆ ಮೇರೆಗೆ ಮುಚ್ಚಿಸಲಾಯಿತು.
ಅಂಗಡಿ ಮಾಲೀಕರು, ರಸ್ತೆ ಬದಿ ವ್ಯಾಪಾರಿಗಳೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ತಮ್ಮ ಅಂಗಡಿ ಮುಂಗಟ್ಟು, ವ್ಯಾಪಾರ ಸ್ಥಳದಲ್ಲಿ ಮಾಸ್ಕ್ ಧರಿಸುವ ಬಗ್ಗೆ ಫಲಕಗಳನ್ನು ಹಾಕಬೇಕು. ಮಾಸ್ಕ್ ಹಾಕದೇ ಅಂಗಡಿಗಳಿಗೆ ಬರುವವರಿಗೆ ವ್ಯಾಪಾರ, ಖರೀದಿಗೆ ಅವಕಾಶ ನೀಡಬಾರದೆಂದು ತಿಳಿಸಿದರು.
ಸಾರ್ವಜನಿಕರೊಂದಿಗೆ ಮಾತನಾಡಿ ಕೋವಿಡ್ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಲು ಜಾಗೃತಿ ಉಂಟುಮಾಡುವ ಮೂಲಕ ಗಮನ ಸೆಳೆದರು.
ನಗರಸಭೆ ಅಧ್ಯಕ್ಷರು ಇತರೆ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.