ಮೈಸೂರು: ಕೊರೊನಾ ಸೋಂಕಿತರಿಗೆ ಮೈಸೂರಲ್ಲಿ ಬೆಡ್ ಹಾಗೂ ಆಕ್ಸಿಜನ್ ಕೊರತೆ ಇಲ್ಲ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೇಳಿದರು.
ನಗರದಲ್ಲಿ ಮಂಗಳವಾರ ಜಿಲ್ಲಾಧಿಕಾರಿಗಳು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಮೈಸೂರಿನಲ್ಲಿ 1200ರಷ್ಟು ಬೆಡ್ ಗಳು ಕೋವಿಡ್ ಗೆ ಮೀಸಲಿಡಲಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ 92 ಐಸಿಯು, 62 ವೆಂಟಿಲೇಟರ್, ಸರ್ಕಾರಿ ಆಸ್ಪತ್ರೆಯಲ್ಲಿ 28 ಐಸಿಯು, 200 ಆಕ್ಸಿಜನ್ ಬೆಡ್ ಗಳು ಲಭ್ಯವಿದೆ. ಅಲ್ಲದೆ ಪ್ರತಿ ತಾಲೂಕು ಕೇಂದ್ರದಲ್ಲಿ 50 ಬೆಡ್ ಗಳ ವ್ಯವಸ್ಥೆ ಮಾಡಲಾಗಿದ್ದು, ಹೊಸದಾಗಿ ಟ್ರಾಮಾ ಸೆಂಟರ್ ನಲ್ಲಿ 200 ಬೆಡ್ ಗಳ ವ್ಯವಸ್ಥೆ ಮಾಡಲಾಗಿದೆ ಮುಂದಿನ ಪರಿಸ್ಥಿತಿ ನೋಡಿಕೊಂಡು ಜಿಲ್ಲಾಡಳಿತ ಸಿದ್ದತೆ ನಡೆಸಿದೆ ಎಂದವರು ತಿಳಿಸಿದರು.
ಮೈಸೂರಲ್ಲಿ ಬೆಡ್ ಗಳು ಇದೆ. ಐಸಿಯು ಬೆಡ್ ಗಳ ಕೊರತೆ ಇಲ್ಲ. ಆಕ್ಸಿಜನ್ ಕೊರತೆಯೂ ಇಲ್ಲ. ಆದರೂ ಸಾವು ಯಾಕೆ ಆಗ್ತಿದೆ ಎಂಬುದು ಗೊತ್ತಾಗ್ತಿಲ್ಲ. ಆದರೆ ಬೆಂಗಳೂರು ಸೇರಿ ಹೊರ ಜಿಲ್ಲೆಯ ರೋಗಿಗಳು ಬರ್ತಿದ್ದಾರೆ. ಲಾಸ್ಟ್ ಮೂವ್ಮೆಂಟ್ ವೇಳೆ ಚಿಕಿತ್ಸೆ ಬರುವವರ ಸಾವಾಗುತ್ತಿದೆ ಎಂದು ಹೇಳಿದರು.
ಹೊರಗಿನಿಂದ ಬರುವವರಿಗೆ ಮೈಸೂರಿಗೆ ಬರಬೇಡಿ ಎನ್ನಲು ಸಾಧ್ಯವಿಲ್ಲ. ಆದರೆ ಅವರು ಹೆಚ್ಚಾಗಿ ಬಂದರೆ ಒತ್ತಡ ಇದ್ದೆ ಇರುತ್ತೆ. ಬೆಂಗಳೂರಿನಲ್ಲಿ ಬೆಡ್ ಕೊರತೆ ಇರುವವರು ಮೈಸೂರಿಗೆ ಬರ್ತಿದ್ದಾರೆ. ಅದರಲ್ಲೂ ಇಲ್ಲಿ ಸಂಬಂಧಿಕರು ಇರುವವರು ಸಹ ಮೈಸೂರಿಗೆ ಬರ್ತಿದ್ದಾರೆಂದು ಜಿಲ್ಲಾಧಿಕಾರಿಗಳು ಹೇಳಿದರು.