ಸಂಶಯದಿಂದ ಪ್ರೇಯಸಿಗೆ ಚಾಕುವಿನಿಂದ ಇರಿದ ಪ್ರಿಯಕರ

ಮೈಸೂರು: ಪ್ರೇಯಸಿ ಮೇಲೆ ಸಂಶಯಗೊಂಡ ಪ್ರಿಯಕರ ಆಕೆಗೆ ಚೂರಿಯಿಂದ ಇರಿದಿರುವ ಘಟನೆ ನಗರದ ಲಷ್ಕರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಂಜನಗೂಡಿನ ಶ್ರೀರಾಂಪುರದ 26 ವರ್ಷದ ಯುವತಿಯೇ ಪ್ರಿಯಕರ ರಮೇಶ್ ನಿಂದ ಇರಿತಕ್ಕೊಳಗಾದ ಪ್ರೇಯಸಿ.
ಹೆಚ್.ಡಿ. ಕೋಟೆ ತಾಲೂಕಿನ ಅಂತರಸಂತೆಯ ವಾಸಿ ರಮೇಶ್ ಮೈಸೂರಿನ ಖಾಸಗಿ ಮಾಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಯುವತಿ ನಡುವೆ ಕಳೆದ ನಾಲ್ಕು ವರ್ಷಗಳಿಂದ ಪ್ರೇಮ ಅಂಕುರಿಸಿತ್ತು.
ರಮೇಶ್ ತನ್ನ ಪ್ರಿಯತಮೆಗೆ ಬರುತ್ತಿದ್ದ ಮೆಸೇಜ್ ಗಳನ್ನು ತನ್ನ ಮೊಬೈಲ್ ಗೆ ಬರುವಂತೆ ಮಾಡಿಕೊಂಡಿದ್ದ.
ಆಕೆ ಕೆಲವು ಯುವಕರೊಂದಿಗೆ ಚಾಟ್ ಮಾಡಿದ್ದರಿಂದ ರಮೇಶ್ ಆಕೆ ನಡತೆಯ ಬಗ್ಗೆ ಶಂಕೆ ವ್ಯಕ್ತಪಡಿಸಿ ಪ್ರೇಯಸಿಯನ್ನು ಕರೆಸಿಕೊಂಡು ನಗರದ ಶ್ರೀ ಹರ್ಷ ರಸ್ತೆಯಲ್ಲಿ ಚಾಕುವಿನಿಂದ ಇರಿದಿದ್ದಾನೆ ಎಂದು ತಿಳಿದು ಬಂದಿದೆ.
ಗಾಯಗೊಂಡಿರುವ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಾರ್ವಜನಿಕರು ರಮೇಶ್ ನನ್ನು ಪೆÇಲೀಸರಿಗೆ ಒಪ್ಪಿಸಿದ್ದಾರೆ.
ಲಷ್ಕರ್ ಪೊಲೀಸರು ರಮೇಶ್ ನನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.