ಡಾ. ರಾಜ್ ಕುಮಾರ್ ವ್ಯಕ್ತಿ ಯಲ್ಲ, ಶಕ್ತಿ – ಆರ್. ರಘು

ಮೈಸೂರು: ಡಾ. ರಾಜ್ ಕುಮಾರ್ ಅವರೊಬ್ಬ ವ್ಯಕ್ತಿ ಯಲ್ಲ, ಶಕ್ತಿ ಎಂದು ಡಿ. ದೇವರಾಜ್ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಅಧ್ಯಕ್ಷ ಆರ್ ರಘು ಅವರು ಹೇಳಿದರು.
ಕರ್ನಾಟಕ ಸೇನಾ ಪಡೆ ವತಿಯಿಂದ ಮೈಸೂರಿನ ಪತ್ರಕರ್ತರ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಡಾ. ರಾಜ್ ಕುಮಾರ್ ರವರ ಜಯಂತಿ ಅಂಗವಾಗಿ ಡಾ. ರಾಜ್ ಉತ್ಸವ ಕಾರ್ಯಕ್ರಮವನ್ನು ಆರ್. ರಘು ಕೌಟಿಲ್ಯರವರು ಉದ್ಘಾಟಿಸಿ ಮಾತನಾಡಿದರು.
ಡಾ. ರಾಜ್ ಕುಮಾರ್ ಅವರೊಬ್ಬ ವ್ಯಕ್ತಿ ಯಲ್ಲ, ಶಕ್ತಿ. ಅವರೊಂದು ವಿಶ್ವ ವಿದ್ಯಾಲಯವಿದ್ದಂತೆ. ಸಾಮಾಜಿಕ, ಪೌರಾಣಿಕ ಎಲ್ಲಾ ತರಹದ ಪಾತ್ರಗಳಲ್ಲಿ ನಟಿಸಿ ಪ್ರತಿಯೊಂದು ಸಿನಿಮಾದಲ್ಲು ಒಂದೊಂದು ಸಂದೇಶವನ್ನು ಸಮಾಜಕ್ಕೆ ನೀಡುತ್ತಿದ್ದರು ಎಂದು ತಿಳಿಸಿದರು.
ರಾಜ್ ಕುಮಾರ್ ಅವರಿಗೆ ಕನ್ನಡದ ಬಗ್ಗೆ ಅಪಾರವಾದ ಗೌರವ, ಪ್ರೀತಿ ಕಾಳಜಿಯಿತ್ತು, ಡಾ. ರಾಜ್ ಹಾಗು ಕನ್ನಡ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರಿಗೆ ಡಾ. ರಾಜ್ ಕನ್ನಡ ಪ್ರಶಸ್ತಿಯನ್ನು ಅಖಿಲ ಕರ್ನಾಟಕ ಡಾ. ರಾಜ್ ಕುಮಾರ್ ಅಭಿಮಾನಿ ಬಳಗದ ಸಂಸ್ಥಾಪಕ ರಾಮೇಗೌಡರವರು ಪ್ರದಾನ ಮಾಡಿದರು.
ಡಾ. ನರಸಿಂಹೇಗೌಡ ಬಿ. ಹೆಚ್ ಸತೀಶ್ ಗೌಡ, ಭರತ್ ಎಂ. ಗೌಡ, ಮಡ್ಡೀಕೆರೆ ಗೋಪಾಲ್, ಲಯನ್ಸ್ ಗಿರೀಶ್ ಅವರುಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಬಿ ಆರ್ ನಟರಾಜ್ ಜೋಯಿಸ್ ರವರು ವಹಿಸಿದ್ದರು. ಸ್ವಾಗತ ಮತ್ತು ಪ್ರಾಸ್ತಾವಿಕ ಭಾಷಣ ವನ್ನು ಕರ್ನಾಟಕ ಸೇನಾ ಪಡೆ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ಮಾಡಿದರು. ಪ್ರಭುಶಂಕರ್ ಎಂ ಬಿ, ಬಂಗಾರಪ್ಪ, ಪ್ರಜೀಶ್ ಪಿ, ಗೊರೂರು ಮಲ್ಲೇಶ್, ಮಂಜುನಾಥ್, ದರ್ಶನ್ ಗೌಡ, ಶಾಂತರಾಜೇಅರಸ್ ಪಿ ರವರು ಉಪಸ್ಥಿತರಿದ್ದರು.