ಮೈಸೂರು: ಸೋಮವಾರ ಮೈಸೂರಲ್ಲಿ 1,563 ಕೊರೊನಾ ವೈರಸ್ ಸೋಂಕಿನ ಪಾಸಿಟಿವ್ ಪ್ರಕರಣಗಳು ಪತ್ತೆ ಆಗಿದೆ.
ಒಟ್ಟು ಮೈಸೂರಿನಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ 68,255ಕ್ಕೇರಿದೆ.
702 ಕೊರೊನಾ ವೈರಸ್ ಸೋಂಕಿತರು ಸೋಮವಾರ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
ಮೈಸೂರಿನಲ್ಲಿ ಈವರೆಗೂ 61,201 ಮಂದಿ ಕೊರೊನಾ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.
ಸಕ್ರಿಯ ಪ್ರಕರಣಗಳ ಸಂಖ್ಯೆ 5,894ಕ್ಕೆ ಇಳಿಕೆ.
ಮೈಸೂರಿನಲ್ಲಿ ಸೋಮವಾರ 7 ಮಂದಿ ಕೊರೊನಾ ಸೋಂಕಿತರು ಸಾವನ್ನಪ್ಪಿದ್ದಾರೆ.
ಈ ವರೆಗೂ ಮೈಸೂರಲ್ಲಿ ಕೊರೊನಾಗೆ 1,160 ಮಂದಿ ಬಲಿ ಆಗಿದ್ದಾರೆ.