ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ರಾತ್ರೋರಾತ್ರಿ ಖಾಲಿಯಾದ ಆಕ್ಸಿಜನ್ ಗೊ ಅಥವಾ ಸರಬರಾಜಿನಲ್ಲಿ ಆದ ತಾಂತ್ರಿಕ ತೊಂದರೆಯಿಂದಲೊ 22ಕ್ಕೂ ಹೆಚ್ಚು ರೋಗಿಗಳು ಸಾವನ್ನಪ್ಪಿರೋ ಹೃದಯ ವಿದ್ರಾವಕ ಘಟನೆ ಚಾಮರಾಜನಗರ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.
ಚಾಮರಾಜನಗರ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಸರಿಸುಮಾರು 11.40 ರಿಂದ 12-20ರ ಸರಿಸುಮಾರಿನಲ್ಲಿ ಆಕ್ಸಿಜನ್ ಖಾಲಿಯಾಗಿದೆ ಎಂಬ ನಿಖರ ಮಾಹಿತಿ ದೊರೆಯುತ್ತಿದೆ.
ಸದರಿ ಜಿಲ್ಲಾಡಳಿತ ಮಾತ್ರ ಸಮಸ್ಯೆ ಉಂಟಾಗಿಲ್ಲ ಎಂದು ಸರ್ಕಾರದ ಪರವಾಗಿ ಬ್ಯಾಟಿಂಗ್ ಬೀಸುತ್ತಿದ್ದಾರೆ.
ಸ್ಥಳೀಯ ಶಾಸಕ ಪುಟ್ಟರಂಗಶೆಟ್ಟಿ ಅವರು ಹೇಳಿರುವಂತೆ ಆಕ್ಸಿಜನ್ ಸಮಸ್ಯೆ ಉಂಟಾಗಿರೊದರಿಂದಲೆ ಸಾವಾಗಿದೆ ಎಂದು ತಿಳಿಸಿದ್ದಾರೆ. ರೋಗಿಗಳ ಕುಟುಂಬದವರು ರಾತ್ರಿ ಆದ ಸಮಸ್ಯೆಗೆ ಪೂರಕ ಎಂಬಂತೆ ಟವಲ್, ಪೇಪರ್ ಗಳಲ್ಲಿ ರೋಗಿಗಳಿಗೆ ಗಾಳಿ ಬೀಸಿತ್ತಿರುವ ವಿಡಿಯೋ ಕೂಡ ವೈರಲ್ ಆಗಿದ್ದು ಪೂರಕ ಸಾಕ್ಷಿಯಾಗಿದೆ.
ನ್ಯಾಯಾಂಗ ತನಿಖೆಯಾಗಲಿ: ಒಂದೆಡೆ ಆಕ್ಸಿಜನ್ ಖಾಲಿಯಾಗಿಲ್ಲ ಎಂದು ಜಿಲ್ಲಾಡಳಿತ ಸ್ಪಷ್ಟನೆ ನೀಡಿ ಜಾರಿಕೊಂಡಿದ್ದು.
ರೋಗಿಗಳ ಪೆÇೀಷಕರು ಆಕ್ಸಿಜನ್ ಕೊರತೆ ಇಂದಲೆ ಸಾವನ್ನಪ್ಪಿದ್ದಾರೆ ಎನ್ನುತ್ತಿರುವ ಆರೋಪ ಪ್ರತ್ಯಾರೋಪಗಳನ್ನ ಕೂಲಂಕುಶವಾಗಿ ತನಿಖೆ ನಡೆಸಲು ನ್ಯಾಯಾಂಗ ವ್ಯವಸ್ಥೆಯಿಂದ ಮುಂದಾಗಬೇಕಾಗಿದೆ.
ನ್ಯಾಯಾಂಗ ವ್ಯವಸ್ಥೆ ತನಿಖೆ ನಡೆಸಿ, ಆಕ್ಸಿಜನ್ ಪ್ರಮಾಣ ಯಾವಾಗ ಖಾಲಿಯಾಯಿತು. ಎಷ್ಟು ರೋಗಿಗಳಿಗೆ ಸರಬರಾಜಾಗಿದೆ. ಆ ಸಾವಿಗೆ ನಿಖರ ಮಾಹಿತಿ ಎಲ್ಲವನ್ನ ಕಲೆ ಹಾಕಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕಾಗಿದೆ.