ಮೈಸೂರು: ಮಾಜಿ ಕಾಪೆರ್Çೀರೇಟರ್ ಕೆ.ವಿ. ಮಲ್ಲೇಶ್ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ವಿರುದ್ಧ ಆರೋಪ ಮಾಡಿದ್ದಾರೆ.
ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸರಕಾರದ ತಮ್ಮ ಅಧಿಕೃತ ನಿವಾಸದಲ್ಲಿ ಸ್ವಿಮ್ಮಿಂಗ್ ಫುಲ್, ಜಿಮ್ ನಿರ್ಮಾಣ ಮಾಡಿದ್ದಾರೆಂದು ಮಲ್ಲೇಶ್ ಅವರು ಆರೋಪ ಮಾಡಿದ್ದಾರೆ.
ಜಿಲ್ಲಾಧಿಕಾರಿಗಳು ವಾಸವಿರುವ ಜಲದರ್ಶಿನಿ ಅತಿಥಿ ಗೃಹ ಪಾರಂಪರಿಕ ಕಟ್ಟಡವಾಗಿದೆ. ಇಲ್ಲಿ ಸ್ಮಿಮ್ಮಿಂಗ್ ಫುಲ್, ಜಿಮ್ ನಿರ್ಮಿಸಲು ಅನುಮತಿ ಪಡೆದಿದ್ದಾರಾ ಎಂದವರು ಪ್ರಶ್ನಿಸಿದರು.
ಸ್ಮಿಮ್ಮಿಂಗ್ ಫುಲ್ ನಿರ್ಮಾಣಕ್ಕೆ ಸರ್ಕಾರದ ಅನುದಾನ ಬಳಸಿದ್ದೀರಾ? ಅಥವಾ ಬೇರೆಯವರ ಸಹಾಯ ಪಡೆದಿದ್ದೀರಾ? ಎಂದು ಮಲ್ಲೇಶ್ ಪ್ರಶ್ನಿಸಿದ್ದಾರೆ.