ಕೋವಿಡ್ ಚಿಕಿತ್ಸೆಗೆ ಸಹಕರಿಸುತ್ತಿರುವ ಆಸ್ಪತ್ರೆಗಳಿಗೆ ಧನ್ಯವಾದ; ಸಹಕಾರ ನೀಡದ ಆಸ್ಪತ್ರೆಗಳಿಗೆ ನೋಟೀಸ್ -ಸಚಿವ ಎಸ್ ಟಿಎಸ್

ಮೈಸೂರು: ಕೋವಿಡ್ ಚಿಕಿತ್ಸೆಗೆ ಶೇ. 50ರಷ್ಟು ಬೆಡ್ ನೀಡಬೇಕಾಗಿರುವ 34 ಖಾಸಗಿ ಆಸ್ಪತ್ರೆಗಳಿಗೆ ಅಧಿಕಾರಿಗಳ ತಂಡ ಖುದ್ದು ಭೇಟಿ ನೀಡಿ, ಲಭ್ಯವಿರುವ ಹಾಸಿಗೆ ಸಾಮಥ್ರ್ಯದ ನಿಖರವಾದ ವಿವರ ನೀಡುವಂತೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ಸೂಚನೆ ನೀಡಿದರು.
ಒಬ್ಬರು ಕಂದಾಯ ಇಲಾಖೆ ಅಧಿಕಾರಿ, ಪೆÇಲೀಸ್ ಅಧಿಕಾರಿ ಹಾಗೂ ವೈದ್ಯರನ್ನು ಒಳಗೊಂಡ ತಂಡ ಎಲ್ಲಾ 34 ಆಸ್ಪತ್ರೆಗಳಿಗೆ ಭೇಟಿ ನೀಡಿ, ಶೇ. 50ರಷ್ಟು ಹಾಸಿಗೆಯನ್ನು ನೀಡುವ ಆದೇಶ ಪಾಲಿಸುತ್ತಿದ್ದಾರಾ ಪರಿಶೀಲನೆ ಮಾಡಬೇಕು ಎಂದು ಮಂಗಳವಾರ ಜಿಲ್ಲಾ ಪಂಚಾಯತಿಯಲ್ಲಿ ನಡೆದ ಕೋವಿಡ್ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವರು ಹೇಳಿದರು.
ಹಲವಾರು ಆಸ್ಪತ್ರೆಗಳು ಕೋವಿಡ್ ಚಿಕಿತ್ಸೆಗೆ ಉತ್ತಮ ಸ್ಪಂದನೆ ನೀಡುತ್ತಿವೆ. ಅವರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ. ಸಹಕಾರ ನೀಡದಿರುವ ಅಸ್ಪತ್ರೆಗಳಿಗೆ ನೋಟೀಸ್ ನೀಡಬೇಕು ಎಂದು ಹೇಳಿದರು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ನಡೆಯುತ್ತಿರುವ ತುಳಸಿದಾಸ್ ಆಸ್ಪತ್ರೆ, ಬಿಡಿ ಕಾರ್ಮಿಕರ ಕಾಲೋನಿಯ ಆಸ್ಪತ್ರೆ ಹಾಗೂ ಇತ್ತೀಚೆಗೆ ಲೋಕಾರ್ಪಣೆಗೊಂಡ ಸೂಪರ್ ಸ್ಪೆಷಲಿಟಿ ಆಸ್ಪತ್ರೆಗಳಿಲ್ಲಿ ಆಮ್ಲಜನಕಯುಕ್ತ ಹಾಸಿಗೆ ಸಾಮಥ್ರ್ಯವನ್ನು ಹೆಚ್ಚಿಸಿದರೆ ಸಮಸ್ಯೆ ನಿವಾರಿಸಬಹುದು ಎಂದರು.
ಕೆ.ಆರ್.ಆಸ್ಪತ್ರೆಯಲ್ಲಿ ರೋಗಿಯ ಪಾಲಕರು(ಅಟೆಂಡರ್) ಹೆಚ್ಚಿನ ಸಂಖ್ಯೆಯಲ್ಲಿ ತುಂಬಿಕೊಳ್ಳುತ್ತಿದ್ದಾರೆ. ಇದರಿಂದ ಕೋವಿಡ್ ಪ್ರಕರಣಗಳು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಕೋವಿಡ್ ರೋಗಿಗೆ ಅಟೆಂಡರ್ ಬಾರದಂತೆ ನೋಡಿಕೊಂಡರೆ ಸೋಂಕು ಹರಡುವುದು ತಪ್ಪುತ್ತದೆ ಎಂದರು.
ವಾರ್ ರೂಂ ಗೆ ಮೈಸೂರು ಜಿಲ್ಲೆಯವರಲ್ಲದೆ ಅಕ್ಕಪಕ್ಕದ ಜಿಲ್ಲೆಯವರು ಸಹ ಕರೆ ಮಾಡುತ್ತಿದ್ದು, ಇದರಿಂದ ಸಾಮಾನ್ಯವಾಗಿ ಒತ್ತಡ ಉಂಟಾಗುತ್ತಿದೆ. ಅದಕ್ಕಾಗಿ ಹೆಚ್ಚಿನ ಲೈನ್ ಗಳನ್ನು ತೆರೆಯಲು ಅಧಿಕಾರಿಗಳಿಗೆ ಸೂಚಿಸಿದರು.